ಭಾರತದ ಸಂವಿಧಾನ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಶಕ್ತಿ ಯಾವುದು ಗೊತ್ತಾ? ಅವರನ್ನು ವಿರೋಧಿಸುವವರೂ ಸಹ ಭಹಿರಂಗವಾಗಿ ವಿರೋಧ ವ್ಯಕ್ತಪಡಿಸಲು ಸಾಧ್ಯವಾಗದೇ ಇರುವುದು. ಮನಸ್ಸಿನಲ್ಲಿ ಎನೇ ಇರಲಿ ಬಹಿರಂಗವಾಗಿ ಡಾ. ಅಂಬೇಡ್ಕರ್ ಅವರನ್ನು ನೆನಪು ಮಾಡಿಕೊಳ್ಳಲೇಬೇಕು.
ಸನಾತನ ಮತ್ತು ಬ್ರಾಹ್ಮಣ್ಯದ ಮನಸ್ಸುಗಳೂ ಸಹ ಡಾ. ಬಾಬಾ ಸಾಹೇಬರನ್ನು ಇಂದು ನೆನಪು ಮಾಡಿಕೊಂಡವು.
ಡಾ, ಅಂಬೇಡ್ಕರ್ ಅವರ ಜಯಂತಿಯ ಹಿನ್ನಲೆಯಲ್ಲಿ ದೇಶಾದ್ಯಂತ ಕಾರ್ಯಕ್ರಮಗಳು ನಡೆದವು. ಮುಖ್ಯ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಅವರೂ ಪಾಲ್ಗೊಂಡಿದ್ದರು.
ಡಾ.ಅಂಬೇಡ್ಕರ್ ತಾತ್ವಿಕತೆ ಮತ್ತು ಸಿದ್ದಾಂತ್ವನ್ನು ವಿರೋಧಿಸುತ್ತ ಬಂದವರು ಯಾರು ಎಂದು ಹೇಳಬೇಕಾಗಿಲ್ಲ. ಯಾರೇ ಇರಲಿ ಅಂಬೇಡ್ಕರ್ ವಾದಿಯಾಗಿ ಅದೇ ಸಂದರ್ಭದಲ್ಲಿ ಸನಾತನವಾದಿಯಾಗಿಯೂ ಇರುವುದು ಸಾಧ್ಯವಿಲ್ಲ. ಆದರೆ ಈ ಸನಾತನವಾದಿಗಳಿಗೆ ನಾವು ಅಂಬೇಡ್ಕರ್ ವಾದವನ್ನು ಒಪ್ಪುವುದಿಲ್ಲ ಎಂದು ಹೇಳುವುದು ಸಾಧ್ಯವಿಲ್ಲ.
ಬಿಜೆಪಿಯ ಬಹುದೊಡ್ದ ನಾಯಕರ ದುರಂತ ಸ್ಥಿತಿ ಇದು. ಸಂವಿಧಾನವನ್ನು ಬದಲಿಸಬೇಕು ಎಂಬ ಪಾಠವನ್ನು ನಾಗಪುರದಲ್ಲಿ ಕಲಿತು ಬಂದವರಿಗೆ ಅದನ್ನು ಹೇಳುವುದು ಕಷ್ಟ. ಬದಲಿಗೆ ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಹಿಂದೆ ಹೇಳಿದಂತೆ ಈ ಸಂವಿಧಾನವನ್ನು ಯಾರಿಗೂ ಬದಲು ಮಾಡುವುದು ಸಾಧ್ಯವಿಲ್ಲ.
