GTTC Admission 2026: ಇಂದು ಅಧಿಸೂಚನೆ ಪ್ರಕಟ | ಅರ್ಜಿ ಹೇಗೆ? ಅರ್ಹತೆ, ಉದ್ಯೋಗ ಮಾಹಿತಿ

Government Tool Room and Training Centre (GTTC) ನಲ್ಲಿ ಪ್ರವೇಶ ಹೇಗೆ ಪಡೆಯಬೇಕು? ಅರ್ಹತೆ, ಆಯ್ಕೆ ವಿಧಾನ, ಕೋರ್ಸ್‌ಗಳು, ಸರ್ಕಾರಿ ಹಾಗೂ ಖಾಸಗಿ ಉದ್ಯೋಗ ಅವಕಾಶಗಳ ಸಂಪೂರ್ಣ ಮಾಹಿತಿ ಕನ್ನಡದಲ್ಲಿ ಓದಿ.

Government Tool Room and Training Centre (GTTC) ವತಿಯಿಂದ ಇಂದು ಹೊಸ ಪ್ರವೇಶ ಅಧಿಸೂಚನೆ ಪ್ರಕಟಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಅರ್ಜಿ ದಿನಾಂಕ, ಅರ್ಹತೆ, ಕೋರ್ಸ್ ವಿವರಗಳನ್ನು ಪರಿಶೀಲಿಸಿ ತಕ್ಷಣ ಅರ್ಜಿ ಸಲ್ಲಿಸಬಹುದು.

ಸರ್ಕಾರಿ ಟೂಲ್ ರೂಂ ಮತ್ತು ತರಬೇತಿ ಕೇಂದ್ರ (GTTC): ಯುವಕರಿಗೆ ಉದ್ಯೋಗದ ಬಾಗಿಲು ತೆರೆದಿರುವ ಸುವರ್ಣಾವಕಾಶ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪದವಿ ಪಡೆದರೂ ಉದ್ಯೋಗ ಸಿಗದೆ ಸಾವಿರಾರು ಯುವಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತಾಂತ್ರಿಕ ಕೌಶಲ್ಯ ಆಧಾರಿತ ಶಿಕ್ಷಣವೇ ಭವಿಷ್ಯವನ್ನು ಬದಲಾಯಿಸುವ ಶಕ್ತಿ ಹೊಂದಿದೆ. ಇದೇ ಕಾರಣಕ್ಕೆ ಕರ್ನಾಟಕ ಸರ್ಕಾರದ ಹೆಮ್ಮೆಯ ಸಂಸ್ಥೆಯಾದ Government Tool Room and Training Centre (GTTC) ಇಂದು ಸಾವಿರಾರು ಯುವಕರಿಗೆ ಹೊಸ ದಾರಿ ತೋರಿಸುತ್ತಿದೆ.

GTTC ಎಂದರೇನು?

ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GTTC) ಕರ್ನಾಟಕ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ತಾಂತ್ರಿಕ ತರಬೇತಿ ಸಂಸ್ಥೆಯಾಗಿದೆ. ಉದ್ಯಮಗಳಿಗೆ ಬೇಕಾದ ನಿಪುಣ ತಾಂತ್ರಿಕ ಮಾನವ ಸಂಪನ್ಮೂಲವನ್ನು ತಯಾರಿಸುವ ಉದ್ದೇಶದಿಂದ ಇದು ಆರಂಭಗೊಂಡಿತು.

ಈ ಸಂಸ್ಥೆಯಲ್ಲಿ CNC, CAD/CAM, ಮೆಕಾಟ್ರಾನಿಕ್ಸ್, ಪ್ರೊಡಕ್ಷನ್ ಟೆಕ್ನಾಲಜಿ, ಟೂಲ್ & ಡೈ ಮೇಕಿಂಗ್, ಆಟೋಮೇಶನ್, ಎಲೆಕ್ಟ್ರಾನಿಕ್ಸ್ ಸೇರಿದಂತೆ ಹಲವಾರು ಆಧುನಿಕ ಕೋರ್ಸ್‌ಗಳನ್ನು ಕಲಿಸಲಾಗುತ್ತದೆ.

