ವಾಷಿಂಗ್ಟನ್ : ಭಾರತದಲ್ಲಿ ಜಾತಿ ಮತ್ತು ಕೋಮು ಆಧಾರದ ಮೇಲೆ ಪೌರತ್ವ ನೀಡುವ ಕುರಿತು ಅಮೇರಿಕದಲ್ಲಿ ಕಳವಳ ವ್ಯಕ್ತವಾಗಿದೆ.

ಭಾರತದ ಪೌರತ್ವ ತಿದ್ದುಪಡಿ ಕಾಯಿದೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೇರಿಕದ ಅಂತಾರಾಷ್ಟ್ರ‍ೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತಾದ ಆಯೋಗ ಧರ್ಮ ಮತ್ತು ಕೋಮು ಆಧಾರದ ಮೇಲೆ ಪೌರತ್ವ ನೀಡುವುದಾಗಲೀ ನಿರಾಕರಿಸುವುದಾಗಲಿ ಸರಿಯಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಧರ್ಮ ಮತ್ತು ನಂಬಿಕೆಯ ಆಧಾರದ ಮೇಲೆ ಪೌರತ್ವ ನೀಡುವುದು ಸರಿಯಲ್ಲ ಎಂದು ಆಯೋಗ ಸ್ಪಷ್ಟ ಮಾತುಗಳಲ್ಲಿ ಹೇಳಿದೆ.

ಕಳೆದ ತಿಂಗಳು ಚುನಾವಣೆಗೆ ಮೊದಲು ಪೌರತ್ವ ತಿದ್ದುಪಡಿ ಕಾನೂನಿನ ನಿಯಮಾವಳಿಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಈ ಮೊದಲೇ ಸಂಸತ್ತು ಒಪ್ಪಿಗೆ ನೀಡಿರುವ ಈ ಕಾನೂನಿನ ಪ್ರಕಾರ ಪಾಕಿಸ್ಥಾನ, ಬಾಂಗ್ಲಾ ದೇಶ, ಅಫಘಾನಿಸ್ಥಾನ ಮೊದಲಾದ ದೇಶಗಳಿಂದ 2014 ಕ್ಕಿಂತ ಮೊದಲು ಭಾರತಲ್ಲೆ ಬಂದ ಹಿಂದೂ, ಜೈನ, ಸಿಕ್ ಮೊದಲಾದ ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಬಗ್ಗೆ ಭಾರತದ ಒಳಗೆ ತೀವ್ರ ರೂಪದ ಹೋರಾಟ ಮತ್ತು ಪ್ರತಿಭಟನೆಗಳು ನಡೆದಿದ್ದವು. ಆದರೆ ಕೇಂದ್ರ ಸರ್ಕಾರ ಯಾವುದೇ ಒತ್ತಡಕ್ಕೂ ಮಣಿದಿರಲಿಲ್ಲ. ಈಗ ಭಾರತದ ಹೊರಗಿನಿಂದಲೂ ಈ ಕಾನೂನಿನ ಬಗ್ಗೆ ಪ್ರತಿರೋಧ, ಕಳವಳ ವ್ಯಕ್ತವಾಗುತ್ತಿದೆ.

Author

Leave a Reply

Your email address will not be published. Required fields are marked *