ಮೋದಿ ಅವರ ಮೀನು ವ್ಯಾಪಾರ ; ಚುನಾವಣಾ ಪ್ರಚಾರದಲ್ಲಿ ಮಾಂಸಾಹಾರವನ್ನು ಟೀಕಿಸಿದ ಪ್ರಧಾನಿ

PM Narendra Modi : ಸಸ್ಯಹಾರ ಶ್ರೇಷ್ಠ ಮಾಂಸಾಹಾರ ಕನಿಷ್ಠ ಎಂದು ಮೋದಿ ಪ್ರತಿಪಾದನೆ ಮಾಡುತ್ತಿದ್ದಾರೆ. ದೇಶದ ಪ್ರಧಾನಿ ಬಾಯಿಯಿಂದ ಇಂತಹ ಮಾತನ್ನು ಯಾರೂ ನಿರೀಕ್ಷಿಸಿರಲಿಲ್ಲ

ಈ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ರಾಮಮಂದಿರದ ಬಗ್ಗೆ ಮಾತನಾಡಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಈ 10 ವರ್ಷಗಳ ಆಡಳಿತ ಟ್ರ‍ೇಲರ್ ಮಾತ್ರ ಸಿನಿಮಾ ಇನ್ನು ಮುಂದೆ ಬರಲಿದೆ ಎಂದಿದ್ದಾರೆ.

ಈಗ ಅವರ ಭಾರತೀಯರ ಆಹಾರ ಪದ್ಧತಿಯ ಮೇಲೆ ದಾಳಿ ನಡೆಸಿದ್ದಾರೆ. ಸಸ್ಯಹಾರ ಶ್ರೇಷ್ಠ ಮಾಂಸಾಹಾರ ಕನಿಷ್ಠ ಎಂದು ಮೋದಿ ಪ್ರತಿಪಾದನೆ ಮಾಡುತ್ತಿದ್ದಾರೆ. ಇದು ನಿಜವಾಗಿಯೂ ಶಾಕಿಂಗ್..

ದೇಶದ ಪ್ರಧಾನಿ ಬಾಯಿಯಿಂದ ಇಂತಹ ಮಾತನ್ನು ಯಾರೂ ನಿರೀಕ್ಷಿಸಿರಲಿಲ್ಲ. ಈಗ ಧಾರ್ಮಿಕವಾಗಿ ಮಹತ್ವದ ತಿಂಗಳಂತೆ. ಈ ತಿಂಗಳು ಮಾಂಸಾಹಾರ ಸ್ವೀಕರಿಸಬಾರದಂತೆ. ಇದನ್ನು ಯಾವುದೋ ಪುರೋಹಿತರೋ ಜ್ಯೋತಿಷಿಗಳೋ ಹೇಳಿದ್ದರೆ ಎನೋ ಹೊಟ್ಟೆಪಾಡು ಎಂದುಕೊಂಡು ಸುಮ್ಮನಾಗಿ ಬಿಡಬಹುದಿತ್ತು. ಆದರೆ ಈ ಮಾತು ಹೇಳಿದವರು ದೇಶದ ಪ್ರಧಾನಿ.

ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಮೀನು ತಿನ್ನುವ ಒಂದು ವೀಡಿಯೋ ಹಾಕಿದ್ದರು. ರುಚಿ ರುಚಿಯಾದ ಮೀನು. ತಿನ್ನುತ್ತಿರುವವರು ತೇಜಸ್ವಿಯಾದವ್, ಇದನ್ನು ನೋಡಿ ಪ್ರಧಾನಿಯವರಿಗೆ ಏನಾಯಿತೋ ಗೊತ್ತಿಲ್ಲ. ತೇಜಸ್ವಿ ಯಾದವ್ ಅವರನ್ನೂ ಟೀಕಿಸುವ ಭರದಲ್ಲಿ ಮಾಂಸಾಹಾರವನ್ನೇ ಟೀಕಿಸಿ ಬಿಟ್ಟರು,
ಪಾಪ ಚುನಾವಣ ಪ್ರಚಾರದಲ್ಲಿ ಮೋದಿ ದಣಿದಿದ್ದಾರೆ ಮಾತು ಹಳಿ ತಪ್ಪುತ್ತಿದೆ.

Author

error: