Category ಅಂತರಾಷ್ಟ್ರೀಯ

ಸೊಮಾಲಿಯ ಕಡಲ್ಗಳ್ಳರ ಹೆಡೆಮುರಿ ಕಟ್ಟಿದ ಭಾರತೀಯ ಸೇನೆಯ ಯಶಸ್ವಿ ಕಾರ್ಯಾಚರಣೆ, 23 ಪಾಕಿಸ್ತಾನಿ ಪ್ರಜೆಗಳ ರಕ್ಷಣೆ, ಇರಾನ್ ಹಡಗು ಮುಕ್ತ,,,,ಮುಕ್ತ..

ನವದೆಹಲಿ : ಸೊಮಾಲಿಯಾ ಕಡಲ್ಗಳ್ಳರನ್ನು ಭಾರತೀಯ ಸೇನೆ ಹೆಡೆಮುರಿ ಕಟ್ಟಿದೆ. ಸತತ ಕಾರ್ಯಾಚರಣೆ ನಡೆಸಿ 23 ಪಾಕಿಸ್ತಾನಿ ಪ್ರಜೆಗಳ ರಕ್ಷಣೆ ಮಾಡಿದೆ. ಇರಾನ್ ಮೂಲದ ಸರಕ ಸಾಗಾಣಿಕಾ ಹಡಗನ್ನು ಬಂಧಮುಕ್ತ ಮಾಡಲಾಯಿತು. ಇರಾನ್ ಮೂಲದ ಮೀನುಗಾರಿಕಾ ಹಡಗು , ಅಲ್-ಕಂಬರ್ ಮೇಲೆ ಸೊಮಾಲಿಯ ಕಡಲ್ಗಳ್ಳರು ದಾಳಿ ನಡೆಸಿದ್ದರು. ಹಡಗನ್ನು ಹೈಜಾಕ್ ಮಾಡಿದ್ದರು. ಈ ವಿಚಾರ ತಿಳಿಯುತ್ತಲೇ…

PM Modi-Bill Gates: ದೆಹಲಿಯ ತಮ್ಮ ನಿವಾಸದಲ್ಲಿ ಬಿಲ್ ಗೇಟ್ಸ್​​ ಜೊತೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಶುಕ್ರವಾರ ದೆಹಲಿಯ ಪ್ರಧಾನ ಮಂತ್ರಿ ನಿವಾಸದಲ್ಲಿ ಸಂವಾದ ನಡೆಸಿದರು. ಕೃತಕ ಬುದ್ಧಿಮತ್ತೆ ಸಾರ್ವಜನಿಕ ಮೂಲಸೌಕರ್ಯ, ಹವಾಮಾನ ಬದಲಾವಣೆ, ಭಾರತದ ಕೃಷಿ, ಆರ್ಥಿಕ ಕ್ಷೇತ್ರ ಹೀಗೆ ಹಲವು ವಿಚಾರಗಳ ಕುರಿತು ವ್ಯಾಪಕವಾಗಿ ಚರ್ಚಿ ನಡೆಸಿದರು. ಪ್ರಧಾನಿ ನಮೋ ಅಪ್ಲಿಕೇಶನ್‌ನಲ್ಲಿನ ಫೋಟೋ ಬೂತ್…

ರಾಜಕೀಯ ಮತ್ತು ನಾಗರಿಕ ಹಕ್ಕುಗಳನ್ನು ರಕ್ಷಿಸುವಂತೆ ಭಾರತಕ್ಕೆ ಸೂಚನೆ ನೀಡಿದ ವಿಶ್ವ ಸಂಸ್ಥೆ, ಭಾರತದ ಬೆಳವಣಿಗೆ ಬಗ್ಗೆ ಆತಂಕ

ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಪ್ರಕರಣ ಈಗ ಗಂಭೀರ ಸ್ವರೂಪವನ್ನು ಪಡೆಯುತ್ತಿದೆ. ಅಮೇರಿಕ ಮತ್ತು ಜರ್ಮನಿ ಈ ಪ್ರಕರಣದ ಬಗ್ಗೆ ತೀವ್ರ ಪ್ರತಿಕ್ರಿಯೆ ನೀಡಿದ ಮೇಲೆ ಈಗ ವಿಶ್ವ ಸಂಸ್ಥೆ ಇದೇ ದಾಟಿಯಲ್ಲಿ ಪ್ರತಿಕ್ರಿಯೆ ನೀಡಿದೆ. ಈ ಮೂಲಕ ವಿಶ್ವವೇ ವಿಶ್ವಗುರು ಪ್ರಭುತ್ವಕ್ಕೆ ಚಾಟಿ ಏಟು ಬೀಸುವಂತಾಗಿದೆ. ಪ್ರತಿಯೂಬ್ಬರ ಹಕ್ಕನ್ನು…

ಕೇಜ್ರಿವಾಲ್ ಬಂಧನ, ಕಾನೂನು ಪ್ರಕ್ರಿಯೆ ಮುಕ್ತವಾಗಿ, ನ್ಯಾಯಸಮ್ಮತವಾಗಿ ನಡೆಯುವಂತೆ ನೋಡಿಕೊಳ್ಳಿ: ಭಾರತಕ್ಕೆ ಅಮೇರಿಕ ಸೂಚನೆ

ವಾಷಿಂಗ್ಟನ್ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಕುರಿತಂತೆ ಅಮೇರಿಕ ತೀಕ್ಷ ಪ್ರತಿಕ್ರಿಯೆ ನೀಡಿದೆ. ಕಾನೂನು ಪ್ರಕ್ರಿಯೆ ಮುಕ್ತವಾಗಿ ಮತ್ತು ನ್ಯಾಯ ಸಮ್ಮತವಾಗಿ ನಡೆಯುವಂತೆ ನೋಡಿಕೊಳ್ಳಿ ಎಂದು ಅದು ಭಾರತಕ್ಕೆ ಸೂಚಿಸಿದೆ. ಈ ಬಂಧನಕ್ಕೆ ಸಂಬಂಧಿಸಿದಂತೆ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಅಮೇರಿಕ ವಿದೇಶಾಂಗ ಇಲಾಖೆಯ ವಕ್ತಾರರು ತಿಳಿಸಿದ್ದಾರೆ. ಈಗಾಗಲೇ ಹಲವು…

ಪಾಕಿಸ್ಥಾನದಲ್ಲಿ ಆತ್ಮಾಹುತಿ ದಾಳಿ; ಚೀನಾದ ಐವರು ದುರ್ಮರಣ..

ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಆತ್ಮಾಹುತಿ ದಾಳಿ ನಡೆದಿದೆ. ಈ ದಾಳಿಯಲ್ಲಿ ಆರು ಚೀನೀ ಪ್ರಜೆಗಳು ಸಾವನ್ನಪ್ಪಿದ್ದಾರೆ. ದಾಳಿಕೋರರು ಚೀನಿ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ಸ್ಥಳೀಯ ಅಧಿಕಾರಿಗಳ ಪ್ರಕಾರ, ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಶಾಂಗ್ಲಾದಲ್ಲಿ ಆತ್ಮಾಹುತಿ ಬಾಂಬರ್ ನಡೆಸಿದ ಬಾಂಬ್ ಸ್ಫೋಟದಲ್ಲಿ ಆರು ಚೀನೀ ಪ್ರಜೆಗಳು ಅಸು ನೀಗಿದರು. ಮತ್ತೊಂದೆಡೆ ದಾಳಿಕೋರರು…

error: