ಬೆಂಗಳೂರು : ಇದೇ ನವೆಂಬರ್ 15 ರಿಂದ 18 ರವರೆಗೆ 8ನೇ ರೈತಸ್ನೇಹಿ ಮಲ್ಲೇಶ್ವರ ಕಡಲೆಕಾಯಿ ಪರಿಷೆ ಹಾಗೂ ಕನ್ನಡ ರಾಜ್ಯೋತ್ಸವ ಸ್ವಾಭಿಮಾನ ಆಚರಣೆ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಕಾಡುಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷರು ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಬಿ ಕೆ ಶಿವರಾಂ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಮಾಜಿ ಕೇಂದ್ರ ಸಚಿವರಾದ ವೀರಪ್ಪ ಮೊಯ್ಲಿ ಅವರು ಉದ್ಘಾಟನೆ ಮಾಡಲಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಕೇಂದ್ರ ಸಚಿವೆ ಶೋಭ ಕರಂದ್ಲಾಜೆ, ಶಾಸಕರುಗಳಾದ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಮುನಿರತ್ನ ಅವರು ಭಾಗವಹಿಸಲಿದ್ದಾರೆ ಎಂದರು.
ಮಲ್ಲೇಶ್ವರ ಶ್ರೀ ಭ್ರಮರಾಂಭ ಸಮೇತ ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಮತ್ತು ಕಾಡುಮಲ್ಲೇಶ್ವರ ಗೆಳೆಯರ ಬಳಗ (ರಿ), ನೆಲ ಜಲ ಹಸಿರು ಸಂಸ್ಕೃತಿ ಮತ್ತು ಪರಂಪರೆ ಉಳಿಸುವ ನಮ್ಮ ಧೈಯದಲ್ಲಿ ನೀವೂ ಭಾಗಿಯಾಗಿ ಎಂದರು
ಕನ್ನಡ ನಾಡಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿಯಬೇಕು ಮುಂದಿನ ಪೀಳಿಗೆಗೆ ಅದರ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ಜನವರಿ 30, 2010ರಲ್ಲಿ ಹುಣ್ಣಿಮೆ ಹಾಡು ಕಾರ್ಯಕ್ರಮ ಆರಂಭಿಸಲಾಯಿತು 14 ವರ್ಷಗಳ ಕಾಲ ಸಾಗಿ ಬಂದಿದೆ 2024ರ ನವಂಬರ್ ತಿಂಗಳ 200ನೇ ಹುಣ್ಣಿಮೆ ಹಾಡಿನ ಕಾರ್ಯಕ್ರಮ ಸಂಭ್ರಮಾಚರಣೆ ಮಾಡಲಾಗುವುದು ಎಂದರು.
ಯಕ್ಷಗಾನ, ನಾಟಕ, ಕರ್ನಾಟಕ ಸಂಗೀತ, ಬುಡಕಟ್ಟುಗಳ ಕಲಾಪ್ರದರ್ಶನ, ವಚನಗಾಯನ, ನೃತ್ಯ ನೂರಾರು ಕಾರ್ಯಕ್ರಮಗಳ ಹುಣ್ನಿಮೆ ಹಾಡಿನಲ್ಲಿ ಕಲಾವಿದರು ಕಲಾ ಪ್ರದರ್ಶನ ಮಾಡಿದ್ದಾರೆ. ಜನರಿಗೆ ಅರಿವು ಮೂಡಿಸುವ ಜೊತೆಯಲ್ಲಿ ಕಲಾವಿದರಿಗೂ ಪ್ರೋತ್ಸಹ, ಸಹಕಾರ ನೀಡಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆಯಂತೆ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ಪ್ರಸಿದ್ದಿ ಪಡೆದಿದೆ. ಕಳೆದ 8 ವರ್ಷಗಳಿಂದ ಕಡಲೆಕಾಯಿ ಪರಿಷೆ ಕಾರ್ಯಕ್ರಮ ಯಶ್ವಸಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ನಾಲ್ಕು ದಿನಗಳ ಕಡಲೆಕಾಯಿ ಪರಿಷೆಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣದಿಂದ ರೈತರು ಕಡಲೆಕಾಯಿ ತಂದು ಮಾರಾಟ ಮಾಡಲಿದ್ದಾರೆ, ರೈತರು, ಬೀದಿ ಬದಿಯ ವ್ಯಾಪಾರಿಗಳಿಗೆ 400ಕ್ಕೂ ಹೆಚ್ಚು ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಪರಿಸರ ಸ್ನೇಹಿ ,ಸ್ವಚ್ಚತೆಗೆ ಆದ್ಯತೆ ನೀಡಲಾಗಿದೆ, ಪ್ಲಾಸ್ಟಿಕ್ ಮುಕ್ತ, ಕೈ ಬಟ್ಟೆ ಚೀಲ, ಪೇಪರ್ ಕವರ್ ಗಳನ್ನು ಬಳಸಿ ಎಂದು ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಬಾರಿ ಕಡಲೆಕಾಯಿ ಪರಿಷೆಯಲ್ಲಿ 8 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ಸಾಧ್ಯತೆ ಇದೆ, ಸೂಕ್ತ ರಕ್ಷಣಾ ವ್ಯವಸ್ಥೆ ಮಾಡಲಾಗಿದೆ ಹಾಗೂ ಬಂದ ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ನಿರ್ವಹಿಸಲು ನೂರಾರು ಸ್ವಯಂ ಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ನವೆಂಬರ್ 15, ಶುಕ್ರವಾರ ಸಂಜೆ 6.30ಕ್ಕೆ ಹುಣ್ಣಿಮೆ ಹಾಡು-200 :
