ಭಾರತದಲ್ಲಿ ಇ-ಕಾಮರ್ಸ್ ಕ್ಷೇತ್ರವು ಕಳೆದ ಕೆಲವು ವರ್ಷಗಳಲ್ಲಿ ಅಸಾಧಾರಣ ಬೆಳವಣಿಗೆಯನ್ನು ಕಂಡಿದೆ. ಮೊಬೈಲ್‌ನಲ್ಲಿ ಕೆಲವೇ ನಿಮಿಷಗಳಲ್ಲಿ ವಸ್ತುಗಳನ್ನು ಖರೀದಿಸುವ ಸಂಸ್ಕೃತಿ ಹೆಚ್ಚಾಗಿರುವುದರಿಂದ ಸಾವಿರಾರು ಕಂಪನಿಗಳು ತಮ್ಮ ವ್ಯವಹಾರವನ್ನು ಆನ್‌ಲೈನ್‌ಗೆ ವಿಸ್ತರಿಸಿವೆ. ಇದರ ಪರಿಣಾಮವಾಗಿ, ಉತ್ಪನ್ನಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವುದರಿಂದ ಹಿಡಿದು ಗ್ರಾಹಕರ ಮನೆಬಾಗಿಲಿಗೆ ತಲುಪುವವರೆಗಿನ ಸಂಪೂರ್ಣ ಕಾರ್ಯಾಚರಣೆಯನ್ನು ಸಮರ್ಥವಾಗಿ ನಿರ್ವಹಿಸುವ ಇ-ಕಾಮರ್ಸ್ ಕಾರ್ಯಾಚರಣೆ ಕಾರ್ಯನಿರ್ವಾಹಕ – E-commerce Operations Executive ಹುದ್ದೆಗೆ ಅಪಾರ ಬೇಡಿಕೆ ನಿರ್ಮಾಣವಾಗಿದೆ.
ಈ ಉದ್ಯೋಗವು ಕೇವಲ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದಲ್ಲ. ಇದು ಡೇಟಾ ನಿರ್ವಹಣೆ, ಗ್ರಾಹಕ ಸೇವೆ, ಲಾಜಿಸ್ಟಿಕ್ಸ್, ಮಾರಾಟ ವಿಶ್ಲೇಷಣೆ ಹಾಗೂ ತಂಡಗಳ ನಡುವೆ ಸಮನ್ವಯ ಸಾಧಿಸುವ ಬಹುಮುಖ ಜವಾಬ್ದಾರಿಗಳನ್ನು ಒಳಗೊಂಡಿರುವ ವೃತ್ತಿಯಾಗಿದೆ.
ಇ-ಕಾಮರ್ಸ್ ಆಪರೇಷನ್ಸ್ ಎಕ್ಸಿಕ್ಯೂಟಿವ್ ಯಾರು?
ಇ-ಕಾಮರ್ಸ್ ಆಪರೇಷನ್ ಎಕ್ಸಿಕ್ಯೂಟಿವ್ ಎಂದರೆ ಆನ್‌ಲೈನ್ ವ್ಯವಹಾರದ ದೈನಂದಿನ ಕಾರ್ಯಾಚರಣೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವ ವೃತ್ತಿಪರ.
ಇವರ ಪ್ರಮುಖ ಕೆಲಸಗಳು:
- ವೆಬ್‌ಸೈಟ್ ಅಥವಾ ಮಾರ್ಕೆಟ್‌ಪ್ಲೇಸ್‌ನಲ್ಲಿ ಉತ್ಪನ್ನಗಳನ್ನು ಅಪ್‌ಲೋಡ್ ಮಾಡುವುದು
- ಉತ್ಪನ್ನದ ಮಾಹಿತಿ, ಬೆಲೆ ಹಾಗೂ ಸ್ಟಾಕ್ ಅಪ್‌ಡೇಟ್ ಮಾಡುವುದು
- ಆರ್ಡರ್‌ಗಳನ್ನು ಪರಿಶೀಲಿಸಿ ಪ್ರಕ್ರಿಯೆಗೊಳಿಸುವುದು
- ರಿಟರ್ನ್ ಮತ್ತು ರಿಫಂಡ್ ನಿರ್ವಹಣೆ
- ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುವುದು
- ಡೆಲಿವರಿ ಪಾಲುದಾರರೊಂದಿಗೆ ಸಮನ್ವಯ
- ಮಾರಾಟ ವರದಿಗಳನ್ನು ಸಿದ್ಧಪಡಿಸುವುದು
- ದೈನಂದಿನ ಕಾರ್ಯಾಚರಣೆಯಲ್ಲಿ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸುವುದು
ಈ ಉದ್ಯೋಗದ ಮಹತ್ವ ಏನು?
