ನಾವು ಡಿ-ಮಾರ್ಟ್, ರಿಲಯನ್ಸ್ ಸ್ಮಾರ್ಟ್, ಲುಲು ಹೈಪರ್‌ಮಾರ್ಕೆಟ್, ಐಕಿಯಾ ಅಥವಾ ದೊಡ್ಡ ಶಾಪಿಂಗ್ ಮಾಲ್‌ಗಳಿಗೆ ಹೋದಾಗ ಸಾವಿರಾರು ವಸ್ತುಗಳು ಸರಿಯಾಗಿ ಜೋಡಣೆಗೊಂಡಿರುವುದು, ಸಿಬ್ಬಂದಿ ಗ್ರಾಹಕರಿಗೆ ಸಹಾಯ ಮಾಡುವುದು, ಬಿಲ್ಲಿಂಗ್ ಕೌಂಟರ್‌ಗಳು ಸುಗಮವಾಗಿ ಕಾರ್ಯನಿರ್ವಹಿಸುವುದು, ಸ್ಟಾಕ್ ಯಾವತ್ತೂ ಖಾಲಿಯಾಗದಿರುವುದು ಇವೆಲ್ಲವನ್ನೂ ಸಹಜವಾಗಿ ನೋಡುತ್ತೇವೆ.
ಆದರೆ ಇದರ ಹಿಂದೆ ಒಂದು ದೊಡ್ಡ ವ್ಯವಸ್ಥೆ ಕೆಲಸ ಮಾಡುತ್ತಿರುತ್ತದೆ. ಆ ವ್ಯವಸ್ಥೆಯ ಕೇಂದ್ರಬಿಂದುವೇ ಸ್ಟೋರ್ ಮ್ಯಾನೇಜರ್.
ಅನೇಕರು ಸ್ಟೋರ್ ಮ್ಯಾನೇಜರ್ ಎಂದರೆ ಅಂಗಡಿಯ ಮೇಲ್ವಿಚಾರಕ ಎಂದುಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ ಇದು ಲಕ್ಷಾಂತರ ರೂಪಾಯಿಗಳ ವ್ಯವಹಾರ, ನೂರಾರು ಸಿಬ್ಬಂದಿ ಮತ್ತು ಸಾವಿರಾರು ಗ್ರಾಹಕರ ಅನುಭವವನ್ನು ನಿರ್ವಹಿಸುವ ಜವಾಬ್ದಾರಿಯ ಹುದ್ದೆಯಾಗಿದೆ.
ಹಾಗಾದರೆ ಸ್ಟೋರ್ ಮ್ಯಾನೇಜರ್ ಯಾರು? ಈ ಉದ್ಯೋಗಕ್ಕೆ ಹೇಗೆ ಸೇರುವುದು? ಯಾವ ವಿದ್ಯಾರ್ಹತೆ ಬೇಕು? ಸಂಬಳ ಎಷ್ಟು? ಭವಿಷ್ಯ ಹೇಗಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
Store Manager ಯಾರು?
ಸ್ಟೋರ್ ಮ್ಯಾನೇಜರ್ ಎಂದರೆ ಒಂದು ಅಂಗಡಿ, ಸೂಪರ್‌ಮಾರ್ಕೆಟ್, ಹೈಪರ್‌ಮಾರ್ಕೆಟ್ ಅಥವಾ ರಿಟೇಲ್ ಔಟ್‌ಲೆಟ್‌ನ ಸಂಪೂರ್ಣ ಕಾರ್ಯಾಚರಣೆಯ ಜವಾಬ್ದಾರಿ ಹೊತ್ತಿರುವ ಅಧಿಕಾರಿ.
ಸರಳವಾಗಿ ಹೇಳುವುದಾದರೆ:
“ಒಂದು ಅಂಗಡಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ – ಸಿಇಒ (CEO)”
ಅಂಗಡಿಯ ಮಾರಾಟ, ಸಿಬ್ಬಂದಿ, ಗ್ರಾಹಕ ಸೇವೆ, ಸ್ಟಾಕ್, ಹಣಕಾಸು ಮತ್ತು ದಿನನಿತ್ಯದ ಕಾರ್ಯಾಚರಣೆಗಳೆಲ್ಲವೂ ಇವರ ಜವಾಬ್ದಾರಿಯೊಳಗೆ ಬರುತ್ತವೆ.
Store Manager ಕೆಲಸ ಏನು?
