ಟೆಕ್ & ಐಟಿ ಉದ್ಯೋಗ| SuddiTV ಉದ್ಯೋಗ ವಿಶೇಷ
ಕೃತಕ ಬುದ್ಧಿಮತ್ತೆ (Artificial Intelligence – AI) ಇಂದು ಕೇವಲ ತಂತ್ರಜ್ಞಾನ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಬ್ಯಾಂಕಿಂಗ್, ಆರೋಗ್ಯ, ಶಿಕ್ಷಣ, ಕೃಷಿ, ಉತ್ಪಾದನೆ, ಮಾಧ್ಯಮ, ಸರ್ಕಾರಿ ಆಡಳಿತ, ಇ-ಕಾಮರ್ಸ್, ವಾಹನೋದ್ಯಮ ಸೇರಿದಂತೆ ಪ್ರತಿಯೊಂದು ಕ್ಷೇತ್ರವೂ ಎಐ ಆಧಾರಿತ ವ್ಯವಸ್ಥೆಗಳತ್ತ ವೇಗವಾಗಿ ಸಾಗುತ್ತಿದೆ. ಆದರೆ ಎಐ ತಂತ್ರಜ್ಞಾನವನ್ನು ಖರೀದಿಸುವುದಷ್ಟೇ ಸಾಕಾಗುವುದಿಲ್ಲ. ಅದನ್ನು ಸಂಸ್ಥೆಯ ಈಗಿರುವ ವ್ಯವಸ್ಥೆಗಳೊಂದಿಗೆ ಸಮರ್ಪಕವಾಗಿ ಜೋಡಿಸಿ, ಕಾರ್ಯನಿರ್ವಹಿಸುವಂತೆ ಮಾಡುವುದು ಅತ್ಯಂತ ಸವಾಲಿನ ಕೆಲಸ. ಈ ಜವಾಬ್ದಾರಿಯನ್ನು ನಿರ್ವಹಿಸುವ ಪರಿಣಿತರನ್ನೇ ಎಐ ಟ್ರಾನ್ಸ್ ಫಾರ್ಮೇಶನ್ & ಇಂಟಿಗ್ರೇಶನ್ ಇಂಜಿನಿಯರ್ಸ್ (AI Transformation & Integration Engineers) ಎಂದು ಕರೆಯಲಾಗುತ್ತದೆ.
ಇದು ವಿಶ್ವದಾದ್ಯಂತ ವೇಗವಾಗಿ ಬೆಳೆಯುತ್ತಿರುವ ಹೊಸ ಉದ್ಯೋಗಗಳಲ್ಲಿ ಪ್ರಮುಖವಾಗಿದೆ. ಎಐ ಮಾದರಿಗಳನ್ನು ಅಭಿವೃದ್ಧಿಪಡಿಸುವವರಿಗಿಂತಲೂ, ಅವುಗಳನ್ನು ವ್ಯವಹಾರದಲ್ಲಿ ಯಶಸ್ವಿಯಾಗಿ ಅಳವಡಿಸುವವರ ಅಗತ್ಯ ಈಗ ಹೆಚ್ಚಾಗಿದೆ.
AI Transformation & Integration Engineer ಎಂದರೆ ಯಾರು?
ಎಐ ಟ್ರಾನ್ಸ್ ಫಾರ್ಮೇಶನ್ & ಇಂಟಿಗ್ರೇಶನ್ ಇಂಜಿನಿಯರ್ ಎಂದರೆ ಸಂಸ್ಥೆಯ ವ್ಯವಹಾರ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಿ, ಯಾವ ಕೆಲಸಗಳನ್ನು ಎಐ ಮೂಲಕ ಸುಧಾರಿಸಬಹುದು ಎಂಬುದನ್ನು ಗುರುತಿಸಿ, ಎಐ ಉಪಕರಣಗಳನ್ನು ಈಗಿರುವ ಸಾಫ್ಟ್‌ವೇರ್, ERP, CRM, ವೆಬ್ ಅಪ್ಲಿಕೇಶನ್, ಮೊಬೈಲ್ ಅಪ್ಲಿಕೇಶನ್, ಕ್ಲೌಡ್ ಸೇವೆಗಳು ಹಾಗೂ ಡೇಟಾಬೇಸ್‌ಗಳೊಂದಿಗೆ ಸಂಯೋಜಿಸುವ ತಜ್ಞ.