ಒಂದು ಕಂಪನಿಯ ವೆಬ್‌ಸೈಟ್‌ನಲ್ಲಿ ಸಾವಿರಾರು ಉತ್ಪನ್ನಗಳಿರಬಹುದು. ಗ್ರಾಹಕರು ಆರ್ಡರ್ ಮಾಡಿದ ವಸ್ತು ಸರಿಯಾದ ಸಮಯಕ್ಕೆ, ಸರಿಯಾದ ಬೆಲೆಯಲ್ಲಿ, ಸರಿಯಾದ ವಿಳಾಸಕ್ಕೆ ತಲುಪಬೇಕಾದರೆ ಅದರ ಹಿಂದೆ ಕಾರ್ಯನಿರ್ವಹಿಸುವ ತಂಡದಲ್ಲಿ ಪ್ರಮುಖ ಪಾತ್ರ ಇ-ಕಾಮರ್ಸ್ ಆಪರೇಷನ್ಸ್ ಎಕ್ಸಿಕ್ಯೂಟಿವ್ ಅವರದು.
ಇವರು ಸಮರ್ಥವಾಗಿ ಕೆಲಸ ಮಾಡಿದರೆ:
- ಗ್ರಾಹಕರ ತೃಪ್ತಿ ಹೆಚ್ಚುತ್ತದೆ
- ಕಂಪನಿಯ ರೇಟಿಂಗ್ ಉತ್ತಮವಾಗುತ್ತದೆ
- ರಿಟರ್ನ್ ಪ್ರಮಾಣ ಕಡಿಮೆಯಾಗುತ್ತದೆ
- ಮಾರಾಟ ಹೆಚ್ಚಾಗುತ್ತದೆ
- ಲಾಭದಾಯಕತೆ ವೃದ್ಧಿಸುತ್ತದೆ
ಯಾವ ಸಂಸ್ಥೆಗಳಲ್ಲಿ ಉದ್ಯೋಗ ಸಿಗುತ್ತದೆ?
ಭಾರತದಲ್ಲಿ ಸಾವಿರಾರು ಕಂಪನಿಗಳು ಈ ಹುದ್ದೆಗೆ ನೇಮಕಾತಿ ಮಾಡುತ್ತಿವೆ.
ಕೆಲವು ಪ್ರಮುಖ ಕ್ಷೇತ್ರಗಳು:
- ಇ-ಕಾಮರ್ಸ್ ಕಂಪನಿಗಳು
- ಗ್ರಾಹಕರನ್ನು ನೇರವಾಗಿ ತಲುಪುವ – D2C ಬ್ರ್ಯಾಂಡ್‌ಗಳು
- ಫ್ಯಾಷನ್ ಕಂಪನಿಗಳು
- ಎಲೆಕ್ಟ್ರಾನಿಕ್ಸ್ ಕಂಪನಿಗಳು
- ಫಾರ್ಮಸಿ ಇ-ಕಾಮರ್ಸ್
- ಗ್ರಾಸರಿ ಪ್ಲಾಟ್‌ಫಾರ್ಮ್‌ಗಳು
- FMCG ಸಂಸ್ಥೆಗಳು
- ಲಾಜಿಸ್ಟಿಕ್ಸ್ ಕಂಪನಿಗಳು
- ಡಿಜಿಟಲ್ ರಿಟೇಲ್ ಸಂಸ್ಥೆಗಳು
ವಿದ್ಯಾರ್ಹತೆ
ಈ ಉದ್ಯೋಗಕ್ಕೆ ಸಾಮಾನ್ಯವಾಗಿ:
- ಪಿಯುಸಿ ನಂತರ ಡಿಪ್ಲೊಮಾ (ಕೆಲವು ಸಂಸ್ಥೆಗಳು)
- ಬಿಕಾಂ
- ಬಿಬಿಎ
- ಬಿಬಿಎಂ
- ಬಿಎ
- ಬಿಎಸ್ಸಿ
- ಬಿಇ
- ಎಂಬಿಎ ( ಆಪರೇಷನ್ಸ್/ ಮಾರ್ಕೆಟಿಂಗ್)
ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು.