ಅಂಗಡಿಯಲ್ಲಿ ಎಲ್ಲವೂ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವುದು ಇವರ ಮುಖ್ಯ ಕೆಲಸ.
ಸಿಬ್ಬಂದಿ ನಿರ್ವಹಣೆ
- ಸಿಬ್ಬಂದಿ ನೇಮಕಾತಿ
- ಕೆಲಸ ಹಂಚಿಕೆ
- ಶಿಫ್ಟ್ ನಿರ್ವಹಣೆ
- ತರಬೇತಿ
ಮಾರಾಟ ಮೇಲ್ವಿಚಾರಣೆ
- ದಿನದ ಮಾರಾಟ ಪರಿಶೀಲನೆ
- ಮಾರಾಟ ಗುರಿ ಸಾಧನೆ
- ವಿಶೇಷ ಆಫರ್ ಯೋಜನೆ
ಸ್ಟಾಕ್ ನಿರ್ವಹಣೆ
- ಯಾವ ವಸ್ತು ಎಷ್ಟು ಇದೆ?
- ಯಾವುದು ಖಾಲಿಯಾಗುತ್ತಿದೆ?
- ಯಾವುದು ಹೆಚ್ಚು ಮಾರಾಟವಾಗುತ್ತಿದೆ?
ಎಂಬುದನ್ನು ಗಮನಿಸುವುದು.
ಗ್ರಾಹಕ ಸೇವೆ
- ದೂರು ಪರಿಹಾರ
- ಗ್ರಾಹಕರ ಅನುಭವ ಸುಧಾರಣೆ
- ವಿಶೇಷ ಸಂದರ್ಭಗಳಲ್ಲಿ ಸಹಾಯ
ಹಣಕಾಸು ನಿಯಂತ್ರಣ
- ದಿನದ ಆದಾಯ
- ವೆಚ್ಚ
- ನಷ್ಟ ತಡೆ
Store Manager ಯಾಕೆ ಮುಖ್ಯ?
ಒಂದು ದೊಡ್ಡ ಸೂಪರ್‌ಮಾರ್ಕೆಟ್‌ನಲ್ಲಿ ದಿನಕ್ಕೆ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಯಬಹುದು.
ಸ್ಟೋರ್ ಮ್ಯಾನೇಜರ್ ತಪ್ಪು ನಿರ್ಧಾರ ತೆಗೆದುಕೊಂಡರೆ:
- ಸ್ಟಾಕ್ ಸಮಸ್ಯೆ
- ಗ್ರಾಹಕರ ಅಸಮಾಧಾನ
- ಮಾರಾಟ ಕುಸಿತ
- ಸಿಬ್ಬಂದಿ ಸಮಸ್ಯೆ
ಉಂಟಾಗಬಹುದು. ಆದ್ದರಿಂದ ಕಂಪನಿಗಳು ಈ ಹುದ್ದೆಗೆ ಬಹಳ ಮಹತ್ವ ನೀಡುತ್ತವೆ.
ಈ ಉದ್ಯೋಗ ಕೇವಲ ಅಂಗಡಿ ಕೆಲಸವೇ?
ಇಲ್ಲ. ಇದು ದೊಡ್ಡ ತಪ್ಪು ಕಲ್ಪನೆ.
ಇಂದಿನ ಸ್ಟೋರ್ ಮ್ಯಾನೇಜರ್:
- ಡೇಟಾ ಅನಾಲಿಸ್ಟ್ (Data Analyst)
- ಟೀಂ ಲೀಡರ್ (Team Leader)
- ಸೇಲ್ಸ್ ಮ್ಯಾನೇಜರ್ (Sales Manager)
- ಆಪರೇಷನ್ಸ್ ಮ್ಯಾನೇಜರ್ (Operations Manager)
- ಗ್ರಾಹಕ ಸೇವಾ ಮುಖ್ಯಸ್ಥ (Customer Service Head)
ಇವೆಲ್ಲದರ ಸಂಯೋಜನೆಯಂತೆ ಕೆಲಸ ಮಾಡುತ್ತಾರೆ.
ಯಾವ ವಿದ್ಯಾರ್ಹತೆ ಬೇಕು?
ಈ ಕ್ಷೇತ್ರಕ್ಕೆ ವಿವಿಧ ಮಾರ್ಗಗಳಿವೆ.
ಪದವಿ
- ಬಿಕಾಂ
- ಬಿಬಿಎ
- ಬಿಬಿಎಂ
- ಬಿಎ
- ಬಿಎಸ್ಸಿ
ಯಾವುದೇ ಪದವಿ ಹೊಂದಿದವರು ಪ್ರವೇಶಿಸಬಹುದು.
ಎಂಬಿಎ (MBA)
ಚಿಲ್ಲರೆ ವ್ಯಾಪಾರ ನಿರ್ವಹಣೆ (Retail Management) ಅಥವಾ ಮಾರ್ಕೆಟಿಂಗ್ (Marketing) ನಲ್ಲಿ ಎಂಬಿಎ ಮಾಡಿದರೆ ವೇಗವಾಗಿ ಬೆಳವಣಿಗೆ ಪಡೆಯಬಹುದು.
ಯಾವ ವಿದ್ಯಾರ್ಥಿಗಳಿಗೆ ಇದು ಸೂಕ್ತ?
ಜನರೊಂದಿಗೆ ಕೆಲಸ ಮಾಡಲು ಇಷ್ಟಪಡುವವರು
ಗ್ರಾಹಕರು ಮತ್ತು ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕ ಇರುತ್ತದೆ.
ನಾಯಕತ್ವ ಕೌಶಲ್ಯ ಇರುವವರು
ತಂಡವನ್ನು ಮುನ್ನಡೆಸಬೇಕು.
ಸಂಖ್ಯೆಗಳ ಬಗ್ಗೆ ಆಸಕ್ತಿ ಇರುವವರು
ಮಾರಾಟ, ಲಾಭ, ಸ್ಟಾಕ್ ವಿಶ್ಲೇಷಣೆ ಮುಖ್ಯ.
ಸಮಸ್ಯೆ ಪರಿಹರಿಸುವವರು
ಪ್ರತಿದಿನ ಹೊಸ ಸವಾಲುಗಳು ಎದುರಾಗುತ್ತವೆ.
ಯಾವ ಕಂಪನಿಗಳಲ್ಲಿ ಅವಕಾಶಗಳಿವೆ?
ಭಾರತದ ರಿಟೇಲ್ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ.
ಪ್ರಮುಖ ಕಂಪನಿಗಳು
- ಡಿಮಾರ್ಟ್
- ರಿಲಾಯನ್ಸ್ ಸ್ಮಾರ್ಟ್
- ಲುಲು ಹೈಪರ್ ಮಾರ್ಕೆಟ್
- ಮೋರ್ ರಿಟೈಲ್
- ವಿಶಾಲ್ ಮೆಗಾ ಮಾರ್ಟ್
- ಐಕಿಯ
- ಸ್ಟಾರ್ ಬಜಾರ್
- ಸ್ಪೆನ್ಸರ್
- ಡೆಕೆಥ್ಲಾನ್ ಇತ್ಯಾದಿ
ಕರ್ನಾಟಕದಲ್ಲಿ ಅವಕಾಶಗಳು
ವಿಶೇಷವಾಗಿ:
- ಬೆಂಗಳೂರು
- ಮೈಸೂರು
- ಮಂಗಳೂರು
- ಹುಬ್ಬಳ್ಳಿ
- ಬೆಳಗಾವಿ
ನಗರಗಳಲ್ಲಿ ಅವಕಾಶಗಳು ಹೆಚ್ಚುತ್ತಿವೆ.
Store Manager ಆಗುವುದು ಹೇಗೆ?
ಸಾಮಾನ್ಯವಾಗಿ ನೇರವಾಗಿ ಸ್ಟೋರ್ ಮ್ಯಾನೇಜರ್ ಆಗುವುದಿಲ್ಲ.
ಬೆಳವಣಿಗೆಯ ಹಾದಿ:
ಮಾರಾಟ ಪ್ರತಿನಿಧಿ Sales Associate
ಮೊದಲಿಗೆ ಮಾರಾಟ ಪ್ರತಿನಿಧಿಯಾಗಿ ಕೆಲಸಕ್ಕೆ ಸೇರಬೇಕು. ಅಲ್ಲಿ ಕೆಲಸ, ಬದ್ಧತೆ, ಪ್ರಯತ್ನ ಮತ್ತು ಗುರಿ ಸಾಧನೆಯ ಮೇಲೆ ಮುಂಬಡ್ತಿ ನೀಡುತ್ತಾ ಹೋಗಲಾಗುತ್ತದೆ. ಅದು ಹೀಗೆ ಮುಂದುವರೆಯುತ್ತದೆ.