ಇವರು ಕೇವಲ ಪ್ರೋಗ್ರಾಮರ್ ಅಲ್ಲ. ಸಂಸ್ಥೆಯ ವ್ಯವಹಾರ, ತಂತ್ರಜ್ಞಾನ ಮತ್ತು ಎಐ ಸಾಮರ್ಥ್ಯಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾರೆ.
ಇಂದಿನ ಜಗತ್ತಿನಲ್ಲಿ ಈ ಹುದ್ದೆ ಏಕೆ ಮಹತ್ವ ಪಡೆದಿದೆ?
2023ರಿಂದ ಜನರೇಟಿವ್ ಎಐ ತಂತ್ರಜ್ಞಾನ ವ್ಯಾಪಕವಾಗಿ ಬಳಕೆಗೆ ಬಂದ ನಂತರ ಬಹುತೇಕ ಕಂಪನಿಗಳು ಎಐ ಬಳಸಲು ಆರಂಭಿಸಿವೆ. ಆದರೆ ಹಲವು ಸಂಸ್ಥೆಗಳಲ್ಲಿ ಸಮಸ್ಯೆ ಏನೆಂದರೆ ಎಐ ಪ್ರತ್ಯೇಕ ಸಾಧನವಾಗಿಯೇ ಉಳಿದಿದೆ. ಅದು ಕಂಪನಿಯ ಮೂಲ ಕಾರ್ಯವ್ಯವಸ್ಥೆಯೊಂದಿಗೆ ಸರಿಯಾಗಿ ಬೆಸೆದುಕೊಳ್ಳುತ್ತಿಲ್ಲ.
ಉದಾಹರಣೆಗೆ,
- ಗ್ರಾಹಕ ಸೇವೆಯಲ್ಲಿ ChatGPT ಬಳಸುವುದು.
- ಆಸ್ಪತ್ರೆಯಲ್ಲಿ ವೈದ್ಯಕೀಯ ದಾಖಲೆಗಳ ವಿಶ್ಲೇಷಣೆ.
- ಬ್ಯಾಂಕ್‌ಗಳಲ್ಲಿ ವಂಚನೆ ಪತ್ತೆ.
- ಮಾಧ್ಯಮ ಸಂಸ್ಥೆಗಳಲ್ಲಿ ಸುದ್ದಿಯ ಸಾರಾಂಶ ರಚನೆ.
- ಕಾರ್ಖಾನೆಗಳಲ್ಲಿ ಮುನ್ಸೂಚಕ ನಿರ್ವಹಣೆಕ
- ಎಚ್ ಆರ್ ವಿಭಾಗದಲ್ಲಿ ಅಭ್ಯರ್ಥಿ ಆಯ್ಕೆ.
ಈ ಎಲ್ಲ ಕ್ಷೇತ್ರಗಳಲ್ಲಿ ಎಐ ಅನ್ನು ಪರಿಣಾಮಕಾರಿಯಾಗಿ ಅಳವಡಿಸುವ ಜವಾಬ್ದಾರಿ ಈ ಇಂಜಿನಿಯರ್‌ಗಳದು.
ಮುಖ್ಯ ಜವಾಬ್ದಾರಿಗಳು
ಎಐ ಟ್ರಾನ್ಸ್ ಫಾರ್ಮೇಶನ್ & ಇಂಟಿಗ್ರೇಶನ್ ಇಂಜಿನಿಯರ್ ಸಾಮಾನ್ಯವಾಗಿ ಈ ಕೆಲಸಗಳನ್ನು ನಿರ್ವಹಿಸುತ್ತಾರೆ.