ಅಗತ್ಯ ಕೌಶಲ್ಯಗಳು
ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ಕೆಳಗಿನ ಕೌಶಲ್ಯಗಳು ಮುಖ್ಯ.
ತಾಂತ್ರಿಕ ಕೌಶಲ್ಯಗಳು
- ಎಂಎಸ್ ಎಕ್ಸೆಲ್
- ಗೂಗಲ್ ಶೀಟ್ಸ್
- ಇನ್ವೆಂಟರಿ ಮ್ಯಾನೇಜ್ ಮೆಂಟ್
- ಆರ್ಡರ್ ಪ್ರೊಸೆಸಿಂಗ್
- ಮಾರ್ಕೆಟ್ ಪ್ಲೇಸ್ ಆಪರೇಷನ್ಸ್
- ಡೇಟಾ ಅನಾಲಿಸಿಸ್
- ಇಆರ್ ಪಿ ಸಾಫ್ಟವೇರ್ ಪರಿಚಯ
- ಸಿಆರ್ ಎಂ ಟೂಲ್ಸ್
- ಸಾಮಾನ್ಯ ವರದಿಗಾರಿಕೆ
ವೈಯಕ್ತಿಕ ಕೌಶಲ್ಯಗಳು
- ಸಮಯ ನಿರ್ವಹಣೆ
- ಸಮಸ್ಯೆ ಪರಿಹಾರ
- ಗ್ರಾಹಕರೊಂದಿಗೆ ಉತ್ತಮ ಸಂವಹನ
- ತಂಡದೊಂದಿಗೆ ಕೆಲಸ ಮಾಡುವ ಸಾಮರ್ಥ್ಯ
- ಒತ್ತಡದಲ್ಲಿಯೂ ಕೆಲಸ ಮಾಡುವ ಮನೋಭಾವ
- ವಿವರಗಳಿಗೆ ಹೆಚ್ಚಿನ ಗಮನ
ಯಾವ ಸಾಫ್ಟ್‌ವೇರ್‌ಗಳನ್ನು ಬಳಸುತ್ತಾರೆ?
ಕಂಪನಿಯ ಅವಶ್ಯಕತೆಗೆ ಅನುಗುಣವಾಗಿ:
- ಶಾಪಿಫೈ – Shopify
- ವೂ ಕಾಮರ್ಸ್ – WooCommerce
- ಮ್ಯಾಜೆಂಟೊ – Magento
- ಅಮೆಜಾನ್ ಸೆಲ್ಲರ್ ಸೆಂಟ್ರಲ್ – Amazon Seller Central
- ಫ್ಲಿಪ್ ಕಾರ್ಟ್ ಸೆಲ್ಲರ್ ಹಬ್ – Flipkart Seller Hub
- ಯುನಿಕಾಮರ್ಸ್ – Unicommerce
- ವಿನಿಕ್ಯುಲಮ್ – Vinculum
- ಸ್ಯಾಪ್ – SAP
- ಆರೇಕಲ್ ಇಆರ್ ಪಿ – Oracle ERP
- ಝೋಹೊ ಇನ್ವೆಂಟರಿ – Zoho Inventory
- ಮೈಕ್ರೊಸಾಫ್ಟ್ ಎಕ್ಸೆಲ್ – Microsoft Excel
ಕೆಲಸದ ಒಂದು ದಿನ ಹೇಗಿರುತ್ತದೆ?
ಒಬ್ಬ ಇ-ಕಾಮರ್ಸ್ ಆಪರೇಷನ್ಸ್ ಎಕ್ಸಿಕ್ಯೂಟಿವ್ ಅವರ ದಿನ ಹೀಗೆ ಸಾಗಬಹುದು.
