ದೇವೇಗೌಡರ ಜೆಡಿಎಸ್ ಗೂ ಹೈದರಾಬಾದ್ ಕಂಪೆನಿಯಿಂದ ಹರಿದು ಬಂದಿದೆ ಕೋಟಿ ಕೋಟಿ ದೇಣಿಗೆ..!

ಚುನಾವಣಾ ದೇಣಿಗೆಯ ನಿಗೂಢ ಸತ್ಯ ಈಗ ಬಹಿರಂಗವಾಗುತ್ತಿದೆ. ರಾಜಕೀಯ ಪಕ್ಷಗಳು ನಡೆಯುತ್ತಿರುವುದೇ ಉದ್ಯಮಪತಿಗಳ ಹಣದಿಂದ ಎಂಬುದು ಇಂದಿನ ಸ್ಥಿತಿ..
ಎಲೆಕ್ಟ್ರಲ್ ಬಾಂಡ್ ಗೆ ಸಂಬಂಧಿಸಿದತೆ ಸರ್ವೋಚ್ಛ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದ ಮೇಲೆ ರಾಜಕೀಯ ಪಕ್ಷಗಳ ಮುಖವಾಡವೂ ಕಳಚಿ ಬೀಳುತ್ತಿದೆ.

ಈಗಿನ ಮಾಹಿತಿಯ ಪ್ರಕಾರ ಕೇವಲ ಬಿಜೆಪಿ ಮತ್ತು ಕಾಂಗ್ರೆಸ್ ಮಾತ್ರವಲ್ಲ ಪ್ರಾದೇಶಿಕ ಪಕ್ಷಗಳೂ ಫಲಾನುಭವಿಗಳೇ.. ಈ ಪಕ್ಷಗಳ ಪಟ್ಟಿಯಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಜೆಡಿಎಸ್ ಕೂಡ ಇದೆ. ಜೆಡಿಎಸ್ ದೇಣಿಗೆ ರೂಪದಲ್ಲಿ ಹಣ ಹರಿದು ಬಂದಿದ್ದು ಹೈದರಾಬಾದ್ ಮೂಲದ ಕಂಪೆನಿ ಒಂದರಿಂದ…! ಬಂದ ಹಣ ಸುಮಾರು ೭೫ ಕೋಟಿ ರೂಪಾಯಿಗಳು.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್‌ಡಿ ದೇವೇಗೌಡ ಅವರು ಭಾರತದ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವಿವರಗಳ ಪ್ರಕಾರ, ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ನಿಂದ 50 ಕೋಟಿ ರೂಪಾಯಿ ಎಲೆಕ್ಟೋರಲ್ ಬಾಂಡ್ ದೇಣಿಗೆ ಸಂಗ್ರಹಿಸಲಾಗಿದೆ ಎಂದಿದೆ. ಕೃಷ್ಣಾ ರೆಡ್ಡಿ ನಡೆಸುತ್ತಿರುವ, ಎಂಇಐಎಲ್ ಕಂಪನಿ ತೆಲಂಗಾಣ ಸರ್ಕಾರದ ಮಾರ್ಕ್ಯೂ ಯೋಜನೆಗಳಾದ ಕಾಳೇಶ್ವರಂ ಅಣೆಕಟ್ಟು ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ.

ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 2019 ರ ಮಾರ್ಚ್ 19 ರಂದು ಮೇಘಾ ಕನ್ಸ್ಟ್ರಕ್ಷನ್ಸ್ 10 ಕೋಟಿ ರೂ. ನೀಡಿದೆ ಎಂದು ಹೇಳಲಾಗಿದೆ. ಅದೇ ಕಂಪನಿ 2023 ರ ಏಪ್ರಿಲ್ 18 ರಂದು ಕರ್ನಾಟಕದಲ್ಲಿ ಅಸೆಂಬ್ಲಿ ಚುನಾವಣೆಗೆ ಮುನ್ನ 40 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿತ್ತು..

ರಾಯಭಾರ ಕಚೇರಿ ಡೆವಲಪರ್‌ಗಳು 2018 ರ ಅಸೆಂಬ್ಲಿ ಚುನಾವಣೆಯ ಮೊದಲು JD(S) ಗೆ 22 ಕೋಟಿ ರೂ.ಗಳನ್ನು ದೇಣಿಗೆ ನೀಡಿವೆ ಮತ್ತು ಮೇ 17, 2018 ರಂದು 10 ಕೋಟಿ ರೂ. ದೇಣಿಗೆಯನ್ನು ಕಂಪನಿ ನೀಡಿದೆ ಎಂಬ ವಿವರಗಳು ಈಗ ಬಹಿರಂಗವಾಗಿವೆ…

Author

error: