ಕಲಬುರಗಿ: ಲೋಕಸಭೆ ಚುನಾವಣೆ ಫಲಿತಾಂಶದ ಬೆನ್ನಲ್ಲೆ ಈಶಾನ್ಯ ಕರ್ನಾಟಕ ಪದವೀಧರ ಮತ ಕ್ಷೇತ್ರದ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಪದವೀಧರ ಕ್ಷೇತ್ರದಲ್ಲೂ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವ ಈ ಮೂಲಕ ಕಾಂಗ್ರೆಸ್ ಮತ್ತೆ ಕಲ್ಯಾಣ ಕರ್ನಾಟವನ್ನು ತನ್ನ ಭದ್ರಕೋಟೆಯಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಈಶಾನ್ಯ ಕರ್ನಾಟಕ ಪದವೀಧರ ಮತ ಕ್ಷೇತ್ರದ ಹಾಲಿ ಸದಸ್ಯ ಕಾಂಗ್ರೆಸ್ ಪಕ್ಷದ ಡಾ. ಚಂದ್ರಶೇಖರ ಪಾಟೀಲ ಹುಮನಾಬಾದ ಪುನರಾಯ್ಕೆಯಾದರು.
ಪ್ರಥಮ ಪ್ರಾಶಸ್ತ್ಯದ ಮತದ ನಂತರ ನಿಗದಿಪಡಿಸಲಾದ 48,260 ಕೋಟಾ ಮತಗಳಲ್ಲಿ ಎರಡನೇ ಪ್ರಾಶಸ್ತ್ಯದ ಮತ ಗುರಿ ತಲುಪಿದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ವಿರುದ್ಧ ಚಂದ್ರಶೇಖರ ಗೆಲುವಿನ ನಗೆ ಬೀರಿದರು.
ಇನ್ನು ವಿದ್ಯಾವಂತರು ಪದವೀಧರ, ಸರ್ಕಾರಿ ನೌಕರರು, ಉನ್ನತ ಅಧಿಕಾರಿಗಳೆ ಇರುವ ಪದವೀಧರ ಚುನಾವಣೆಯಲ್ಲಿ 1.09 ಲಕ್ಷ ಮತಗಳ ಚಲಾವಣೆಯಲ್ಲಿ 12,513 ಮತಗಳು ತಿರಸ್ಕೃತಗೊಂಡಿವೆ.







