ತಾಜಾ ಸುದ್ದಿ: ಬೆಂಗಳೂರಿಗೆ ಮಳೆ ಎಚ್ಚರಿಕೆ | GTTC ಅರ್ಜಿ ಆರಂಭ | IPL ಫೈನಲ್ ಇಂದು
ಹದಿನಾಲ್ಕು ಕ್ಷೇತ್ರಗಳ ಜನ ತೀರ್ಪು ಮತಪೆಟ್ಟಿಗೆಯಲ್ಲಿ. ಪ್ರತಿಶತ ೬೯ ರಷ್ಟು ಮತದಾನ.
ರಾಜ್ಯದ ಅರ್ಧದಷ್ಟು ಕ್ಶೇತ್ರಗಳ ಮತದಾನ ಮುಗಿದಿದೆ. ಮತದಾರರ ತೀರ್ಪು ಮತ ಪೆಟ್ಟಿಗೆಯಲ್ಲಿ ಬದ್ರವಾಗಿದೆ. ಈಗಿನ ಮಾಹಿತಿ ಪ್ರಕಾರ ರಾಜ್ಯದಲ್ಲಿ ಶೇ.69.23 ರಷ್ಟು ಮತದಾನವಾಗಿದೆ.
ಮಂಡ್ಯದಲ್ಲಿ ದಾಖಲೆಯ ಶೇ.81.48 ರಷ್ಟು ಮತದಾನವಾಗಿದೆ, ಬೆಂಗಳೂರು ಕೇಂದ್ರದಲ್ಲಿ ಶೇ.52.81 ರಷ್ಟು ಮತದಾರರು ಮತ ಹಾಕಿದ್ದಾರೆ. ಇದು ಅತ್ಯಂತ ಕಡಿಮೆ ಪ್ರಮಾಣದ ಮತದಾನ.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಶೇ.76.06, ಹಾಸನದಲ್ಲಿ ಶೇ.77.51, ದಕ್ಷಿಣ ಕನ್ನಡದಲ್ಲಿ 77.43, ಚಿತ್ರದುರ್ಗದಲ್ಲಿ ಶೇ.73.11 ರಷ್ಟು, ತುಮಕೂರಿನಲ್ಲಿ ಶೇ.77.70, ಮಂಡ್ಯದಲ್ಲಿ ಶೇ.81.48, ಮೈಸೂರಿನಲ್ಲಿ ಶೇ.70.45 ರಷ್ಟು, ಚಾಮರಾಜನಗರದಲ್ಲಿ ಶೇ.76.59 ರಷ್ಟು, ಬೆಂಗಳೂರು ಗ್ರಾಮಾಂತರದಲ್ಲಿ ಶೇ.67.29 ರಷ್ಟು, ಬೆಂಗಳೂರು ಉತ್ತರದಲ್ಲಿ ಶೇ.54.42, ಬೆಂಗಳೂರು ಕೇಂದ್ರ ಶೇ.52.81, ಬೆಂಗಳೂರು ದಕ್ಷಿಣ ಶೇ.53.15, ಚಿಕ್ಕಬಳ್ಳಾಪುರ ಶೇ.76.82, ಕೋಲಾರದಲ್ಲಿ ಶೇ.78.07 ರಷ್ಟು ಮತದಾನ ನಡೆದಿದೆ.
ಕೆಲವೆಡೆ ಗೊಂದಲ ನಿರ್ಮಾಣವಾಗಿ, ಚಾಮರಾಜನಗರದಲ್ಲಿ ಗ್ರಾಮವೊಂದರಲ್ಲಿ ಮೂಲಸೌಕರ್ಯ ನೀಡದೇ ಇದ್ದುದ್ದಕ್ಕೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು ಹೊರತುಪಡಿಸಿದರೆ ರಾಜ್ಯದಲ್ಲಿ ಮತದಾನ ಬಹುತೇಕ ಶಾಂತಿಯುತವಾಗಿತ್ತು.
