ಒಂದು ಕಾಲದಲ್ಲಿ ಕೋಡ್ ಬರೆಯುವುದು ಅಂದರೆ ದಿನಗಟ್ಟಲೆ ಕೀಬೋರ್ಡ್ ಮುಂದೆ ಕೂತು ಸಾವಿರ ಸಾಲು ಪ್ರೋಗ್ರಾಂ ಟೈಪ್ ಮಾಡುವುದು. ಈಗ ಪರಿಸ್ಥಿತಿ ಬದಲಾಗಿದೆ. ಓಪನ್ ಎಐ, ಗೂಗಲ್, ಮೈಕ್ರೊಸಾಫ್ಟ್ ಮುಂತಾದ ಕಂಪನಿಗಳ ಎಐ ಸಾಧನಗಳು ಕೆಲವೇ ನಿಮಿಷಗಳಲ್ಲಿ ಕೋಡ್ ಬರೆಯುತ್ತಿವೆ. ಇದನ್ನು ನೋಡಿ ಅನೇಕರು ಭಯಪಡುತ್ತಿದ್ದಾರೆ — “ಪ್ರೋಗ್ರಾಮರ್ ಕೆಲಸವೇ ಮುಗಿಯಿತು” ಎಂದು. ಆದರೆ ಸತ್ಯ ಬೇರೆ. ಎಐ ಕೆಲವು ಹಳೆಯ ಕೆಲಸಗಳನ್ನು ತೆಗೆದುಕೊಳ್ಳಬಹುದು, ಆದರೆ ಹೊಸ ಅವಕಾಶಗಳನ್ನು ಸಾವಿರಗಟ್ಟಲೆ ಸೃಷ್ಟಿಸುತ್ತಿದೆ. ವಿಶೇಷವಾಗಿ ಇಂಜಿನಿಯರ್‌ಗಳಿಗೆ ಇದು ಸುವರ್ಣಯುಗವಾಗಬಹುದು.
ಎಐ ಯಾವ ಕೆಲಸಗಳನ್ನು ಬದಲಾಯಿಸುತ್ತದೆ?
ಎಐ ಈಗ ಮಾಡಬಲ್ಲ ಕೆಲಸಗಳು:
- ಸಾಮಾನ್ಯ ಕೋಡ್ ಬರೆಯುವುದು
- ಪುನರಾವರ್ತಿತ ಟೆಸ್ಟಿಂಗ್
- ಬಗ್ ಹುಡುಕುವುದು
- ಡಾಕ್ಯುಮೆಂಟೇಶನ್ ತಯಾರಿಸುವುದು
- ಸರಳ ವೆಬ್‌ಸೈಟ್ / ಆಪ್ ನಿರ್ಮಾಣ
ಇವು ಹಿಂದೆ ಜೂನಿಯರ್ ಪ್ರೋಗ್ರಾಮರ್‌ಗಳ ಪ್ರಮುಖ ಕೆಲಸಗಳು. ಆದ್ದರಿಂದ ಹಳೆಯ ಮಾದರಿಯ “ಕೇವಲ ಕೋಡಿಂಗ್” ಕೆಲಸಗಳು ಕಡಿಮೆಯಾಗಬಹುದು. ಆದರೆ ಇದು ಅಂತ್ಯವಲ್ಲ — ಇದು ಪರಿವರ್ತನೆ.
ಇಂಜಿನಿಯರ್‌ಗಳಿಗೆ ಹೊಸ ಅವಕಾಶಗಳು
1. AI ಜೊತೆ ಕೆಲಸ ಮಾಡುವ ಇಂಜಿನಿಯರ್‌ಗಳಿಗೆ ಭಾರೀ ಬೇಡಿಕೆ
ಇನ್ನು ಮುಂದೆ ಕಂಪನಿಗಳು “ಕೋಡ್ ಟೈಪಿಸ್ಟ್” ಬೇಕೆಂದಲ್ಲ, “ಸಮಸ್ಯೆ ಪರಿಹರಿಸುವ ಇಂಜಿನಿಯರ್” ಬೇಕೆಂದು ಹುಡುಕುತ್ತವೆ.
