ಮಣಿಪುರದಲ್ಲಿ ಉಗ್ರಗಾಮಿಗಳ ಸಶಸ್ತ್ರ ಬಾಂಬ್ ದಾಳಿ; ಇಬ್ಬರು ಸೈನಿಕರ ಸಾವು.ಮಣಿಪುರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತೇ ಪ್ರಭುತ್ವ ?

ಹೊತ್ತಿ ಉರಿಯುತ್ತಿರುವ ಮಣಿಪುರ ತಣ್ಣಗಾಗುತ್ತಿಲ್ಲ. ಚುನಾವಣೆ ನಡೆಯುತ್ತಿದ್ದರೂ ಯಾವುದೇ ರಾಜಕಿಯ ಪಕ್ಷ ಅಲ್ಲಿಗೆ ಹೋಗುತ್ತಿಲ್ಲ.. ನಾನು ಮುಂದಿನ ಜನ್ಮದಲ್ಲಿ ಬಂಗಾಲದ ಮಗನಾಗಿ ಹುಟ್ಟುತ್ತೇನೆ ಎಂದು ಹೇಳುವ ಪ್ರಧಾನಿ ಮೋದಿ ನಾನು ಮಣಿಪುರದ ಮಗನಾಗಿ ಹುಟ್ಟುತ್ತೇನೆ ಎಂದು ಹೇಳುವುದಿಲ್ಲ.
ಇವರಲ್ಲಿ ಯಾರಿಗೂ ಮಣಿಪುರ ಅಲ್ಲಿನ ಜನ ಬೇಕಾಗಿಲ್ಲ. ಇದು ಮಣಿಪುರದ ಜನರಿಗೂ ಅರ್ಥವಾಗಿದೆ.
ಈ ನಡುವೆ ಮಣಿಪುರದಲ್ಲಿ ಉಗ್ರಗಾಮಿಗಳ ದಾಳಿಯಲ್ಲಿ ಅರೆ ಸೈನಿಕ ಪಡೆಯ ಇಬ್ಬರು ಅಸು ನೀಗಿದ್ದಾರೆ. ಇನ್ನೂ ಇಬ್ಬರಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಈ ದಾಳಿ ಮಣಿಪುರದ ನರನಸೇನಾ ಪ್ರದೇಶದಲ್ಲಿ ನಡೆದಿದೆ. ಇವತ್ತು ಬೆಳಗಿನ ಜಾವ ೨.೧೫ ಕ್ಕೆ ಈ ದಾಳಿ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಸಿ ಅರ್ ಪಿ ಎಫ್ ನ ೧೨೮ ನೆಯ ಬಟಾಲಿಯನ್ ಮೇಲೆ ಬಾಂಬ್ ದಾಳಿ ಕೂಡ ನಡೆಸಲಾಯಿತು. ಈಗ ಈ ಕೃತ್ಯ ಎಸಗಿದ ಉಗ್ರಗಾಮಿಗಳ ಹುಡುಕಾಟ ನಡೆದಿದೆ.

Author

Leave a Reply

Your email address will not be published. Required fields are marked *