ವ್ಯವಹಾರ ವಿಶ್ಲೇಷಣೆ
ಮೊದಲು ಸಂಸ್ಥೆಯ ಪ್ರಸ್ತುತ ಕಾರ್ಯವಿಧಾನವನ್ನು ಅಧ್ಯಯನ ಮಾಡುತ್ತಾರೆ. ಯಾವ ಕೆಲಸಗಳನ್ನು ಎಐ ಮೂಲಕ ವೇಗವಾಗಿ, ಕಡಿಮೆ ವೆಚ್ಚದಲ್ಲಿ ಮತ್ತು ಹೆಚ್ಚು ನಿಖರವಾಗಿ ಮಾಡಬಹುದು ಎಂಬುದನ್ನು ಗುರುತಿಸುತ್ತಾರೆ.
AI ಪರಿಹಾರಗಳ ಆಯ್ಕೆ
ಓಪನ್ ಎಐ, ಅಂತ್ರೋಪಿಕ್, ಗೂಗಲ್ ಜೆಮಿನಿ, ಮೈಕ್ರೊಸಾಫ್ಟ್ ಅಜುರ್ ಎಐ, ಎಡಬ್ಲೂ ಎಸ್ ಎಐ, ಮೆಟಾ ಲಿಯಾಮಾ ಸೇರಿದಂತೆ ವಿವಿಧ ಎಐ ವೇದಿಕೆಗಳಲ್ಲಿ ಸಂಸ್ಥೆಗೆ ಸೂಕ್ತವಾದ ಪರಿಹಾರವನ್ನು ಆಯ್ಕೆ ಮಾಡುತ್ತಾರೆ.
ಸಂಯೋಜನೆ (Integration)
ಎಪಿಐ ಗಳ ಮೂಲಕ ಎಐ ಸೇವೆಗಳನ್ನು ಈಗಿರುವ ಸಾಫ್ಟ್‌ವೇರ್‌ಗೆ ಜೋಡಿಸುತ್ತಾರೆ. ಸಿಆರ್ ಎಂ, ಇಆರ್ ಪಿ, ಫೈನಾನ್ಸ್ ಸಾಫ್ಟ್ ವೇರ್, ಆಸ್ಪತ್ರೆ ನಿರ್ವಹಣೆ ವ್ಯವಸ್ಥೆ, ಮಾನವ ಸಂಪನ್ಮೂಲ ಸಾಫ್ಟ್ ವೇರ್, ಸಿ ಎಂ ಎಸ್, ಮೊಬೈಲ್ ಅಪ್ಲಿಕೇಷನ್ ಗಳು, ವೆಬ್ ಸೈಟ್ ಇವೆಲ್ಲದರೊಂದಿಗೆ ಎಐ ಸಂಪರ್ಕ ಸಾಧಿಸುವ ಕೆಲಸ ಮಾಡುತ್ತಾರೆ.
ಸ್ವಯಂಚಾಲನೆ(Automation)
ಹಲವು ಮ್ಯಾನುಯಲ್ ಕೆಲಸಗಳನ್ನು ಎಐ ಮೂಲಕ ಸ್ವಯಂಚಾಲಿತಗೊಳಿಸುತ್ತಾರೆ. ಉದಾಹರಣೆಗೆ ಇಮೇಲ್ ಗೆ ಉತ್ತರಿಸುವುದು, ಇನ್ ವಾಯ್ಸ್ ಪ್ರಕ್ರಿಯೆ, ದಾಖಲೆ ವಿಶ್ಲೇಷಣೆ, ವರದಿ ತಯಾರಿಕೆ, ಗ್ರಾಹಕ ಬೆಂಬಲ, ಸಭೆಯ ಸಾರಾಂಶ ಮುಂತಾದ ಮತ್ತೆ ಮತ್ತೆ ಮಾಡಲೇಬೇಕಾದ ಕೆಲಸಗಳಿಗೆ ಎಐ ಅಳವಡಿಸಿ, ತನ್ನಷ್ಟಕ್ಕೆ ತಾನೇ ಆ ಕೆಲಸಗಳು ನಡೆದುಕೊಂಡು ಹೋಗುವ ಹಾಗೆ ಮಾಡುತ್ತಾರೆ.
ಮಾಹಿತಿ ನಿರ್ವಹಣೆ (Data Management)
ಎಐ ಉತ್ತಮ ಫಲಿತಾಂಶ ನೀಡಲು ಗುಣಮಟ್ಟದ ಡೇಟಾ ಅಗತ್ಯ. ಆದ್ದರಿಂದ ಅನಗತ್ಯ ಮಾಹಿತಿಗಳನ್ನು ಅಳಿಸುವುದು, ಮಾಹಿತಿಗಳ ಸರಣಿ ತಯಾರಿಕೆ, ಮಾಹಿತಿಗಳ ಭದ್ರತೆ, ಮಾಹಿತಿ ಬೇರೆಯವರಿಗೆ ಸಿಗದಂತೆ ಭದ್ರತೆ, ಅನುಸರಣೆ ಇವೆಲ್ಲವನ್ನೂ ನಿರ್ವಹಿಸುತ್ತಾರೆ.
ಬದಲಾವಣೆ ನಿರ್ವಹಣೆ (Change Management)
ಸಂಸ್ಥೆಯ ಸಿಬ್ಬಂದಿಗೆ ಹೊಸ ಎಐ ವ್ಯವಸ್ಥೆ ಬಳಸಲು ತರಬೇತಿ ನೀಡುವುದು ಕೂಡ ಇವರ ಕೆಲಸದ ಭಾಗ.
ಬಳಸುವ ಪ್ರಮುಖ ತಂತ್ರಜ್ಞಾನಗಳು
ಎಐ ಇಂಟಿಗ್ರೇಶನ್ ಎಂಜಿನಿಯರ್ ಹಲವಾರು ತಂತ್ರಜ್ಞಾನಗಳಲ್ಲಿ ಪರಿಣತಿ ಹೊಂದಿರಬೇಕು. ಪ್ರೊಗ್ರಾಮಿಂಗ್, ಪೈಥನ್, ಜಾವಾ, ಜಾವಾ ಸ್ಕ್ರಿಪ್ಟ್, ಸಿ ಪ್ರೊಗ್ರಾಂ, ಸಿಕ್ವೆಲ್, ಕ್ಲೌಡ್ ಪ್ಲಾಟ್ ಫಾರಂ, ಮೈಕ್ರೊಸಾಫ್ಟ್ ಅಜುರ್, ಎಡಬ್ಲೂ ಎಸ್, ಗೂಗಲ್ ಕ್ಲೌಡ್ ತಂತ್ರಜ್ಞಾನಗಳನ್ನು ಸಾಮಾನ್ಯವಾಗಿ ಬಳಸಬೇಕಾಗುತ್ತದೆ.
ಜೊತೆಗೆ ಎಐ ಪ್ಲಾಟ್ ಫಾರಂ ಗಳಾದ ಓಪನ್ ಎಐ ಎಪಿಐ, ಅಜ್ಯುರ್ ಓಪನ್ ಎಐ, ಜೆಮಿನಿ ಎಪಿಐ, ಕ್ಲೌಡ್, ಲಿಯಾಮಾ ಮಾಡೆಲ್ ಗಳು, ಹಗ್ಗಿಂಗ್ ಫೇಸ್ ಇವುಗಳನ್ನು ಉಪಯೋಗಿಸುತ್ತಾರೆ.
ಸ್ವಯಂಚಾಲನೆಯ ಸಾಧನಗಳಾಗಿ (Automation Tools) ಮೈಕ್ರೊಸಾಫ್ಟ್ ಪವರ್ ಆಟೊಮೇಟ್, ಝೇಪಿಯರ್, ಎನ್ 8ಎನ್, ಯುಐ ಪಾತ್, ಮೇಕ್ ಡಾಟ್ ಕಾಮ್, ಲ್ಯಾಂಗ್ ಚೈನ್, ಲಿಯಾಮಾ ಇಂಡೆಕ್ಸ್ ಅನ್ನು ಬಳಸುತ್ತಾರೆ.
ಡಾಟಾ ಬೇಸ್ ಗಳಾಗಿ PostgreSQL, ಮೊಂಗೊ ಡಿಬಿ, ಸಿಕ್ವಲ್ ಸರ್ವರ್, ಮೈಸಿಕ್ವೆಲ್, ರೆಡಿಸ್, ವೆಕ್ಟರ್ ಡೇಟಾಬೇಸಸ್ ಬಳಸಲಾಗುತ್ತದೆ. ಡೆವೆಲಪರ್ ಆಪರೇಟಿಂಗ್ ಸಿಸ್ಟಂಗಳಾಗಿ ಡಾಕರ್, ಕ್ಯುಬರ್ ನೀಟ್ಸ್, ಗಿಟ್ ಹಬ್, ಸಿಐ/ಸಿಡಿ ಇರುತ್ತವೆ.
