ಮುಂಬರುವ ಲೋಕಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಇಂದು ಪ್ರಕಟಿಸಿತು. ಮುಖ್ಯ ಚುನಾವಣಾ ಆಯುಕ್ತರ ಪ್ರಕಾರ ದೇಶದಲ್ಲಿ ೭ ಹಂತಗಳಲ್ಲ್ಇ ಚುನಾವಣೆ ನಡೆಯಲಿದೆ..
ಮೊದಲ ಹಂತದ ಚುನಾವಣೆ ೨೬ ರಂದು ನಡೆದರೆ ಕೊನೆಯ ಹಂತದ ಮತದಾನ ಜೂನ್ ಒಂದರಂದು ನಡೆಯಲಿದೆ. ಜೂನ್ ನಾಲ್ಕರಂದು ಫಲಿತಾಂಶ ಪ್ರಕಟವಾಗಲಿದೆ,
ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ರಾಜ್ಯದ ೨೮ ಕ್ಷೇತ್ರಗಳ ಮತದಾನ ಏಪ್ರಿಲ್ ೨೬ ಮತ್ತು ಮೇ ೭ ಕ್ಕೆ ಮುಗಿಯಲಿದೆ,
ಚುನಾವಣಾ ನೀತಿ ಸಂಹಿತೆ ಇಂದಿನಿಂದಲೇ ಜಾರಿಗೆ ಬರಲಿದೆ.