- ಬೆಳಿಗ್ಗೆ ಹೊಸ ಆರ್ಡರ್‌ಗಳ ಪರಿಶೀಲನೆ
- ಸ್ಟಾಕ್ ಲಭ್ಯತೆ ದೃಢೀಕರಣ
- ಡೆಲಿವರಿ ತಂಡದೊಂದಿಗೆ ಸಮನ್ವಯ
- ಗ್ರಾಹಕರ ದೂರುಗಳ ಪರಿಶೀಲನೆ
- ರಿಟರ್ನ್ ಪ್ರಕ್ರಿಯೆ
- ಮಾರಾಟ ವರದಿ
- ಮುಂದಿನ ದಿನದ ಕಾರ್ಯಯೋಜನೆ
ಆರಂಭಿಕ ವೇತನ
ಭಾರತದಲ್ಲಿ ಸಾಮಾನ್ಯವಾಗಿ
- ಫ್ರೆಷರ್ – ₹3 ಲಕ್ಷದಿಂದ ₹5 ಲಕ್ಷ ವಾರ್ಷಿಕ
- 2–5 ವರ್ಷ ಅನುಭವ – ₹5 ಲಕ್ಷದಿಂದ ₹8 ಲಕ್ಷ
- ಹಿರಿಯ ವ್ಯವಸ್ಥಾಪಕರು – Senior Executive – ₹8 ಲಕ್ಷದಿಂದ ₹12 ಲಕ್ಷ
- ಪ್ರಕ್ರಿಯೆಗಳ ನಿರ್ವಾಹಕರು – Operations Manager – ₹12 ಲಕ್ಷದಿಂದ ₹20 ಲಕ್ಷ+
- ದೊಡ್ಡ ಇ-ಕಾಮರ್ಸ್ ಕಂಪನಿಗಳಲ್ಲಿ ಇದಕ್ಕಿಂತ ಹೆಚ್ಚಿನ ವೇತನವೂ ಸಾಧ್ಯ.
ವೃತ್ತಿ ಬೆಳವಣಿಗೆ
ಈ ಉದ್ಯೋಗದಲ್ಲಿ ಬೆಳವಣಿಗೆ ವೇಗವಾಗಿರುತ್ತದೆ.
ವೃತ್ತಿ ಹಂತಗಳು:
ತರಬೇತಿ – ಟ್ರೈನಿ
↓
ಪ್ರಕ್ರಿಯೆಗಳ ಕಾರ್ಯನಿರ್ವಾಹಕರು – Operations Executive
↓
Senior Operations Executive – ಹಿರಿಯ ಪ್ರಕ್ರಿಯೆಗಳ ಕಾರ್ಯನಿವಾಹಕರು
↓
Team Leader – ತಂಡದ ಮುಖ್ಯಸ್ಥರು
↓
Assistant Manager – ಸಹಾಯಕ ವ್ಯವಸ್ಥಾಪಕರು
↓
Operations Manager – ಪ್ರಕ್ರಿಯೆಗಳ ವ್ಯವಸ್ಥಾಪಕರು
↓
Senior Operations Manager – ಹಿರಿಯ ಪ್ರಕ್ರಿಯೆಗಳ ವ್ಯವಸ್ಥಾಪಕರು
↓
Head – E-commerce Operations ಇ-ಕಾಮರ್ಸ್ ಪ್ರಕ್ರಿಯೆಗಳ ಮುಖ್ಯಸ್ಥರು
↓
Director – Operations – ಪ್ರಕ್ರಿಯೆಗಳ ನಿರ್ದೆಶಕರು
ಭವಿಷ್ಯ ಹೇಗಿದೆ?
ಭಾರತದಲ್ಲಿ ಇ-ಕಾಮರ್ಸ್ ಮಾರುಕಟ್ಟೆ ವೇಗವಾಗಿ ವಿಸ್ತರಿಸುತ್ತಿದೆ. ನಗರಗಳಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿಯೂ ಆನ್‌ಲೈನ್ ಖರೀದಿ ಹೆಚ್ಚುತ್ತಿರುವುದರಿಂದ ಮುಂದಿನ ದಶಕದಲ್ಲಿ ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಕೃತಕ ಬುದ್ಧಿಮತ್ತೆ (AI), ಆಟೊಮೇಷನ್ ಮತ್ತು ಡೇಟ ಅನಾಲಿಟಿಕ್ಸ್ ಬಳಕೆ ಹೆಚ್ಚಾದರೂ, ಸಂಪೂರ್ಣ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುವ, ನಿರ್ಧಾರಗಳನ್ನು ತೆಗೆದುಕೊಳ್ಳುವ ಮತ್ತು ವಿವಿಧ ವಿಭಾಗಗಳನ್ನು ಸಮನ್ವಯಗೊಳಿಸುವ ಮಾನವ ಸಂಪನ್ಮೂಲದ ಅಗತ್ಯ ಮುಂದುವರಿಯಲಿದೆ. ಆದ್ದರಿಂದ, ಎಐ ಜೊತೆಗೆ ಕೆಲಸ ಮಾಡುವ ಸಾಮರ್ಥ್ಯ ಹೊಂದಿರುವ ಆಪರೇಶನ್ಸ್ ವೃತ್ತಿಪರರಿಗೆ ಉತ್ತಮ ಅವಕಾಶಗಳಿವೆ.
