ಬೆಂಗಳೂರು : ರಾಜ್ಯದಲ್ಲಿನ ಬಾಣಂತಿಯರ ಸಾವಿಗೆ ಕಾರಣರಾದ ತಪ್ಪಿತಸ್ಥರನ್ನು ಕೂಡಲೇ ಜೈಲಿಗಟ್ಟಬೇಕು ಎಂದು ಒತ್ತಾಯಿಸಿ ರಾಜ್ಯ ಮಹಿಳಾ ಆಯೋಗಕ್ಕೆ ಆಮ್ ಆದ್ಮಿ ಪಕ್ಷದ ಮಹಿಳಾ ಘಟಕದ ನಿಯೋಗ ದೂರ ಸಲ್ಲಿಸಿತು.
ಬೆಂಗಳೂರು ಮಹಿಳಾ ಘಟಕದ ಅಧ್ಯ.ಕ್ಷೆ ವೀಣಾ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿನ ಬಾಣಂತಿಯರು ಹಾಗೂ ಹಸುಗೂಸುಗಳ ಜೀವಕ್ಕೆ ಗ್ಯಾರೆಂಟಿಯನ್ನು ನೀಡಬೇಕಾಗಿದೆ. ಸರ್ಕಾರದ ಭ್ರಷ್ಟ ಗುಳಿತನದಿಂದಾಗಿ ಇಂದು ನೂರಾರು ಬಾಣಂತಿಯರು ಸಾವಿಗೀಡಾಗಿರುವುದು ನಾಗರೀಕ ಸಮಾಜದ ದುರ್ದೈವದ ಸಂಗತಿ ಎಂದರು
ಕಳಪೆ ಗುಣಮಟ್ಟದ ಗ್ಲುಕೋಸ್ ಗಳನ್ನು ನೀಡಿ ನೂರಾರು ಬಾಣಂತಿಯರ ಸಾವಿಗೆ ಈಡಾಗಿರುವ ಸಂತ್ರಸ್ತೆಯರನ್ನು ಮಹಿಳಾ ಆಯೋಗದ ಅಧ್ಯಕ್ಷರು ಇದುವರೆಗೂ ಭೇಟಿಯಾಗಿಲ್ಲ. ರಾಜ್ಯದಲ್ಲಿ ಮಹಿಳಾ ಆಯೋಗ ಇದೆಯೋ ಸತ್ತಿದೆಯೋ ಎಂಬಂತಾಗಿದೆ. ಕೂಡಲೇ ಸಾವಿಗೀಡಾದ ಬಾಣಂತಿಯರ ಕುಟುಂಬಕ್ಕೆ ಸರ್ಕಾರವು 25 ಲಕ್ಷ ರೂ.ಗಳ ಪರಿಹಾರ ಧನವನ್ನು ಘೋಷಿಸಬೇಕು ಎಂದು ವೀಣಾ ಸರ್ಕಾರವನ್ನು ಒತ್ತಾಯಿಸಿದರು.
ನಿಯೋಗದಲ್ಲಿ ಬೆಂಗಳೂರು ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ, ಅನಿಲ್ ನಾಚಪ್ಪ, ಪುಷ್ಪ ಕೇಶವ್ ಹೇಮಾವತಿ ಸೇರಿದಂತೆ ಇನ್ನಿತರ ಮುಖಂಡರುಗಳು ಭಾಗವಹಿಸಿದ್ದರು.







