ಮ್ಯಾಚ್ ಅಂದ್ರೆ ಇದು.. ರಾಜಸ್ಥಾನ್ ರಾಯಲ್ಸ್ ವಿರುದ್ಧ ಮಿಂಚಿದ ಹೈದರಾಬಾದ್ 1 ರನ್ ಜಯ!

SRH vs RR highlights IPL 2024 : ಗೆಲುವಿನ ಸನಿಹದಲ್ಲಿದ್ದ ರಾಜಸ್ಥಾನ್ ತಂಡ 7 ವಿಕೆಟ್ ನಷ್ಟಕ್ಕೆ 20 ಓವರ್ ಗಳಲ್ಲಿ 200 ರನ್ ಗಳಿಸುವ ಮೂಲಕ 1 ರನ್ ಗಳ ಅಂತರದಿಂದ ಸೋಲೊಪ್ಪಿಕೊಂಡಿತು

ಹೈದರಾಬಾದ್ : ಕ್ರಿಕೆಟ್ ನ ಅದ್ಭುತ ಎಂದರೆ ಅದೇ. ಅದು ಅನಿರಿಕ್ಷಿತ ತಿರುವು ಮತ್ತು ಫಲಿತಾಂಶ.. ಅದರಲ್ಲೂ ಟಿ ಟ್ವೆಂಟಿಯಲ್ಲಿನ ತೋಚಕತೆಯೇ ಬೇರೆ. ನಿನ್ನೆ ಕೂಡ ಆದದ್ದೂ ಅದೇ. ಕೇವಲ ಒಂದು ರನ್ ಜಯ… ಹೈದರಾಬಾದ್ ತಂಡ ಆತಿಥೇಯ ರಾಜಸ್ಥಾನ್ ವಿರುದ್ಧ 1 ರನ್ ನಿಂದ ಜಯಗಳಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತ್ತು. ಟ್ರಾವಿಸ್ ಹೆಡ್ 44 ಎಸೆತಗಳಲ್ಲಿ 58 ರನ್ ಗಳಿಸಿದರೆ, ಅಭಿಷೇಕ್ ಶರ್ಮಾ (12 ರನ್) ಅನ್ಮೋಲ್ಪ್ರೀತ್ ಸಿಂಗ್ (5 ರನ್) ನಿತೀಶ್ ರೆಡ್ಡಿ (76 ರನ್) ಹೆನ್ರಿಕ್ ಕ್ಲಾಸೆನ್ (42) ರನ್ ಗಳಿಸಿದರು. ನಿತೀಶ್ ರೆಡ್ದಿಯ ಬ್ಯಾಂಟಿಂಗ್ ಮನಮೋಹಕವಾಗಿತ್ತು.

ಈಗ ಭಾರತ ತಂಡದಲ್ಲಿ ಆಡಲಿರುವ ಯಶಸ್ವಿ ಜೈಸ್ವಾಲ್ (67 ರನ್) ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು . ಆದರೆ ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ ಸೊನ್ನೆ ಸುತ್ತಿ ರಾಜಸ್ಥಾನಕ್ಕೆ ಹೊಡೆತ ನೀಡಿದರು. ರಿಯಾನ್ ಪರಾಗ್ 77 ರನ್ ಗಳಿಸಿ ಮತ್ತೆ ತಂಡದ ಗೆಲುವಿನ ಆಸೆ ಜೀವಂತವಾಗಿರಿಸಿದರು.

ಆದರೆ ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ವೈಫಲ್ಯದಿಂದಾಗಿ, ಗೆಲುವಿನ ಸನಿಹದಲ್ಲಿದ್ದ ರಾಜಸ್ಥಾನ್ ತಂಡ 7 ವಿಕೆಟ್ ನಷ್ಟಕ್ಕೆ 20 ಓವರ್ ಗಳಲ್ಲಿ 200 ರನ್ ಗಳಿಸುವ ಮೂಲಕ 1 ರನ್ ಗಳ ಅಂತರದಿಂದ ಸೋಲೊಪ್ಪಿಕೊಂಡಿತು.

ಹೈದರಾಬಾದ್ ತಂಡದ ಪರ 41 ರನ್ ಗಳನ್ನು ನೀಡಿ 3 ವಿಕೆಟ್ ಗಳಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

Author

error: