ರಮೇಶ್ ಕತ್ತಿ ಪಕ್ಷಕ್ಕೆ ಸೆಳೆಯಲು ಕಾಂಗ್ರೆಸ್ ಯತ್ನ ?

ಬೆಳಗಾವಿ ರಾಜಕಾರಣ ಎಂದರೆ ಅದು ಸಾಹುಕಾರರ ರಾಜಕಾರಣ. ಅಲ್ಲಿ ಇರುವ ಬಹುತೇಕ ನಾಯಕರು ಸಾಹುಕಾರರು ಎಂದೇ ಗುರುತಿಸಲ್ಪಡುತ್ತಿರುವವರು.. ಇಂತಹ ಸಾಹುಕಾರರಲ್ಲಿ ದಿವಂಗತ ಉಮೇಶ್ ಕತ್ತಿ ಅವರ ಸಹೋದರ ರಮೇಶ ಕತ್ತಿ ಕೂಡ ಒಬ್ಬರು.

ಉಮೇಶ್ ಕತ್ತಿ ಅವರ ಅಕಾಲಿಕ ನಿಧನದ ನಂತರ ರಮೇಶ್ ಕತ್ತಿ ಅವರ ರಾಜಕೀಯ ಪುನರ್ವಸತಿ ಆಗಬಹುದು ಎಂದು ನಂಬಲಾಗಿತ್ತು. ಆದರೆ ಕಮಲ ಪಡೆ ಅವರಿಗೆ ಪುನರ್ವಸತಿ ಕಲ್ಪಿಸಲೇ ಇಲ್ಲ…
ರಮೇಶ್ ಕತ್ತು ಚಿಕ್ಕೋಡಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಢಿಸಲು ಬಯಸಿದ್ದರು. ಆದರೆ ಅವರಿಗೆ ಟಿಕೆಟ್ ದೊರಕಲೇ ಇಲ್ಲ. ಹೀಗಾಗಿ ಅವರು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ.

ಬೆಳಗಾವಿಯ ಕಾಂಗ್ರೆಸ್ ಪಕ್ಷದಲ್ಲೂ ಎಲ್ಲವೂ ಸಲೀಸಾಗಿಲ್ಲ. ಸತೀಷ್ ಜಾರಕೀಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳಕರ್ ನಡುವಿನ ವೈಮನಸ್ಸು ಹಾಗೆ ಇದೆ. ಇದು ಟಿಕೆಟ್ ಹಂಚಿಕೆಯಲ್ಲಿ ಸಮಸ್ಯೆಯನ್ನು ಸೃಷ್ಟಿಸಿದೆ.
ಈ ಸಮಸ್ಯೆಯನ್ನು ಬಗೆ ಹರಿಸಲು ರಮೇಶ್ ಕತ್ತಿ ಕಾರಣರಾಗಬಲ್ಲರೆ ? ಅವರನ್ನು ಕಾಂಗ್ರೆಸ್ ಗೆ ಶೆರಿಸಿಕೊಂಡರೆ ಸಮಸ್ಯೆ ಬಗೆಹರಿಯಬ್ಬಲ್ಲದೇ ?
ಈ ಬಗ್ಗೆ ಯೋಚಿಸುತ್ತಿರುವ ಕಾಂಗ್ರೆಸ್ ನಾಯಕತ್ವ ತನ್ನ ಯತ್ನವನ್ನು ಮುಂದುವರಿಸಿದೆ ಂಎಬುದು ಮೂಲ ಒಂದರ ಹೇಳಿಕೆ.

Author

error: