ತಾಜಾ ಸುದ್ದಿ: ಬೆಂಗಳೂರಿಗೆ ಮಳೆ ಎಚ್ಚರಿಕೆ | GTTC ಅರ್ಜಿ ಆರಂಭ | IPL ಫೈನಲ್ ಇಂದು
ಡಾ. ಮನಮೋಹನ್ ಸಿಂಗ್; ದೇಶ ನಿಮ್ಮನ್ನು ಮರೆಯುವುದೇ ದೇಶದ್ರೋಹ. ರಾಜ್ಯಸಭೆಯಿಂದ ನಿವೃತ್ತಿ; ನಿಮ್ಮ ನಿವೃತ್ತಿಯ ಬದುಕು ಸಂತೋಷದಾಯಕ ವಾಗಿರಲಿ
ನವದೆಹಲಿ : ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರು ರಾಜ್ಯಸಭೆಯಿಂದ ನಿವೃತ್ತಿಯಾಗಿದ್ದಾರೆ. ಭಾರತದ ರಾಜಕೀಯ ಇತಿಹಾಸದಲ್ಲಿ ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ನಾಯಕ.
ಅವರು ಹೆಚ್ಚು ಮಾತನಾಡಲಿಲ್ಲ. ಭಾಷಣ ಬಿಗಿಯಲಿಲ್ಲ. ಮೌನ ಬಾಬಾ ಎಂದು ಟೀಕಿಸಿದಾಗಲೂ ಅವರು ಮೌನವಾಗಿದ್ದರು. ಸೋನಿಯಾ ಗಾಂಧಿ ಹೇಳಿದಂತೆ ಕೇಳುವ ಪ್ರಧಾನಿ ಎಂದು ಟೀಕಿಸಿದರೂ ಅವರು ಸುಮ್ಮನಿದ್ದರು. ಯಾಕೆಂದರೆ ಅವರ ಮುಂದೆ ಮಾಡಲು ಸಾಕಷ್ಟು ಕೆಲಸ ಇತ್ತು. ಅವರು ಭಾಷಣ ವೀರ ಆಗಿರಲಿಲ್ಲ. ತಮ್ಮದ ಆದ ಶಿಷ್ಯ ಪಡೆ ಇಟ್ಟುಕೊಂಡು ಅವರ ಬಾಯಲ್ಲಿ ವಿಶ್ವ ಗುರು ಎಂದು ಪ್ರಚಾರ ಮಾಡಿಸಿಕೊಳ್ಳಲಿಲ್ಲ.
1991 ರಲ್ಲಿ ಭಾರತದ ಆರ್ಥಿಕತೆ ನೆಲ ಕಚ್ಚಿತ್ತು. ದೇಶ ದಿವಾಳಿಯ ಅಂಚಿಗೆ ಬಂದು ನಿಂತಿತ್ತು. ದೇಶದ ಬಂಗಾರವನ್ನು ವಿದೇಶದಲ್ಲಿ ಅಡವಿಟ್ಟು ದೇಶವನ್ನು ನಡೆಸಬೇಕಾದ ಸ್ಥಿತಿ ಇತ್ತು. ಆಗ ಆರ್ಥ ಸಚಿವರಾದವರು ಡಾ. ಮನಮೋಹನ್ ಸಿಂಗ್. ನಂತರ ಪ್ರಧಾನಿಯಾದ ಮೇಲೂ ಅವರು ಬದಲಾಗಲಿಲ್ಲ. ದಿನಕ್ಕೆ ಹತ್ತು ಬಾರಿ ಬಟ್ಟೆ ಬದಲಿಸಲಿಲ್ಲ. ಯಾಕೆಂದರೆ ಅವರ ಮುಂದೆ ದೇಶವನ್ನು ಬದಲಿಸುವ ಸವಾಲು ಇತ್ತು. ದೇಶವನ್ನು ಉಳಿಸುವ ಸವಾಲು ಇತ್ತು.
ಅವರು ವಿದೇಶ ಪ್ರವಾಸ ಮಾಡಿದಾಗಲೂ ಇಂಡಿಯನ್ ಡಯೋಸ್ಪೋರಾ ದಿಂದ ಕಾರ್ಯಕ್ರಮ ಮಾಡಿಸಿ, ಹಣ ಕೊಟ್ಟು ಹೊಗಳಿಸಿಕೊಳ್ಳಲಿಲ್ಲ. ಅಮೇರಿಕ ಅಧ್ಯಕ್ಷರ ಚುನಾವಣೆಯ ಪ್ರಚಾರ ಮಾಡಲಿಲ್ಲ.
ಅವರು ಭಾರತೀಯ ಆರ್ಥಿಕತೆಯನ್ನು ಸಬಲಗೊಳಿಸುವ ದಾರಿಯಲ್ಲಿ ನಡೆದರು. ಆದರೆ ರೈತರ ಕಷ್ಟ ಸುಖಗಳಿಗೆ ಕಿವಿಯಾದರು. 70 ಸಾವಿರ ಕೋಟಿಯಷ್ಟು ರೈತರ ಸಾಲ ಮನ್ನಾ ಮಾಡಿದರು. ಈ ದೇಶದ ರೈತರನ್ನು ಖಾಲಿಸ್ಥಾನಿಗಳು, ದೇಶದ್ರೋಹಿಗಳು ಎಂದು ಕರೆಯಲಿಲ್ಲ. ಅದಾನಿ, ಅಂಬಾನಿಯ ಹಿಂದೆ ಬೀಳಲಿಲ್ಲ. ಅವರ ಬಳಿ ತಮ್ಮ ಹಣವನ್ನು ಇಡಲಿಲ್ಲ. ಚುನಾವಣಾ ದೇಣಿಗೆಗಾಗಿ ಹೊಸ ಕಾನೂನು ಮಾಡಿ ಪಕ್ಷದ ಬೊಕ್ಕಸ ತುಂಬಲಿಲ್ಲ.
ಇಂತಹ ಡಾ. ಮನಮೋಹನ್ ಸಿಂಗ್ ಅವರಿಗೆ ಸಿಗಬೇಕಾದ ಪ್ರಚಾರ ಸಿಗಲೇ ಇಲ್ಲ. ಯಾಕೆಂದರೆ ಅವರು ಮಾಧ್ಯಮವನ್ನು ಖರೀದಿಸುವ ಕೆಲಸ ಮಾಡಲಿಲ್ಲ.
ದೇಶ ಅವರಿಗೆ ಎಲ್ಲಕ್ಕಿಂತ ಮುಖ್ಯವಾಗಿತ್ತು. ಈಗ ದೇಶ ಅವರನ್ನು ಮರೆತು ಬಿಟ್ಟಿದೆ. ಯಾಕೆಂದರೆ ಮರೆಯಲಾಗದ ಭ್ರಮೆಯನ್ನು ಅವರು ಸೃಷ್ಟಿಸಲಿಲ್ಲ. ಮಾಧ್ಯಮಗಳಿಗೆ ಕಾಸು ಕೊಡಲಿಲ್ಲ. ಅವರು ನೆರಳಿನಂತೆ ಕೆಲಸ ಮಾಡಿದರು. ತಮ್ಮ ಕೆಲಸ ಮುಗಿದ ಮೇಲೆ ರಾಜಕೀಯ ರಂಗದಿಂದ ಮರೆಯಾದರು. ಇವರನ್ನು ನೆನಪು ಮಾಡಿಕೊಳ್ಳುವುದೇ ಇರುವುದೇ ದೇಶದ್ರೋಹ.
