ಯಡಿಯೂರಪ್ಪ ಕುಟುಂಬ ರಾಜಕಾರಣದ ಬಗ್ಗೆ ಮೋದಿಯವರಿಗೆ ಏನು ಅನ್ನಿಸುವುದಿಲ್ಲವೆ…? ಮೋದಿ ಬುಡಕ್ಕೆ ಬಾಣ ಬಿಟ್ಟ ಈಶ್ವರಪ್ಪ…!

K S Eshwarappa : ಬಿಜೆಪಿ ಪಕ್ಷ ಅಪ್ಪ ಮಕ್ಕಳ ಕೈಯಲ್ಲಿ ಇದೆ. ಅದು ಬಿಜೆಪಿ ನಿಷ್ಠಾವಂತರ ಕೈಯಲ್ಲಿ ಬರಬೇಕು. ಯಡಿಯೂರಪ್ಪ ಕುಟುಂಬ ರಾಜಕಾರಣ ಬದಲಾಯಿಸಲು ನನಗೆ ಮತ ನೀಡಿ

ಶಿವಮೊಗ್ಗ : ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣದ ಬಗ್ಗೆ ವಿರೋಧಿಸುವ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತಮ್ಮ ಪಕ್ಕದಲ್ಲಿ ಕುಳಿತ ಯಡಿಯೂರಪ್ಪ ಕುಂಟಂಬದ ರಾಜಕಾರಣದ ಬಗ್ಗೆ ಏನು ಅನ್ನಿಸುವುದಿಲ್ಲವೇ ಎಂದು ಪಕ್ಷೇತರ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.

ಜಿಲ್ಲೆಯ ಶಿಕಾರಿಪುರದಲ್ಲಿ ಕಾರ್ಯಕರ್ತರ ಸಭೆ ಹಾಗೂ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಅಪ್ಪ ಮಕ್ಕಳ ಕೈಯಲ್ಲಿ ಇದೆ. ಅದು ಬಿಜೆಪಿ ನಿಷ್ಠಾವಂತರ ಕೈಯಲ್ಲಿ ಬರಬೇಕು. ಯಡಿಯೂರಪ್ಪ ಕುಟುಂಬ ರಾಜಕಾರಣ ಬದಲಾಯಿಸಲು ನನಗೆ ಮತ ನೀಡಿ ಎಂದು ಮನವಿ ಮಾಡಿದರು.

ಬಿಜೆಪಿಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮಕ್ಕಳ ರಾಜಕಾರಣಕ್ಕೆ ಅಡ್ಡ ಬರಬಾರದು ಎಂಬ ಉದ್ದೇಶದಿಂದ ಹಲವು ನಾಯಕರಿಗೆ ಟಿಕೆಟ್​​ ತಪ್ಪಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Author

error: