ವಾರಣಾಸಿಯಿಂದ ಚುನಾವಣಾ ಕಣಕ್ಕೆ ಹಾಸ್ಯ ಕಲಾವಿದ ಶ್ಯಾಮ್ ರಂಗೀಲಾ; ಮೋದಿಯವರಿಗೆ ಸಡ್ಡು ಹೊಡೆಯಲಿದ್ದಾರೆ ಶಾಮಣ್ಣ..

ಹಾಸ್ಯ ಕಲಾವಿದನ ಸಂಕಲ್ಪ, ಪ್ರಧಾನಿ ವಿರುದ್ಧ ಸ್ಪರ್ಧೆ
ಪ್ರಧಾನಿ ಹಾಸ್ಯದ ವಿರೋಧಿ ಎಂದು ಈ ಸ್ಪರ್ಧೆಯೇ ?
ಮೋದಿಯವರನ್ನು ನಗಿಸಲು ಸ್ಪರ್ಧಿಸುತ್ತಿದ್ದಾರೆಯೆ ?

ಹಿಂದಿಯ ಖ್ಯಾತ ಹಾಸ್ಯ ಕಲಾವಿದ ಶ್ಯಾಮ್ ರಂಗೀಲಾ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾರಣಾಸಿಯಿಂದ ಚುನಾವಣೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ತಾವು ನಾಮ ಪತ್ರ ಸಲ್ಲಿಸುವುದು ಯಾವಾಗ ಎನ್ನುವುದನ್ನು ತಿಳಿಸುವುದಾಗಿಯೂ ಅವರು ಹೇಳಿದ್ದಾರೆ,
ಶ್ಯಾಮ್ ರಂಗೀಲಾ ಹಿಂದಿ ರಾಜ್ಯಗಳಲ್ಲಿ ಜನಪ್ರಿಯ ವ್ಯಕ್ತಿ. ಅವರ ಹಾಸ್ಯ ಕಾರ್ಯಕ್ರಮಗಳಿಗೆ ಭಾರಿ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಶ್ಯಾಮ್ ಚುನಾವಣೆಗೆ ನಿಲ್ಲುವ ತಮ್ಮ ಇರಾದೆಯನ್ನು ಅವರು ಪ್ರಕಟಿಸುತ್ತಿದ್ದಂತೆ ಇದೊಂದು ಜೋಕ್ ಎಂದು ಬಹಳ ಜನ ಅಂದುಕೊಂಡಿದ್ದೂ ಉಂಟು, ಇದಕ್ಕೆ ಅವರು ವಿವರಣೆ ನೀಡಿದ್ದಾರೆ. ನಾನು ಚುನಾವಣೆಗೆ ನಿಂತೇ ನಿಲ್ಲುತ್ತೇನೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ಶ್ಯಾಮ ರಂಗೀಲಾ ಯಾಕೆ ಪ್ರಧಾನಿ ವಿರುದ್ಧವೇ ಚುನಾವಣೆಗೆ ನಿಲ್ಲಲು ಹೊರಟಿದ್ದಾರೆ ಎಂಬ ಬಗ್ಗೆ ಈಗಾಗಲೇ ಚರ್ಚೆ ಪ್ರಾರಂಭವಾಗಿದೆ.
ಮೊದಲನೆಯದಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಸ್ಯ ಪ್ರಜ್ನೆ ಕಡಿಮೆ. ಅವರು ಹಾಸ್ಯವನ್ನು ಹೆಚ್ಚು ಇಷ್ಟಪಡುವುದಿಲ್ಲ ಇದೂ ಸಹ ಹಾಸ್ಯ ಕಲಾವಿದರೊಬ್ಬರು ಚುನಾವಣೆಗೆ ನಿಲ್ಲುವ ತೀರ್ಮಾನ ಕೈಗೊಂಡಿರುವುದಕ್ಕೆ ಕಾರಣ ಇರಬಹುದು.
ಹಾಗೆ ಹಾಸ್ಯ ಮಾಡಿದರೆ ಅದು ತಮ್ಮ ವಿರುದ್ಧ ಮಾಡಿರುವ ಹಾಸ್ಯ ಎಂದು ಅಧಿಕಾರದಲ್ಲಿ ಇರುವವರುಗೆ ಅನ್ನಿಸುತ್ತದೆ. ಈ ಮನಸ್ಥಿತಿಯನ್ನು ವಿರೋಧಿಸಲು ಅವರು ಚುನಾವಣೆ ಸ್ಪರ್ಧಿಸಲು ತೀರ್ಮಾನಿಸಿರಬಹುದು.

Author

Leave a Reply

Your email address will not be published. Required fields are marked *