↓
ವಿಭಾಗಾಧಿಕಾರಿ Department Executive
↓
ಟೀಂ ಲೀಡರ್ Team Leader
↓
ಸಹಾಯಕ ಸ್ಟೋರ್ ಮ್ಯಾನೇಜರ್ Assistant Store Manager
↓
ಸ್ಟೋರ್ ಮ್ಯಾನೇಜರ್ Store Manager
ಸಂಬಳ ಎಷ್ಟು?
ಆರಂಭಿಕ ಹಂತ
₹20,000 – ₹35,000 ತಿಂಗಳಿಗೆ
ಸಹಾಯಕ ಸ್ಟೋರ್ ಮ್ಯಾನೇಜರ್
₹4 ಲಕ್ಷ – ₹8 ಲಕ್ಷ ವಾರ್ಷಿಕ
ಸ್ಟೋರ್ ಮ್ಯಾನೇಜರ್
₹6 ಲಕ್ಷ – ₹15 ಲಕ್ಷ ವಾರ್ಷಿಕ
ದೊಡ್ಡ ನಗರಗಳಲ್ಲಿ
₹20 ಲಕ್ಷಕ್ಕೂ ಹೆಚ್ಚು ಸಂಬಳ ಪಡೆಯುವ ಸ್ಟೋರ್ ಮ್ಯಾನೇಜರ್ ಗಳು ಕೂಡ ಇದ್ದಾರೆ.
ಕೆಲಸದ ಒತ್ತಡ ಇದೆಯೇ?
ಹೌದು.
ವಾರಾಂತ್ಯವೂ ಕೆಲಸ
ಶನಿವಾರ ಮತ್ತು ಭಾನುವಾರ ಹೆಚ್ಚು ಬ್ಯುಸಿ.
ಟಾರ್ಗೆಟ್ ಒತ್ತಡ
ಮಾರಾಟ ಗುರಿ ಸಾಧಿಸಬೇಕು.
ಸಿಬ್ಬಂದಿ ನಿರ್ವಹಣೆ
ಜನರೊಂದಿಗೆ ಕೆಲಸ ಮಾಡುವುದರಿಂದ ಮಾನವ ಸಂಬಂಧದ ಸವಾಲುಗಳು ಇರುತ್ತವೆ.
ಮಹಿಳೆಯರಿಗೆ ಈ ಕ್ಷೇತ್ರ ಸೂಕ್ತವೇ?
ಖಂಡಿತವಾಗಿಯೂ.
ಇಂದು ಅನೇಕ ದೊಡ್ಡ ರಿಟೇಲ್ ಚೈನ್‌ಗಳಲ್ಲಿ ಮಹಿಳಾ ಸ್ಟೋರ್ ಮ್ಯಾನೇಜರ ಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಕ್ಷೇತ್ರದಲ್ಲಿ:
- ನಾಯಕತ್ವ
- ಸಂವಹನ
- ಸಂಘಟನೆ ಕೌಶಲ್ಯ
ಬಹಳ ಮುಖ್ಯ.
AI ಬಂದರೆ ಈ ಉದ್ಯೋಗ ಹೋಗುತ್ತದೆಯೇ?
ಇದು ಬಹಳ ಆಸಕ್ತಿದಾಯಕ ಪ್ರಶ್ನೆ.
ಆನ್‌ಲೈನ್ ಶಾಪಿಂಗ್ ಹೆಚ್ಚಾದರೂ:
- ಡಿ-ಮಾರ್ಟ್
- ರಿಲಾಯನ್ಸ್ ಮಾರ್ಟ್
- ಲುಲು
- ಐಕಿಯ
ಹಾಗೂ ಭೌತಿಕ ಅಂಗಡಿಗಳ ಬೇಡಿಕೆ ಕಡಿಮೆಯಾಗಿಲ್ಲ.
ಎಐ ಸ್ಟಾಕ್ ವಿಶ್ಲೇಷಣೆ ಮಾಡಬಹುದು.
ಆದರೆ:
- ಸಿಬ್ಬಂದಿ ನಿರ್ವಹಣೆ
- ಗ್ರಾಹಕ ಸಮಸ್ಯೆ ಪರಿಹಾರ
- ನಾಯಕತ್ವ
ಇವುಗಳನ್ನು ಇನ್ನೂ ಮನುಷ್ಯರೇ ನಿರ್ವಹಿಸಬೇಕು.
ಹೀಗಾಗಿ ಸ್ಟೋರ್ ಮ್ಯಾನೇಜರ್ ಹುದ್ದೆ ಮುಂದಿನ ಹಲವು ವರ್ಷಗಳವರೆಗೆ ಪ್ರಸ್ತುತವಾಗಿರಲಿದೆ.