ಬೇಕಾಗುವ ಕೌಶಲ್ಯಗಳು
ತಾಂತ್ರಿಕ ಜ್ಞಾನ ಮಾತ್ರ ಸಾಕಾಗುವುದಿಲ್ಲ. ಈ ಹುದ್ದೆಗೆ ಕೆಳಗಿನ ಸಾಫ್ಟ್ ಸ್ಕಿಲ್ಸ್ ಕೂಡ ಅತ್ಯಗತ್ಯ.
- ಸಮಸ್ಯೆ ವಿಶ್ಲೇಷಣೆ,
- ವ್ಯವಹಾರ ಯೋಚನೆ,
- ಸಂವಹನ,
- ನಾಯಕತ್ವ,
- ದಾಖಲೆ ನಿರ್ವಹಣೆ,
- ಯೋಜನೆ ನಿರ್ವಹಣೆ,
- ತಂಡ ಸಮನ್ವಯತೆ,
- ಗ್ರಾಹಕರೊಂದಿಗೆ ಸಂವಹನ, ಕಲಿಕೆಯ ಮನಸ್ಥಿತಿ ಇರಬೇಕು.
ಶೈಕ್ಷಣಿಕ ಅರ್ಹತೆ
ಸಾಮಾನ್ಯವಾಗಿ
- ಬಿಇ,
- ಬಿಟೆಕ್,
- ಎಂಟೆಕ್,
- ಎಂಸಿಎ,
- ಬಿಸಿಎ+ ಅನುಭವ,
- ಬಿಎಸ್ ಸಿ ಕಂಪ್ಯೂಟರ್ ಸೈನ್ಸ್,
- ಎಐ ಅಥವಾ ಡೇಟಾ ಸೈನ್ಸ್ ನಲ್ಲಿ ಪ್ರಮಾಣಪತ್ರ,
- ಕೌಡ್ ಪ್ರಮಾಣಪತ್ರ ಇದ್ದರೆ ಉತ್ತಮ ಅವಕಾಶಗಳಿವೆ.
ಯಾವ ಪ್ರಮಾಣಪತ್ರಗಳು ಸಹಾಯಕ?
- ಮೈಕ್ರೊಸಾಫ್ಟ್ ಎಐ ಎಂಜಿನಿಯರ್,
- ಆಜುರ್ ಎಐ ಎಂಜಿನಿಯರ್ ಅಸೋಸಿಯೇಟ್
- ಎಡಬ್ಲೂ ಎಸ್ ಮಷಿನ್ ಲರ್ನಿಂಗ್
- ಗೂಗಲ್ ಕ್ಲೌಡ್ ಎಐ
- ಓಪನ್ ಎಐ ಎಪಿಐ ಡೆವೆಲೊಪ್ಮೆಂಟ್
- ಲ್ಯಾಂಗ್ ಚೈನ್ ಪ್ರಮಾಣಪತ್ರ,
- ಪೈಥನ್ ಪ್ರಮಾಣಪತ್ರ
- ಡೇಟಾ ಎಂಜಿನಿಯರಿಂಗ್
- ಪ್ರಾಮ್ಟ್ ಎಂಜಿನಿಯರಿಂಗ್
ಸಂಬಳ ಎಷ್ಟು?
ಭಾರತದಲ್ಲಿ ಈ ಕ್ಷೇತ್ರದ ಸಂಬಳ ವೇಗವಾಗಿ ಏರುತ್ತಿದೆ.
Fresher ಗೆ ₹8 ಲಕ್ಷ – ₹15 ಲಕ್ಷ ವಾರ್ಷಿಕ ,
2–5 ವರ್ಷ ಅನುಭವ – ₹15 ಲಕ್ಷ – ₹30 ಲಕ್ಷ
5–10 ವರ್ಷ ಅನುಭವ – ₹30 ಲಕ್ಷ – ₹60 ಲಕ್ಷ
Senior AI Architect – ₹60 ಲಕ್ಷ – ₹1.2 ಕೋಟಿ ಅಥವಾ ಅದಕ್ಕಿಂತ ಹೆಚ್ಚು.
ಅಂತರರಾಷ್ಟ್ರೀಯ ಕಂಪನಿಗಳಲ್ಲಿ ಸಂಬಳ ಇನ್ನೂ ಹೆಚ್ಚಿರಬಹುದು.
ಉದ್ಯೋಗ ನೀಡುವ ಪ್ರಮುಖ ಕ್ಷೇತ್ರಗಳು
- ಐಟಿ ಕಂಪನಿಗಳು
- ಬ್ಯಾಂಕಿಂಗ್
- ಆರೋಗ್ಯ ಕಾಳಜಿ
- ಉತ್ಪಾದನೆ
- ಚಿಲ್ಲರೆ ವ್ಯಾಪಾರ
- ಮಾಧ್ಯಮ
- ಟೆಲಿಕಾಂ
- ಸರಕಾರಿ ಡಿಜಿಟಲ್ ಯೋಜನೆಗಳು
- ಎಜ್ಯುಟೆಕ್
- ಫಿನ್ ಟೆಕ್
- ವಿಮೆ
- ಲಾಜಿಸ್ಟಿಕ್ಸ್
- ಆಟೊಮೊಬೈಲ್
- ರಕ್ಷಣಾ ತಂತ್ರಜ್ಞಾನ
ಭಾರತದ ಪ್ರಮುಖ ನೇಮಕಾತಿ ಸಂಸ್ಥೆಗಳು
ಭಾರತದಲ್ಲಿ ಅನೇಕ ಸಂಸ್ಥೆಗಳು AI ಪರಿವರ್ತನೆ ಮತ್ತು ಸಂಯೋಜನೆ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿವೆ. ಅವುಗಳಲ್ಲಿ ಪ್ರಮುಖವಾಗಿ:
- ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS)
- ಇನ್ಫೋಸಿಸ್
- ವಿಪ್ರೋ
- ಟೆಕ್ ಮಹೀಂದ್ರ
- ಎಚ್‌ಸಿಎಲ್ ಟೆಕ್ನಾಲಜೀಸ್
- ಆಕ್ಸೆಂಚರ್ ಇಂಡಿಯಾ
- ಕ್ಯಾಪ್‌ಜೆಮಿನಿ
- ಕಾಗ್ನಿಜೆಂಟ್
- ಐಬಿಎಂ ಇಂಡಿಯಾ
- ಮೈಕ್ರೋಸಾಫ್ಟ್ ಇಂಡಿಯಾ
- ಗೂಗಲ್ ಇಂಡಿಯಾ
- ಅಮೆಜಾನ್ ವೆಬ್ ಸರ್ವಿಸಸ್ (AWS)
- ಓರಾಕಲ್
- ಡೆಲೊಯಿಟ್
- PwC
- EY
- KPMG
ಭವಿಷ್ಯದ ಅವಕಾಶಗಳು
ಮುಂದಿನ ಐದು ವರ್ಷಗಳಲ್ಲಿ ಎಐ ಅಭಿವೃದ್ಧಿಗಿಂತ ಎಐ ಅಳವಡಿಕೆ ಕ್ಷೇತ್ರದಲ್ಲೇ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆ ಇದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳೂ ಸಹ ಎಐ ಬಳಕೆಯನ್ನು ಅಳವಡಿಸಿಕೊಳ್ಳುತ್ತಿರುವುದರಿಂದ ಎಐ ಟ್ರಾನ್ಸ್ ಫಾರ್ಮೇಶನ್ & ಇಂಟಿಗ್ರೇಶನ್ ಇಂಜಿನಿಯರ್ ಗಳಿಗೆ ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಬೇಡಿಕೆ ಮುಂದುವರಿಯಲಿದೆ.
ವಿಶೇಷವಾಗಿ ಎಐ ಆಡಳಿತ, ಎಐ ಭದ್ರತೆ, ಜವಾಬ್ದಾರಿಯುತ ಎಐ, ವಾಣಿಜ್ಯಿಕ ಎಐ ವಿನ್ಯಾಸ, ಎಐ ಆಪರೇಷನ್ಸ್ (AIOps) ಮತ್ತು ಇಂಟೆಲಿಜೆಂಟ್ ಆಟೊಮೇಷನ್ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ಮೂಡಿಬರುತ್ತಿವೆ.
