ಅರವಿಂದ್ ಕೇಜ್ರಿವಾಲ್ ಗೆ ರಿಲೀಫ್ ನೀಡದ ದೆಹಲಿ ಹೈಕೋರ್ಟ್; ದೆಹಲಿಯಲ್ಲಿ ಜಾರಿಗೆ ಬರುವುದೇ ರಾಷ್ಟ್ರಪತಿ ಆಡಳಿತ ?

ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ. ಜಾಮೀನು ನೀಡುವಂತೆ ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.

ಈಗ ಅವರಿಗೆ ಇರುವ ದಾರಿ ಎಂದರೆ ಜಾಮೀನು ಕೋರಿ ಸುಪ್ರೀಂ ಕೋರ್ಟಿಗೆ ಹೋಗುವುದು ಮಾತ್ರ.
ಇದರ ನಡುವೆ ದೆಹಲಿ ಹೈಕೋರ್ಟ್ ತನ್ನ ಆಬ್ಸರ್ವೇಶನ್ ನಲ್ಲಿ ಹಲವು ಅಂಶಗಳ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

ಇವುಗಳಲ್ಲಿ ಪ್ರಮುಖವಾದುದೆಂದರೆ ಜೈಲಿನಲ್ಲಿ ಇದ್ದೇ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಮುಂದುವರಿಯಬಹುದೆ ಎಂಬುದು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನ್ಯಾಯಲಯ ಈ ಬಗ್ಗೆ ನಾವು ಮಧ್ಯ ಪ್ರವೇಶಿಸುವುದಿಲ್ಲ. ದೆಹಲಿ ಉಪ ರಾಜ್ಯಪಾಲರು ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದೆ.

ಅಂದರೆ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಮುಂದುವರಿಯ ವಿಚಾರದಲ್ಲಿ ಕೇಂದ್ರ ಗೃಹ ಇಲಾಖೆ ತೀರ್ಮಾನ ಕೈಗೊಳ್ಳಬೇಕು. ಇದರ ಆಧಾರದ ಮೇಲೆ ದೆಹಲಿ ಉಪ ರಾಜ್ಯಪಾಲರು ಕಾನೂನು ಸಲಹೆ ಪಡೆದು ರಾಷ್ಟ್ರ‍ಪತಿ ಆಡಳಿತ ಜಾರಿಗೆ ತರುವಂತೆ ಶಿಫಾರಸು ಮಾಡಬಹುದು. ಹಾಗಾದರೆ ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತ ನಿಶ್ಚಿತ.
ಕೇಜ್ರಿವಾಲ್ ಬಂಧನವನ್ನು ನ್ಯಾಯಾಲಯ ಎತ್ತಿ ಹಿಡಿದೆ. ಜೊತೆಗೆ ಇಡಿ ಸರ್ವತಂತ್ರ ಸ್ವತಂತ್ರ ಸಂಸ್ಥೆ ಎಂದು ಹೇಳಿರುವ ನ್ಯಾಯಾಲಯ ಇಡಿ ಗೆ ಸರ್ಟಿಫಿಕೇಟ್ ನೀಡಿದೆ.

ಇದರಿಂದಾಗಿ ದೆಹಲಿ ಉಪ ರಾಜ್ಯಪಾಲರು ತಮ್ಮ ಇಷ್ಟದಂತೆ ಕಾರ್ಯನಿರ್ವಹಿಸಬಹುದು.

Author

error: