ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಹುಟ್ಟು ಹಬ್ಬ. ಅಭಿಮಾನಿಗಳಿಗೆ ಸಂಭ್ರಮ. ನಿನ್ನೆ ರಾತ್ರಿಯಿಂದಲೇ ಅವರ ಮನೆ ಬಳಿ ಅಭಿಮಾನಿಗಳ ದೌಡು. ತಮ್ಮ ಮೆಚ್ಚಿನ ನಟನಿಗೆ ಶುಭಾಷಯ ಕೋರುವ ಆಸೆ. ಅವರನ್ನು ಕಣ್ಣು ತುಂಬಿಕೊಳ್ಳುವ ಸಂತಸದ ಸಮಯ.. ಅಲ್ಲುಗೆ ಈಗ 42 ನೆಯ ಹುಟ್ಟುಹಬ್ಬ.
ಅಲ್ಲು ಅರ್ಜುನ್ ಈಗ ಕೇವಲ ತೆಲುಗಿಗೆ ಮಾತ್ರ ಸೀಮಿತವಾಗಿಲ್ಲ. ಅವರು ದೇಶದ ಸಿನಿಮಾ ಪ್ರಿಯರ ಪುಷ್ಪ. ಆಲ್ ಇಂಡಿಯಾ ಸ್ಟಾರ್.
ಪುಷ್ಪ ಸಿನಿಮಾ ಮೂಲಕ ತಮ್ಮ ಅಭಿಮಾನಿಗಳ ಮನಗೆದ್ದ ಅವರು ಈಗ ಪುಷ್ಪ-2 ಸಿನಿಮಾ ಸಿದ್ದತೆಯಲ್ಲಿದ್ದಾರೆ. ಈ ಸಿನಿಮಾದ ಟೀಸರ್ ಅವರ ಹುಟ್ಟು ಹಬ್ಬದಂದೇ ಬಿಡುಗಡೆಯಾಗಲಿದೆ. ಇದಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಭಾರತದ ಚಿತ್ರರಂಗದಲ್ಲಿ ಪುಷ್ಫ ದಾಖಲೆ ಬರೆದ ಸಿನಿಮಾ. ಇದಕ್ಕಾಗಿಯೇ ಪುಷ್ಪ 2 ಕ್ಕಾಗಿ ಕುತೂಹಲ ಹೆಚ್ಚಿದೆ. ಈ ಸಿನಿಮಾದ ಕಥೆ ಏನಾಗಿರಬಹುದು ? ಎಂಬ ಕುತೂಹಲವೂ ಮನೆ ಮಾಡಿದೆ.