ಈ ವೃತ್ತಿ ಯಾರಿಗೆ ಸೂಕ್ತ?
- ಸಾಫ್ಟ್‌ವೇರ್ ಅಭಿವೃದ್ಧಿಯಲ್ಲಿ ಆಸಕ್ತಿ ಇರುವವರಿಗೆ.
- ಎಐ ತಂತ್ರಜ್ಞಾನವನ್ನು ವ್ಯವಹಾರದಲ್ಲಿ ಬಳಸುವ ಕುತೂಹಲ ಹೊಂದಿರುವವರಿಗೆ.
- ಸಮಸ್ಯೆಗಳನ್ನು ವಿಶ್ಲೇಷಿಸಿ ಪರಿಹಾರ ರೂಪಿಸಲು ಇಷ್ಟಪಡುವವರಿಗೆ.
- ಕ್ಲೌಡ್, ಎಪಿಐ ಮತ್ತು ಆಟೊಮೇಷನ್ ತಂತ್ರಜ್ಞಾನಗಳಲ್ಲಿ ಪರಿಣತಿ ಪಡೆಯಲು ಬಯಸುವವರಿಗೆ.
- ಹೆಚ್ಚಿನ ಸಂಬಳದ ಜಾಗತಿಕ ವೃತ್ತಿಜೀವನವನ್ನು ಗುರಿಯಾಗಿಸಿಕೊಂಡಿರುವ ಯುವಕರಿಗೆ.
ಎಐ ಟ್ರಾನ್ಸ್ ಫಾರ್ಮೇಶನ್ & ಇಂಟಿಗ್ರೇಶನ್ ಇಂಜಿನಿಯರ್ ಎನ್ನುವುದು ಕೇವಲ ಮತ್ತೊಂದು ಐಟಿ ಉದ್ಯೋಗವಲ್ಲ; ಇದು ಸಂಸ್ಥೆಗಳ ಡಿಜಿಟಲ್ ಭವಿಷ್ಯವನ್ನು ರೂಪಿಸುವ ಪ್ರಮುಖ ಜವಾಬ್ದಾರಿ. ಎಐ ಮಾದರಿಗಳನ್ನು ನಿರ್ಮಿಸುವ ಪರಿಣಿತರು ಅಗತ್ಯವಾದಂತೆ, ಅವುಗಳನ್ನು ವ್ಯವಹಾರದಲ್ಲಿ ಯಶಸ್ವಿಯಾಗಿ ಅಳವಡಿಸಿ ನೈಜ ಮೌಲ್ಯ ಸೃಷ್ಟಿಸುವ ಇಂಜಿನಿಯರ್‌ಗಳ ಪಾತ್ರವೂ ಅಷ್ಟೇ ನಿರ್ಣಾಯಕವಾಗಿದೆ.
ಎಐ ಯುಗದಲ್ಲಿ ತಾಂತ್ರಿಕ ಜ್ಞಾನ, ವ್ಯವಹಾರ ಅರಿವು ಮತ್ತು ನಿರಂತರ ಕಲಿಕೆಯ ಮನೋಭಾವವನ್ನು ಬೆಳೆಸಿಕೊಂಡವರು ಈ ಕ್ಷೇತ್ರದಲ್ಲಿ ದೀರ್ಘಕಾಲೀನ ಮತ್ತು ಅತ್ಯಂತ ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸಬಹುದು. ಭಾರತ ಜಾಗತಿಕ ಎಐ ಕೇಂದ್ರವಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ, ಎಐ ಟ್ರಾನ್ಸ್ ಫಾರ್ಮೇಶನ್ & ಇಂಟಿಗ್ರೇಶನ್ ಇಂಜಿನಿಯರ್ ಹುದ್ದೆ ಮುಂದಿನ ದಶಕದ ಅತ್ಯಂತ ಭರವಸೆಯ ವೃತ್ತಿಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದೆ.






