ಧರ್ಮಶಾಲಾ : ಇಂದು ಪಂಜಾಬ್ ಮತ್ತು ಚೆನ್ನೈ ನಡುವೆ ಪಂದ್ಯ ನಡೆದಿದ್ದು ಧರ್ಮ ಶಾಲಾದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದು ಚೆನ್ನೈ. ನಿಗದಿತ 20 ಓವರ್ ಗಳಲ್ಲಿ 168 ರನ್ ಗಳ ಗುರಿಯನ್ನು ಪಂಜಾಬ್ ಗೆ ನೀಡಿತು. ಇದು ಅಂತಹ ದೊಡ್ದ ಮೊತ್ತ ಅಲ್ಲದಿದ್ದರೂ ಧರ್ಮ ಶಾಲಾ ಪಿಚ್ ನಲ್ಲಿ ಬ್ಯಾಟಿಂಗ್ ಮಾಡುವುದು ಅಂತಹ ಸುಲಭದ ಮಾತಾಗಿರಲಿಲ್ಲ.
ನಂತರ ಆದದ್ದು ಅದೇ, 168 ರನ್ ಗಳ ಗುರಿ ಬೆನ್ನು ಹತ್ತಿದ ಪಂಜಾಬ್ ಯಾವ ಹಂತದಲ್ಲೂ ಚೇತರಿಸಿಕೊಳ್ಳಲಿಲ್ಲ. ಅಂತಿಮವಾಗಿ 9 ವಿಕೆಟ್ ನಷ್ಟಕ್ಕೆ 139 ರನ್ ಗಳನ್ನು ಮಾತ್ರ ಗಳಿಸಲು ಪಂಜಾಬ್ ಗೆ ಸಾಧ್ಯವಾಯಿತು.
ಪಂಜಾಬ್ ತಂಡದ ಪರವಾಗಿ ಪ್ರಭಸಿಮ್ರಾನ್ 30, ಶಶಾಂಕ್ ಸಿಂಗ್ 27 ರನ್ ಗಳಿಸಿದರು. ರವೀಂದ್ರ ಜಡೇಜಾ 47 ರನ್ ಕೊಟ್ಟು 3 ವಿಕೆಟ್ ಪಡೆದು ಆಲ್ ರೌಂಡ್ ಪ್ರದರ್ಶನ ನೀಡಿದರು.