GTTC ಯಲ್ಲಿ ದೊರೆಯುವ ಪ್ರಮುಖ ಕೋರ್ಸ್‌ಗಳು

  • ಡಿಪ್ಲೋಮಾ ಇನ್ ಟೂಲ್ & ಡೈ ಮೇಕಿಂಗ್
  • ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್
  • ಡಿಪ್ಲೋಮಾ ಇನ್ CNC ಟೆಕ್ನಾಲಜಿ
  • ಪೋಸ್ಟ್ ಡಿಪ್ಲೋಮಾ ಕೋರ್ಸ್‌ಗಳು
  • ಶಾರ್ಟ್ ಟರ್ಮ್ ಇಂಡಸ್ಟ್ರಿಯಲ್ ಕೋರ್ಸ್‌ಗಳು
  • CAD/CAM ತರಬೇತಿ
  • Automation & Robotics ತರಬೇತಿ

ಯಾವಾಗ ಅರ್ಜಿ ಹಾಕಬೇಕು?

GTTC ಪ್ರವೇಶ ಪ್ರಕ್ರಿಯೆ ಸಾಮಾನ್ಯವಾಗಿ ಪ್ರತಿ ವರ್ಷ ಮೇ ತಿಂಗಳಿಂದ ಆಗಸ್ಟ್ ತಿಂಗಳವರೆಗೆ ನಡೆಯುತ್ತದೆ. SSLC, PUC ಹಾಗೂ ITI ಫಲಿತಾಂಶಗಳ ನಂತರ ಪ್ರವೇಶ ಅಧಿಸೂಚನೆ ಪ್ರಕಟವಾಗುತ್ತದೆ.

ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್, ಪತ್ರಿಕೆಗಳು ಅಥವಾ ಕಾಲೇಜು ಕೇಂದ್ರಗಳಲ್ಲಿ ಪ್ರಕಟಣೆ ಗಮನಿಸಬೇಕು.

GTTC Admission 2026 ಹೊಸ ಅಧಿಸೂಚನೆ ಪ್ರಕಟ

ಇಂದು ಪ್ರಕಟವಾದ ಅಧಿಸೂಚನೆಯ ಪ್ರಕಾರ ವಿವಿಧ ಡಿಪ್ಲೋಮಾ, ಟೆಕ್ನಿಕಲ್ ಹಾಗೂ ತರಬೇತಿ ಕೋರ್ಸ್‌ಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಧಿಕೃತ ವೆಬ್‌ಸೈಟ್‌ನಲ್ಲಿ ಸಂಪೂರ್ಣ ಮಾಹಿತಿ ಲಭ್ಯವಿದೆ.

ಹೇಗೆ ಅರ್ಜಿ ಹಾಕಬೇಕು?

  1. GTTC ಅಧಿಕೃತ ವೆಬ್‌ಸೈಟ್ ಅಥವಾ ಸಮೀಪದ GTTC ಕೇಂದ್ರಕ್ಕೆ ಭೇಟಿ ನೀಡಿ
  2. ಆನ್‌ಲೈನ್ / ಆಫ್‌ಲೈನ್ ಅರ್ಜಿ ನಮೂನೆ ಭರ್ತಿ ಮಾಡಿ
  3. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಅಥವಾ ಸಲ್ಲಿಸಿ
  4. ಅರ್ಜಿ ಶುಲ್ಕ ಪಾವತಿಸಿ
  5. ಮೆರಿಟ್ / ಕೌನ್ಸೆಲಿಂಗ್ ಮೂಲಕ ಸೀಟ್ ಹಂಚಿಕೆ ಪಡೆಯಿರಿ

ಅಗತ್ಯ ಅರ್ಹತೆಗಳು

ಡಿಪ್ಲೋಮಾ ಕೋರ್ಸ್‌ಗಳಿಗೆ:

  • SSLC / 10ನೇ ತರಗತಿ ಉತ್ತೀರ್ಣ
  • ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಮೂಲ ಜ್ಞಾನ ಇದ್ದರೆ ಉತ್ತಮ

ಉನ್ನತ ಕೋರ್ಸ್‌ಗಳಿಗೆ:

  • PUC (Science) / ITI / Diploma / Engineering ಹಿನ್ನೆಲೆ

ಶಾರ್ಟ್ ಟರ್ಮ್ ಕೋರ್ಸ್‌ಗಳಿಗೆ:

  • 10ನೇ / 12ನೇ / ITI / ಉದ್ಯೋಗಾರ್ಥಿಗಳಿಗೆ ಅವಕಾಶ

ಆಯ್ಕೆ ವಿಧಾನ ಹೇಗೆ?