“ಹರಿದಾಸ-ಶಿವಶರಣ ಸಂಗಮ” (ಹಿಂದುಸ್ತಾನಿ – ಕರ್ನಾಟಕ ಶಾಸ್ತ್ರೀಯ ಸಂಗೀತ ಜುಗಲ್ ಬಂದಿ ಕಾರ್ಯಕ್ರಮ)
ಪಂಡಿತ್ ರವೀಂದ್ರ ಸೊರಗಾಂವಿ, ಹಿಂದುಸ್ತಾನಿ ಶಾಸ್ತ್ರೀಯ ಕಲಾವಿದರಿಂದ “ವಚನ ಗಾಯನ” ವಿದ್ವಾನ್ ಸಾಯಿತೇಜಸ್ ಚಂದ್ರಶೇಖರ್, ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದರಿಂದ
ದಾಸರ ಪದಗಳು”
ಮುಖ್ಯ ಅತಿಥಿಗಳು ಡಾ.ಅನುಸೂಯ ಕುಲಕರ್ಣಿ, ಕರ್ನಾಟಕದ ಹಿರಿಯ ಗಾನ ಕಲಾ ಭೂಷಣ
ನವೆಂಬರ್ 16, ಶನಿವಾರ ಸಂಜೆ 6.30ಕ್ಕೆ ಹುಣ್ಣಿಮೆ ಹಾಡು-201 :
ಬೆಳದಿಂಗಳ ಬೆಸದ ಹುಣ್ಣಿಮೆ ಹಾಡು 200 ರ ಸಂಭ್ರಮದಲ್ಲಿ ಚಲನಚಿತ್ರ ಸಂಗೀತ ನಿರ್ದೇಶಕರಾದ ಡಾ.ಹಂಸಲೇಖ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ
ಮುಖ್ಯ ಅತಿಥಿ; ನೇತ್ರಪಾಲ್, ಆದಾಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತರು.
ನವೆಂಬರ್ 17, ಭಾನುವಾರ ಬೆಳಗ್ಗೆ 11.00ಕ್ಕೆ ಹುಣ್ಣಿಮೆ ಹಾಡು-202 :
ಮಧು ಮನೋಹರನ್ ಮತ್ತು ಕಾರ್ತಿಕ್ ಪಾಂಡವಪುರ ತಂಡದವರಿಂದ “ಅಪರೂಪದ ಭಾವಗೀತೆಗಳ ಕಾರ್ಯಕ್ರಮ”
ಮುಖ್ಯ ಅತಿಥಿಗಳು : ಬಾಲಚಂದ್ರ, ರಾಜ್‌ಹನ್ಸ್ ಎಂಟರ್‌ಪ್ರೈಸಸ್
ಸಂಜೆ 6.30ಕ್ಕೆ ಹುಣ್ಣಿಮೆ ಹಾಡು-203 :
ಸೃಷ್ಟಿ ನಿರಂತರ ಮತ್ತು ತಂಡದವರಿಂದ “ಡಾ॥ ರಾಜ್ ನೆನಪಿನಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ”
ಮುಖ್ಯ ಅತಿಥಿಗಳು : ದೊಡ್ಡಣ್ಣ, ಹಿರಿಯ ಚಲನಚಿತ್ರ ನಟರು.
ನವೆಂಬರ್ 18, ಸೋಮವಾರ ಸಂಜೆ 4.30ಕ್ಕೆ :
ಶ್ರೀ ಭ್ರಮರಾಂಭ ಸಮೇತ ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿಯವರಿಗೆ “ಕಡಲೆಕಾಯಿ ಅಭಿಷೇಕ”
ಸಂಜೆ 6.00ಕ್ಕೆ ಹುಣ್ಣಿಮೆ ಹಾಡು-204 :
ಭಾರತದ ಪ್ರಸಿದ್ಧ ಸಾರಂಗಿ ವಾದಕರು ಹಾಗೂ ಹಿಂದುಸ್ತಾನಿ ಗಾಯಕರಾದ ಉಸ್ತಾದ್ ಫಯಾಜ್‌ಖಾನ್ ರವರಿಂದ “ಸಾರಂಗಿ ವಾದನ ಹಾಗೂ ಸಂಗೀತ ಕಾರ್ಯಕ್ರಮ
ಮುಖ್ಯ ಅತಿಥಿ: ಬಿ.ಕೆ. ಹರಿಪ್ರಸಾದ್, ವಿಧಾನಪರಿಷತ್ ಸದಸ್ಯರು
ಗಣೇಶ ಅಮೀನಗಡ, ಹಿರಿಯ ಪತ್ರಕರ್ತರು ಹಾಗೂ ಲೇಖಕರು
ಪುಸ್ತಕ ಬಿಡುಗಡೆ :
ಸಾರಂಗಿ ನಾದದ ಬೆನ್ನೇರಿ (ಉಸ್ತಾದ್ ಫಯಾಜ್ ಖಾನ್ ಜೀವನಕಥನ)
ಲೇಖಕರು : ಗಣೇಶ ಅಮೀನಗಡ, ಡಾ. ಸಿ.ಬಿ. ಚಿಲ್ಲರಾಗಿ
ಸಮಾಜ ಸೇವಕರಾದ ಅನೂಪ್ ಅಯ್ಯಂಗಾರ್, ಪದಾಧಿಕಾರಿಗಳಾದ ಚಂದ್ರಶೇಖರ್ ನಾಯ್ಡು, ಶ್ರೀವಲ್ಲಭ, ಚಂದ್ರಮೌಳಿ, ಎಲ್.ಎನ್.ಪ್ರಭು, ರಾಜಶಶಿಧರ್, ಡಾ.ಲೀಲಾ ಸಂಪಿಗೆ, ಹೇಮಂತ್ ಅವರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.