ಭವಿಷ್ಯ ಹೇಗಿದೆ?
ಭಾರತ ವಿಶ್ವದ ವೇಗವಾಗಿ ಬೆಳೆಯುತ್ತಿರುವ ರಿಟೇಲ್ ಮಾರುಕಟ್ಟೆಗಳಲ್ಲಿ ಒಂದಾಗಿದೆ.
ಹೊಸ:
- ಸೂಪರ್‌ಮಾರ್ಕೆಟ್‌ಗಳು
- ಹೈಪರ್‌ಮಾರ್ಕೆಟ್‌ಗಳು
- ಮಾಲ್‌ಗಳು
- ರಿಟೇಲ್ ಚೈನ್‌ಗಳು
ನಿರಂತರವಾಗಿ ಬೆಳೆಯುತ್ತಿವೆ.
ಇದರಿಂದ ಸ್ಟೋರ್ ಮ್ಯಾನೇಜರ್ ಗಳ ಬೇಡಿಕೆಯೂ ಹೆಚ್ಚುತ್ತಿದೆ.
ಈ ಉದ್ಯೋಗದ ದೊಡ್ಡ ಲಾಭ ಏನು?
ಬಹಳಷ್ಟು ಉದ್ಯೋಗಗಳಲ್ಲಿ ಬೆಳವಣಿಗೆ ನಿಧಾನವಾಗಿರಬಹುದು.
ಆದರೆ ರಿಟೇಲ್ ಕ್ಷೇತ್ರದಲ್ಲಿ:
- ಅನುಭವ
- ಕಾರ್ಯಕ್ಷಮತೆ
- ನಾಯಕತ್ವ
ಇದ್ದರೆ ವೇಗವಾಗಿ ಬಡ್ತಿ ಪಡೆಯಬಹುದು.
ಕೆಲವರು ಸ್ಟೋರ್ ಮ್ಯಾನೇಜರ್ ಆಗಿ ಆರಂಭಿಸಿ ವಲಯ ಪ್ರಾದೇಶಿಕ ವ್ಯವಸ್ಥಾಪಕ (Regional Manager) ಹಂತಕ್ಕೂ ತಲುಪುತ್ತಾರೆ.
ಸ್ಟೋರ್ ಮ್ಯಾನೇಜರ್ ಉದ್ಯೋಗವು ಕೇವಲ ಅಂಗಡಿ ನಿರ್ವಹಣೆಯ ಕೆಲಸವಲ್ಲ. ಅದು ನಾಯಕತ್ವ, ವ್ಯಾಪಾರ ನಿರ್ವಹಣೆ, ಗ್ರಾಹಕ ಸೇವೆ ಮತ್ತು ತಂಡ ನಿರ್ವಹಣೆಯ ಸಂಯೋಜನೆಯಾಗಿದೆ. ಎಂಬಿಎ ಮಾಡದಿದ್ದರೂ, ದೊಡ್ಡ ಕಚೇರಿಯಲ್ಲಿ ಕೆಲಸ ಮಾಡದಿದ್ದರೂ, ತಮ್ಮ ಸಾಮರ್ಥ್ಯದಿಂದ ದೊಡ್ಡ ಮಟ್ಟಕ್ಕೆ ಬೆಳೆಯಲು ಬಯಸುವ ಯುವಕರಿಗೆ ಇದು ಅತ್ಯುತ್ತಮ ವೃತ್ತಿ ಆಯ್ಕೆಯಾಗಬಹುದು.
ಮುಂದಿನ ಬಾರಿ ನೀವು ಡಿ-ಮಾರ್ಟ್ ಅಥವಾ ದೊಡ್ಡ ಸೂಪರ್‌ಮಾರ್ಕೆಟ್‌ಗೆ ಹೋದಾಗ ನೆನಪಿಡಿ – ಅಲ್ಲಿ ಸಾವಿರಾರು ವಸ್ತುಗಳಿಗಿಂತ ಮೌಲ್ಯವಾದದ್ದು ಆ ಅಂಗಡಿಯನ್ನು ಯಶಸ್ವಿಯಾಗಿ ನಡೆಸುವ ಸ್ಟೋರ್ ಮ್ಯಾನೇಜರ್ ಅವರ ನಿರ್ವಹಣಾ ಕೌಶಲ್ಯ.




