ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಬಿಸಿ ಇನ್ನೂ ತಣ್ಣಗಾಗಿಲ್ಲ. ಸುಮಾರು ೧೪ ಕ್ಷೇತ್ರಗಳಲ್ಲಿ ಬಂಡಾಯಗಾರರು ತೊಡೆ ತಟ್ಟಿ ನಿಂತಿದ್ದಾರೆ. ನಿಮ್ಮ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಮಾಡಿದವನು ನಾನೇ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿ ಕಳಿಸಿದರೂ ಪರಿಸ್ಥಿತಿ ಬದಲಾಗುತ್ತಿಲ್ಲ. ಬಂಡಾಯಗಾರರು ಸುಮ್ಮನಾಗುತ್ತಿಲ್ಲ.
ಈ ಪರಿಸ್ಥಿತಿಯಲ್ಲಿ ಬಿಜೆಪಿ ಹೈಕಮಾಂಡ್ ಹೊಸ ತಂತ್ರಗಾರಿಕೆಯೊಂದನ್ನು ಅನುಷ್ಠಾನಗೊಳಿಸುತ್ತಿದೆ. ಅದು ಬಂಡಾಯಗಾರರನ್ನು ಅವರ ಕ್ಷೇತ್ರದಿಂದಲೇ ದೂರ ಕಳುಹಿಸಿಬಿಡುವುದು. ಆಗ ಅವರು ಪಕ್ಶ್ಃಅದ ಅಧಿಕೃತ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಹೇಗಿದೆ ಐಡಿಯಾ ?
ಈ ತಂತ್ರದ ಭಾಗವಾಗಿ ಪ್ರೀತಂ ಗೌಡರನ್ನು ಹಾಸನದಿಂದ ಮೈಸೂರು ಮತ್ತು ಚಾಮರಾಜನಗರಕ್ಕೆ ಕಳುಹಿಸಲಾಗಿದೆ. ಅವರು ಅಲ್ಲಿನ ಚುನಾವಣೆ ಉಸ್ತುವಾರಿ. ಹೀಗಾಗಿ ಅವರು ಹಾಸನದಲ್ಲಿ ತರ್ಲೆ ಮಾಡುವಂತಿಲ್ಲ. ಪ್ರಜ್ವಲ್ ರೇವಣ್ಣ ವಿರುದ್ಧ ಕೆಲಸ ಮಾಡುವಂತಿಲ್ಲ.
ಅದೇ ರೀತಿ ಪ್ರತಾಪ ಸಿಂಹ ಅವರನ್ನು ಮೈಸೂರಿನಿಂದ ಬೇರೆಡೆಗೆ ಕಳುಹಿಸಲಾಗಿದೆ. ಅವರು ಅಲ್ಲಿ ಉಸ್ತುವಾರಿಯಾಗಿ ಕೆಲಸ ಮಾಡಬೇಕು. ಮೈಸೂರಿನಲ್ಲಿ ಯದುವೀರ್ ವಿರುದ್ಧ ಕೆಲಸ ಮಾಡಲು ಅವರಿಗೆ ಸಮಯವೇ ಸಿಗಬಾರದು.
ಈ ತಂತ್ರ ವರ್ಕ್ ಔಟ್ ಆಗುತ್ತಾ ?







