ವಿಜಯಪುರ : ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮ. ಇಲ್ಲಿನ ಪಾಳು ಬಿದ್ದ ಕೊಳವೆ ಬಾವಿಗೆ ಬಾಲಕನೊಬ್ಬ ಬಿದ್ದಿದ್ದಾನೆ.
ಆತ ಸಾವು ಬದುಕಿನ ಮಡುವೆ ಹೋರಾಡುತ್ತಿದ್ದಾನೆ. ದೇವರೇ ಈ ಬಾಲಕ ಬದುಕಿ ಬರಲಿ. ಬಾಲಕನ ಹೆಸರು ಸಾತ್ವಿಕ್ ಮುಜಗೊಂಡ, ಇನ್ನೂ ಎರಡು ವರ್ಷದ ಹಸುಳೆ. ಈತನನ್ನು ಸುರಕ್ಷಿತವಾಗಿ ಹೊರಕ್ಕೆ ತರುವ ಕಾರ್ಯಾಚರಣೆ ನಡೆಯುತ್ತಿದೆ.
ಒಂದೆಡೆ ಕಾರ್ಯಾಚರಣೆ. ಇನ್ನೊಂದೆಡೆ ಕುಟುಂಬದವರ ರೋದನ.. ಗ್ರಾಮದ ಜನರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದಾರೆ. ಎಲ್ಲೆಡೆ ಆತಂಕ ಮನೆ ಮಾಡಿದೆ.
ನೀರಿಗಾಗಿ ಸತೀಶ್ ಅವರು ಸುಮಾರು 500 ಅಡಿ ಆಳದ ಕೊಳವೆ ಬಾವಿ ಕೊರೆಸಿದ್ದರು. ಕೊಳೆವೆ ಬಾವಿಗೆ ಬಿದ್ದಿರುವ ಸಾತ್ವಿಕ್ 16 ರಿಂದ 20 ಅಡಿ ಆಳದಲ್ಲಿ ಸಿಲುಕಿರುವ ಮಾಹಿತಿ ಲಭ್ಯವಾಗಿದೆ. ಹಿರಿಯ ಅಧಿಕಾರಿಗಳು, ಪೊಲೀಸರು ಸ್ಥಳದಲ್ಲಿದ್ದಾರೆ.