ಅವಶ್ಯಕ ಕೌಶಲ್ಯಗಳು:
- ಸಮಸ್ಯೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು
- AI ಗೆ ಸರಿಯಾದ ಸೂಚನೆ (Prompt) ಕೊಡುವುದು
- AI ಕೊಟ್ಟ ಕೋಡ್ ಪರಿಶೀಲಿಸುವುದು
- ಸುರಕ್ಷತೆ, ಕಾರ್ಯಕ್ಷಮತೆ ನೋಡಿಕೊಳ್ಳುವುದು
- ದೊಡ್ಡ ಸಿಸ್ಟಂ ಡಿಸೈನ್ ಮಾಡುವುದು
2. Prompt Engineer – ಹೊಸ ಉದ್ಯೋಗ
AI ಗೆ ಸರಿಯಾದ ಪ್ರಶ್ನೆ ಕೇಳಿದರೆ ಅದ್ಭುತ ಉತ್ತರ ಸಿಗುತ್ತದೆ. ತಪ್ಪಾಗಿ ಕೇಳಿದರೆ ತಪ್ಪು ಫಲಿತಾಂಶ ಬರುತ್ತದೆ. ಇದಕ್ಕಾಗಿ Prompt Engineer ಎಂಬ ಹೊಸ ಕ್ಷೇತ್ರ ಬಂದಿದೆ.
ಈ ಕೆಲಸದಲ್ಲಿ:
- ಸರಿಯಾದ ಸೂಚನೆ ರಚನೆ
- AI output ಗುಣಮಟ್ಟ ಹೆಚ್ಚಿಸುವುದು
- Automation workflow ನಿರ್ಮಾಣ
- ವ್ಯವಹಾರ ಸಮಸ್ಯೆಗೆ AI ಪರಿಹಾರ ರೂಪಿಸುವುದು
ಮೆಕ್ಯಾನಿಕಲ್, ಸಿವಿಲ್, ಇಲೆಕ್ಟ್ರಾನಿಕ್ಸ್, ಇಲೆಕ್ಟ್ರಿಕಲ್, ವೈದ್ಯಕೀಯ, ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳ ಇಂಜಿನಿಯರ್‌ಗಳಿಗೆ ದೊಡ್ಡ ಅವಕಾಶ. ಈ ಕ್ಷೇತ್ರಗಳಲ್ಲಿ ಎಷ್ಟು ಪರಿಣತಿ ಸಾಧಿಸುತ್ತಾರೋ ಅವರಿಗೆ ಯಶಸ್ಸು ಖಚಿತ. ಏಕೆಂದರೆ AI ಗೆ ಕ್ಷೇತ್ರ ಜ್ಞಾನ ಬೇಕು. ಉದಾಹರಣೆಗೆ
3. Domain Engineers ಗೆ ಬೇಡಿಕೆ ಹೆಚ್ಚುತ್ತದೆ
- ಸ್ಮಾರ್ಟ್ ಕಾರ್ಖಾನೆ ಆಟೊಮೇಶನ್
- ಕೃಷಿ ಡೇಟಾ ವಿಶ್ಲೇಷಣೆ
- ಆಸ್ಪತ್ರೆ ರೋಗ ಪತ್ತೆ ಪರಿಕರಗಳು
- ನಿರ್ಮಾಣ ಸುರಕ್ಷತಾ ವ್ಯವಸ್ಥೆ
- ವಿದ್ಯುತ್ ಜಾಲದ ದಕ್ಷತೆ, ವಿಶ್ವಾಸಾರ್ಹತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುವ ಪ್ರಕ್ರಿಯೆ (power grid optimization)
ಕೇವಲ ಕಂಪ್ಯೂಟರ್ ಕೋಡ್ ಬರೆಯುವವರಿಗಿಂತ ಕ್ಷೇತ್ರ ತಜ್ಞತೆ ಮತ್ತು ಎಐ ಕೌಶಲ್ಯ ಇರುವವರಿಗೆ ಹೆಚ್ಚಿನ ಬೇಡಿಕೆ ಇದೆ.
4. ಎಐ ಟೂಲ್ ನಿರ್ಮಾಣ ಮಾಡಬಹುದು
ಎಐ ಬಳಸುವ ಬದಲು ಎಐ ಟೂಲ್ಸ್ ನಿರ್ಮಿಸುವ ಅವಕಾಶ ಇದೆ. ಉದಾಹರಣೆಗೆ ಚಾಟ್ ಬಾಟ್ ಪರಿಹಾರಗಳು, ಕನ್ನಡ ಧ್ವನಿ ಸಹಾಯಕಗಳು, ಸ್ಥಳೀಯ ವ್ಯಾಪಾರಗಳ ಆಟೊಮೆಶನ್ ಟೂಲ್ ಗಳು, ಶೈಕ್ಷಣಿಕ ಅಪ್ಲಿಕೇಶನ್ ಗಳು, ಸುದ್ದಿ ಸಂಕ್ಷೇಪ ಮಾಡುವ ಸುದ್ದಿ ಸಾರಾಂಶ ವೇದಿಕೆಗಳನ್ನು ಭಾರತೀಯ ಭಾಷೆಗಳಲ್ಲಿ ನಿರ್ಮಿಸುವ ದೊಡ್ಡ ಅವಕಾಶ ಇದೆ.
5. ಮಾನವ ಕೌಶಲ್ಯದ ಮೌಲ್ಯ ಹೆಚ್ಚುತ್ತದೆ
ಎಐಗೆ ನಾಯಕತ್ವ, ಸಂವಹನ, ತಂಡ ನಿರ್ವಹಣೆ, ಸೃಜನಶೀಲತೆ, ನಿರ್ಧಾರ ಸಾಮರ್ಥ್ಯ ಮತ್ತು ನೈತಿಕತೆಯಂತಹ ಮನುಷ್ಯಸಹಜ ಕೌಶಲ್ಯಗಳಿಲ್ಲ. ಯಾರಿಗೆ ಈ ಗುಣಗಳು ಹೆಚ್ಚಾಗಿರುತ್ತವೆಯೋ ಆ ಇಂಜಿನಿಯರುಗಳು ಮುಂದಿನ ನಾಯಕರು.
ಯಾವ ಇಂಜಿನಿಯರ್ ಹಿಂದುಳಿಯಬಹುದು?
- “ನಾನು coding ಮಾತ್ರ ಮಾಡುತ್ತೇನೆ” ಎನ್ನುವವರು
- ಹೊಸ ತಂತ್ರಜ್ಞಾನ ಕಲಿಯದವರು
- AI ವಿರುದ್ಧ ಹೋರಾಡುವವರು
- ಬದಲಾವಣೆ ಒಪ್ಪದವರು
ಯಾವ ಇಂಜಿನಿಯರ್ ಗೆಲ್ಲುತ್ತಾನೆ?
- AI ಜೊತೆ ಕೆಲಸ ಕಲಿಯುವವರು
- ಸಮಸ್ಯೆ ಪರಿಹಾರ ಮನೋಭಾವ ಇರುವವರು
- ಕ್ಷೇತ್ರ ಜ್ಞಾನ ಹೆಚ್ಚಿಸಿಕೊಳ್ಳುವವರು
- ಸಂವಹನ ಕಲೆ ಕಲಿಯುವವರು
- ನಿರಂತರ ಕಲಿಕೆಗೆ ಒಡ್ಡಿಕೊಳ್ಳುವವರು
ಭಾರತದ ಯುವಕರಿಗೆ ವಿಶೇಷ ಅವಕಾಶ
ಭಾರತವು ವಿಶ್ವದ ದೊಡ್ಡ ಇಂಜಿನಿಯರ್ ಜನಸಂಖ್ಯೆ ಹೊಂದಿದೆ. ಕಡಿಮೆ ವೆಚ್ಚದಲ್ಲಿ ಪ್ರತಿಭಾವಂತ ಜನಶಕ್ತಿ ಇದೆ. ಎಐ ಟೂಲ್ಸ್ ಬಳಸಿ ಭಾರತೀಯ ಯುವಕರು ಜಾಗತಿಕ ಮಾರುಕಟ್ಟೆಗೆ ಸೇವೆ ನೀಡಬಹುದು. ಫ್ರೀಲಾನ್ಸ್, ಸ್ಟಾರ್ಟ್ ಅಪ್, ಸಾಫ್ಟ್ ವೇರ್ ಸೇವೆಗಳು, ಪರಿಣತ ಸಲಹೆ, ಯಾಂತ್ರೀಕರಣದ ಅವಕಾಶಗಳು ಈಗಲೇ ಆರಂಭವಾಗಿವೆ.
ಎಐ ಪ್ರೋಗ್ರಾಮರ್‌ರನ್ನು ಸಂಪೂರ್ಣ ಬದಲಾಯಿಸುವುದಿಲ್ಲ. ಆದರೆ ಹಳೆಯ ರೀತಿಯ ಪ್ರೋಗ್ರಾಮಿಂಗ್ ಕೆಲಸವನ್ನು ಬದಲಾಯಿಸುತ್ತದೆ. ಕೋಡ್ ಬರೆಯುವವನಿಗಿಂತ, ಸಮಸ್ಯೆ ಪರಿಹರಿಸುವ ಇಂಜಿನಿಯರ್ ಭವಿಷ್ಯದ ರಾಜ. ಎಐ ನಿಮ್ಮ ಶತ್ರುವಲ್ಲ. ಅದು ನಿಮ್ಮ ಶಕ್ತಿಯನ್ನು 10 ಪಟ್ಟು ಹೆಚ್ಚಿಸುವ ಸಾಧನ.
ಕಲಿಯುವವರು ಉಳಿಯುತ್ತಾರೆ. ಹೊಂದಿಕೊಳ್ಳುವವರು ಗೆಲ್ಲುತ್ತಾರೆ. ಮುನ್ನಡೆಯುವವರು ಆಡಳಿತ ನಡೆಸುತ್ತಾರೆ.