GTTC ನಲ್ಲಿ ಸಾಮಾನ್ಯವಾಗಿ ಕೆಳಗಿನ ಆಧಾರದ ಮೇಲೆ ಆಯ್ಕೆ ನಡೆಯುತ್ತದೆ:


ಬೇಕಾಗುವ ದಾಖಲೆಗಳು

  • ಎಸ್.ಎಸ್.ಎಲ್.ಸಿ/ಪಿಯುಸಿ ಅಂಕಪಟ್ಟಿ
  • ವರ್ಗಾವಣೆ ಪ್ರಮಾಣಪತ್ರ
  • ಆಧಾರ ಕಾರ್ಡ್
  • (ಅಗತ್ಯವಿದ್ದರೆ) ಜಾತಿ/ಆದಾಯ ಪ್ರಮಾಣಪತ್ರ
  • ಪಾಸ್ ಪೋರ್ಟ ಅಳತೆ ಭಾವಚಿತ್ರಗಳು
  • Residence Proof ವಾಸ ದೃಡೀಕರಣ ಪತ್ರ

ಸರ್ಕಾರಿ ಉದ್ಯೋಗ ಅವಕಾಶಗಳು

GTTC ನಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ವಿವಿಧ ಸರ್ಕಾರಿ ಇಲಾಖೆಗಳಲ್ಲಿಯೂ ಅವಕಾಶಗಳಿವೆ.

ಅವಕಾಶ ಇರುವ ಇಲಾಖೆಗಳು:

  • ಭಾರತೀಯ ರೇಲ್ವೆ
  • ಬಿಎಚ್ ಇ ಎಲ್
  • ಎಚ್ ಎ ಎಲ್
  • ಬಿ ಇ ಎಲ್
  • ಇಸ್ರೊ
  • ಕರ್ನಾಟಕ ರಾಜ್ಯ ಸರಕಾರಿ ತಾಂತ್ರಿಕ ಇಲಾಖೆಗಳು
  • ಸಾರ್ವಜನಿಕ ಉದ್ದಿಮೆಗಳು

GTTC ವಿದ್ಯಾರ್ಥಿಗಳು ತಾಂತ್ರಿಕ ಸಹಾಯಕರು, ಜೂನಿಯರ್ ಎಂಜಿನಿಯರ್, ಮಷೀನ್ ಆಪರೇಟರ್, ಸೂಪರ್‌ವೈಸರ್ ಹುದ್ದೆಗಳಿಗೆ ಅರ್ಜಿ ಹಾಕಬಹುದು.


ಖಾಸಗಿ ಕ್ಷೇತ್ರದಲ್ಲಿ ದೊಡ್ಡ ಬೇಡಿಕೆ

ಇಂದಿನ ಕೈಗಾರಿಕಾ ಕ್ಷೇತ್ರದಲ್ಲಿ GTTC ವಿದ್ಯಾರ್ಥಿಗಳಿಗೆ ಭಾರಿ ಬೇಡಿಕೆಯಿದೆ.

ಪ್ರಮುಖ ಕಂಪನಿಗಳು:

  • ಟೊಯೊಟಾ ಕಿರ್ಲೊಸ್ಕರ್ ಮೊಟಾರ್
  • ಬಾಷ್
  • ಟಾಟಾ ಮೊಟಾರ್ಸ್
  • ಮಹಿಂದ್ರ
  • ಟಿವಿಎಸ್ ಮೊಟಾರ್ ಕಂಪನಿ
  • ಇನ್ ಫೊಸಿಸ್ (Automation ವಿಭಾಗಗಳು)
  • ವಿಪ್ರೊ (Manufacturing Tech ವಿಭಾಗಗಳು)
  • MSME ಹಾಗೂ ಸಣ್ಣ ಕೈಗಾರಿಕೆಗಳು

ಸಂಬಳ ಎಷ್ಟು?

  • ಆರಂಭಿಕ ಸಂಬಳ: ₹15,000 ರಿಂದ ₹30,000
  • ಅನುಭವದ ನಂತರ: ₹40,000 ರಿಂದ ₹80,000+
  • ವಿದೇಶಿ ಅವಕಾಶಗಳು ಇದ್ದರೆ ಇನ್ನಷ್ಟು ಹೆಚ್ಚಿನ ಆದಾಯ

GTTC ಯಾಕೆ ಉತ್ತಮ ಆಯ್ಕೆ?

  • ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ತರಬೇತಿ
  • ಸರ್ಕಾರ ಮಾನ್ಯತೆ
  • ಪ್ರಾಯೋಗಿಕ ತರಬೇತಿ ಹೆಚ್ಚು
  • ಕ್ಯಾಂಪಸ್ ಪ್ಲೇಸ್ಮೆಂಟ್ ಅವಕಾಶ
  • ಸ್ವಂತ ಉದ್ಯಮ ಆರಂಭಿಸಲು ಸಹಾಯ
  • ಸರ್ಕಾರಿ + ಖಾಸಗಿ ಎರಡೂ ಕ್ಷೇತ್ರಗಳಲ್ಲಿ ಬೇಡಿಕೆ

ಸ್ವಂತ ಉದ್ಯಮವೂ ಆರಂಭಿಸಬಹುದು

GTTC ವಿದ್ಯಾರ್ಥಿಗಳು CNC Job Work, Tool Designing, Precision Components Manufacturing, 3D Design Services, Industrial Repair Unit ಆರಂಭಿಸಬಹುದು.

ಯುವಕರೆ, ಕೇವಲ ಪದವಿ ಸಾಕಾಗುವುದಿಲ್ಲ. ಕೌಶಲ್ಯ ಬೇಕು. ಕೈಯಲ್ಲಿ ಕಲೆ ಇದ್ದರೆ ಉದ್ಯೋಗ ನಿಮ್ಮ ಹಿಂದೆ ಬರುತ್ತದೆ. GTTC ನಂತಹ ಸಂಸ್ಥೆಗಳು ಯುವಕರಿಗೆ ಬದುಕಿನ ಹೊಸ ದಾರಿ ತೋರಿಸುತ್ತಿವೆ.ಭವಿಷ್ಯದಲ್ಲಿ ಎಂಜಿನಿಯರಿಂಗ್, ಆಟೋಮೇಶನ್, ರೋಬೋಟಿಕ್ಸ್ ಮತ್ತು ಮ್ಯಾನ್ಯುಫ್ಯಾಕ್ಚರಿಂಗ್ ಕ್ಷೇತ್ರಗಳು ವೇಗವಾಗಿ ಬೆಳೆಯಲಿವೆ. ಇಂತಹ ಸಂದರ್ಭದಲ್ಲಿ GTTC ತರಬೇತಿ ಯುವಕರಿಗೆ ಬಲವಾದ ನೆಲೆ ನೀಡುತ್ತದೆ.

ಓದಿದ ವಿದ್ಯೆಗೆ ಜೊತೆಗೆ ಕೌಶಲ್ಯ ಸೇರಿಸಿ — ಉದ್ಯೋಗವನ್ನು ನಿಮ್ಮ ಕೈಯಲ್ಲಿ ಹಿಡಿಯಿರಿ.



Author

  • ಶೀಲಾ ಭಟ್ ಇವರದು ಪತ್ರಿಕೋದ್ಯಮದಲ್ಲಿ ೨೧ ವರ್ಷಗಳ ಅನುಭವ. ಕನ್ನಡ ದಿನಪತ್ರಿಕೆ, ಮಾಸಪತ್ರಿಕೆ, ದೃಶ್ಯಮಾಧ್ಯಮಗಳಲ್ಲಿ ಉಪಸಂಪಾದಕರಾಗಿ, ವರದಿಗಾರರಾಗಿ, ಕಾರ್ಯಕ್ರಮ ನಿರ್ವಹಣಾಕಾರರಾಗಿ ಕೆಲಸ ಮಾಡಿದ್ದಾರೆ. ಪತ್ರಿಕೋದ್ಯಮ, ವೈದ್ಯಕೀಯ, ವ್ಯಕ್ತಿತ್ವ ವಿಕಸನ, ರಾಜಕೀಯ, ಆರ್ಥಿಕ ಯೋಜನೆ, ಸಂಸ್ಕೃತಿ, ಅಧ್ಯಾತ್ಮ, ಶಿಕ್ಷಣ, ಸಾಹಿತ್ಯ, ಸಂಗೀತ ಇವುಗಳಲ್ಲಿ ಅತ್ಯಂತ ಆಸಕ್ತ ವಿದ್ಯಾರ್ಥಿ.

Leave a Reply

Your email address will not be published. Required fields are marked *