ಅಯ್ಯಪ್ಪಾ, ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಷ್ಟು ಹಣ ನನ್ನ ಬಳಿ ಇಲ್ಲ !
ಈ ಮಾತು ಹೇಳಿದವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.
ದೇಶದ ಅರ್ಥ ಸಚಿವೆಯಾದ ನಿಮ್ಮ ಬಳಿ ಚುನಾವಣೆ ಸ್ಪರ್ಧಿಸಲು ಹಣ ಇಲ್ಲ ಎಂದರೆ ಏನರ್ಥ ?
ಈ ಪ್ರಶ್ನೆಗೆ ಅವರು ನೀಡಿದ ಉತ್ತರ; ನನ್ನ ಸಂಬಳವೇ ನನ್ನ ವರಮಾನ. ಇದರಲ್ಲಿ ನಾನು ಮಾಡಿರುವ ಉಳಿತಾಯ ಮಾತ್ರ ನನ್ನದು. ದೇಷದ ನಿಧಿ ಅಲ್ಲ !

ರಾಜ್ಯಸಭಾ ಸದಸ್ಯರಾಗಿರುವ ಸೀತಾರಾಮನ್ ತಾವು ಚುನಾವಣೆಗೆ ಸ್ಪರ್ಧಿಸುವ ಕುರಿತು ಹೇಳಿದ್ದು ಹೀಗೆ;
ನನ್ನ ಪಕ್ಷ ನಾನು ಚುನಾವಣೆ ಸ್ಪರ್ಧಿಸುವ ಬಗ್ಗೆ ಕೇಳಿತು. ನಾನು ಸುಮಾರು 8 ರಿಂದ 10 ದಿನಗಳ ಬರೆಗೆ ಈ ಬಗ್ಗೆ ಯೋಚಿಸಿದೆ. ನಂತರ ಹೇಳಿದೆ. ಬೇಡ ಅನ್ನಿಸುತ್ತೆ. ನನ್ನ ಬಳಿ ಚುನಾವಣೆಗೆ ವೆಚ್ಚ ಮಾಡಲು ಬೇಕಾದಷ್ಟು ಹಣ ಇಲ್ಲ.

ಜೊತೆಗೆ ನಾನು ಆಂಧ್ರದಿಂದ ಸ್ಪರ್ಧಿಸಲೂ ತಮಿಳುನಾಡಿನಿಂದ ಸ್ಪರ್ಧಿಸಲೂ ಎಂಬ ಗೊಂದಲ ಕೂಡ ಇತ್ತು. ಹಾಗೆ ಚುನಾವಣೆಯಲ್ಲಿ ಗೆಲ್ಲುವುದು ಮುಖ್ಯ, ಅಲ್ಲಿ ಜಾತಿ ಸಮುದಾಯ ಎಲ್ಲವೂ ಮುಖ್ಯವಾಗುತ್ತದೆ. ನಾನು ಇದಕ್ಕೆಲ್ಲ ಸ್ಯೂಟ್ ಆಗುವುದಿಲ್ಲ.

ದೇಶದ ಅರ್ಥ ಸಚಿವೆ ಬಳಿ ಚುನಾವಣೆಗೂ ದುಡ್ಡಿಲ್ಲ ಎಂಬುದು ಸುದ್ದಿ.

Author

Leave a Reply

Your email address will not be published. Required fields are marked *