ಈ ಉದ್ಯೋಗ ಯಾರಿಗೆ ಸೂಕ್ತ?
ಈ ವೃತ್ತಿ ವಿಶೇಷವಾಗಿ ಸೂಕ್ತವಾಗಿರುವವರು:
- ಕಂಪ್ಯೂಟರ್‌ನಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರು
- ಡೇಟಾ ನಿರ್ವಹಣೆಯಲ್ಲಿ ಆಸಕ್ತಿ ಹೊಂದಿರುವವರು
- ಯೋಜಿತವಾಗಿ ಕೆಲಸ ಮಾಡುವವರು
- ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವ ಸಾಮರ್ಥ್ಯ ಹೊಂದಿರುವವರು
- ಗ್ರಾಹಕ ಸೇವೆಯಲ್ಲಿ ಆಸಕ್ತಿ ಇರುವವರು
- ರಿಟೇಲ್, ಲಾಜಿಸ್ಟಿಕ್ಸ್ ಮತ್ತು ಡಿಜಿಟಲ್ ವ್ಯವಹಾರ ಕ್ಷೇತ್ರದಲ್ಲಿ ಬೆಳೆಯಲು ಬಯಸುವವರು
ಇಂದಿನ ಡಿಜಿಟಲ್ ಆರ್ಥಿಕತೆಯಲ್ಲಿ ಇ-ಕಾಮರ್ಸ್ ಕಂಪನಿಯ ಯಶಸ್ಸು ಕೇವಲ ಉತ್ತಮ ಉತ್ಪನ್ನಗಳ ಮೇಲೆ ಅವಲಂಬಿತವಾಗಿಲ್ಲ; ಪರಿಣಾಮಕಾರಿ ಕಾರ್ಯಾಚರಣೆಯ ಮೇಲೂ ಅವಲಂಬಿತವಾಗಿದೆ. ಆ ಕಾರ್ಯಾಚರಣೆಯನ್ನು ಸಮರ್ಥವಾಗಿ ಮುನ್ನಡೆಸುವವರೇ ಇ-ಕಾಮರ್ಸ್ ಆಪರೇಷನ್ಸ್ ಎಕ್ಸಿಕ್ಯೂಟಿವ್. ಡೇಟಾ, ತಂತ್ರಜ್ಞಾನ ಮತ್ತು ಗ್ರಾಹಕ ಸೇವೆಯನ್ನು ಸಮನ್ವಯಗೊಳಿಸುವ ಈ ವೃತ್ತಿ, ಮುಂದಿನ ವರ್ಷಗಳಲ್ಲಿ ಅತ್ಯಂತ ಬೇಡಿಕೆಯ ಸೇವಾ ಮತ್ತು ರಿಟೇಲ್ ಉದ್ಯೋಗಗಳಲ್ಲಿ ಒಂದಾಗಿ ಮುಂದುವರಿಯುವ ಸಾಧ್ಯತೆ ಇದೆ. ಪದವೀಧರರಿಗೆ, ವಿಶೇಷವಾಗಿ ಡಿಜಿಟಲ್ ವಾಣಿಜ್ಯ ಕ್ಷೇತ್ರದಲ್ಲಿ ದೀರ್ಘಕಾಲೀನ ವೃತ್ತಿಜೀವನ ನಿರ್ಮಿಸಲು ಬಯಸುವವರಿಗೆ, ಇದು ಉತ್ತಮ ಆಯ್ಕೆಯಾಗಿದೆ.






