ಪ್ರಜ್ವಲ್ ರೇವಣ್ಣ ಬಂಧಿಸಿ ಕರೆತರಲು ಸಹಾಯ; ಪ್ರಧಾನಿ ಮೋದಿಯವರಿಗೆ ಸಿಎಂ ಪತ್ರ.

ಪ್ರಜ್ವಲ್ ರೇವಣ್ನ ಬಂಧಿಸಿ ಕರೆತರಲು ಯೋಜನೆ
ಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಪತ್ರ
ದೇಶದ ಮಾನವೇ ಹೋಯಿತು ಎಂದ ಸಿದ್ದರಾಮಯ್ಯ.
ಇಂಟರ್ ಪೋಲ್ ಸಹಾಯಕ್ಕೆ ಮನವಿ.

ಲೈಂಗಿಕ ದೌರ್ಜನ್ಯದ ಆರೋಫಿ ಪ್ರಜ್ವಲ್ ರೇವಣ್ಣ ಅವರನ್ನು ದೇಶಕ್ಕೆ ಕರೆತರಲು ಸಹಾಯ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಇದರೊಂದಿಗೆ ಈ ಪ್ರಕರಣದ ಚಂಡು ಕೇಂದ್ರ ಸರ್ಕಾರದ ಅಂಗಳಕ್ಕೆ ತಲುಪಿದಂತಾಗಿದೆ.
ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಬಂಧನದ ಭಿತಿಯಿಂದ ಪ್ರಜ್ವಲ್ ವಿದೇಶಕ್ಕೆ ಪರಾರಿಯಾಗಿದ್ದಾರೆ. ಈಗ ಇಂಟರ್ ಪೋಲ್ ಸಹಾಯದಿಂದ ಅವರನ್ನು ವಾಪಸ್ ದೇಶಕ್ಕೆ ಕರೆತರಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಈ ಪ್ರಕರಣದಿಂದ ದೇಶದ ಮಾನವೇ ಹರಾಜಾಗಿದೆ. ನಾವು ಈ ಪ್ರಕರಣದ ತನಿಖೆಯನ್ನು ಎಸ್ ಐ ಟಿ ಗೆಒಹಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ತಮ್ಮ ವಕೀಲರ ಮೂಲಕ ಪತ್ರ ಬರೆದಿರುವ ಪ್ರಜ್ವಲ್ ವಿಚಾರಣೆಗೆ ಹಾಜರಾಗಲು ೭ ದಿನದ ಕಾಲಾವಕಾಶ ಕೋರಿದ್ದಾರೆ. ೭ ದಿನಗಳ ನಂತರವೂ ಅವರು ಬರುತ್ತಾರೆಯೋ ಇಲ್ಲವೋ ಗೊತ್ತಿಲ್ಲ.ಇಂತಹ ಸಂದರ್ಭದಲ್ಲಿ ಸರ್ಕಾರಕ್ಕೆ ಇರುವ ದಾರಿ ಎಂದರೆ ಅವರನ್ನು ಹಿಡಿದು ತರುವುದು ಮಾತ್ರ. ಇದಕ್ಕೆ ಇಂಟರ್ ಪೋಲ್ ಸಹಾಯ ಬೇಕಾಗುತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರ ಮಾತ್ರ ಮನವಿ ಮಾಡುವುದು ಸಾಧ್ಯ.

Author

Leave a Reply

Your email address will not be published. Required fields are marked *