Priyank Kharge: ಕಲಬುರಗಿ ಅಭಿವೃದ್ಧಿಯೆ ನಮ್ಮ ಗುರಿ: ಸಚಿವ ಪ್ರಿಯಾಂಕ್ ಖರ್ಗೆ

Minister Priyank Kharge: ಮುಂದಿನ ಐದು ವರ್ಷ ಅಭಿವೃದ್ಧಿ ಮಾಡುವುದೆ ನಮ್ಮ ಸಂಕಲ್ಪ.ಕಲಬುರಗಿ ಅಭಿವೃದ್ಧಿಗಾಗಿ ಕಲಬುರಗಿ ಮುಂದಿನ ಯೋಜನೆ ಹೊಂದಿದ್ದು. ಅದನ್ನು ಹಂತ ಹಂತವಾಗಿ ಅನುಷ್ಠಾನಕ್ಕೆ ತರುತ್ತೆವೆ ಎಂದರು.

ಕಲಬುರಗಿ : ಕಲಬುರಗಿ ಜನ ಅಭಿವೃದ್ಧಿಗೆ ಮತ ಹಾಕಿದ್ದಾರೆ. ಮತ್ತೊಮ್ಮೆ ಕಲಬುರಗಿ ಅಭಿವೃದ್ಧಿ ಕಾಣಬೇಕು ಎಂಬ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದರು.

ಮಾಧ್ಯಮದವರೊಂದಿಗೆ ‌ಮಾತನಾಡಿದ ಅವರು, ಕಲಬುರಗಿಯಲ್ಲಿ ಒಳ್ಳೆಯ ರೀತಿಯಲ್ಲಿ ಚುನಾವಣೆಯಾಗಿದೆ. ಜನರು ನಮಗೆ ಆರ್ಶಿವಾದ ಮಾಡಿದ್ದಾರೆ. ಕಲಬುರಗಿ ಜನರಿಗೆ ನಾನು ಅಭಿನಂದನೆ ಸಲ್ಲಸುವೆ ಎಂದರು.

ಉಮೇಶ ಜಾಧವ್ ಅವರು ಚಿಂಚೋಳಿ ಎಂಪಿ ಯಾಗಿರುವುದು ನಿಜ ಆದ್ರೆ ಅದರ ಬಗ್ಗೆ ಇವಾಗ ಚರ್ಚೆ ಮಾಡುವುದಿಲ್ಲ. ಜನ ನಮಗೆ ಆರ್ಶಿವಾದ ಮಾಡಿದ್ದಾರೆ. ಮುಂದಿನ ಐದು ವರ್ಷ ಅಭಿವೃದ್ಧಿ ಮಾಡುವುದೆ ನಮ್ಮ ಸಂಕಲ್ಪ.ಕಲಬುರಗಿ ಅಭಿವೃದ್ಧಿಗಾಗಿ ಕಲಬುರಗಿ ಮುಂದಿನ ಯೋಜನೆ ಹೊಂದಿದ್ದು. ಅದನ್ನು ಹಂತ ಹಂತವಾಗಿ ಅನುಷ್ಠಾನಕ್ಕೆ ತರುತ್ತೆವೆ ಎಂದರು.

ನಿರೀಕ್ಷೆಗೆ ತಕ್ಕ ಫಲಿತಾಂಶ ಬಂದಿಲ್ಲ :

ಇದೆ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ‌ 12 ರಿಂದ 14 ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು ಆದ್ರೆ ನಿರೀಕ್ಷೆಗೆ ತಕ್ಕ ಫಲಿತಾಂಶ ಬಂದಿಲ್ಲ. ಅಬ್ ಕಿ ಬಾರ್ 400 ಪಾರ್ ಬಗ್ಗೆ ಚರ್ಚೆ ಅವಶ್ಯಕತೆ ಇರಲಿಲ್ಲ. ಪ್ರಾರಂಭದಲ್ಲಿ ಮೋದಿ ಅವರು ಪ್ರಧಾನ ಸೇವಕರಾದ್ರು. ಅದಾದ ನಂತರ ಚೌಕಿದಾರ್, ಮೂರನೆ ಟರ್ಮ್ ನಲ್ಲಿ ದೇವರೆ ಆದರು. ಅವರಲ್ಲಿನ ಸರ್ವಾಧಿಕಾರದಿಂದಲೆ ಹೀಗಾಯಿತು, ಅವರಿಗೆ 400 ಸ್ಥಾನ ಸಂವಿಧಾನ ಬದಲಿಸಲಿಕ್ಕೆ ಬೇಕಿತ್ತು. ಜನ ಅದನ್ನ ತಿರಸ್ಕರಿಸಿದ್ದಾರೆ ಎಂದರು.

Author

error: