ವಿಶ್ವಕಪ್ ಗೆ ಭಾರತ ತಂಡ; ಸಮರ್ಥಿಸಿಕೊಂಡ ನಾಯಕ ರೋಹಿತ್.

ವೆಸ್ಟ್ ಇಂಡೀಸ್ ಮತ್ತು ಅಮೇರಿಕದಲ್ಲಿ ನಡೆಯುವ ವಿಶ್ವ ಕಪ್ ಈಗಲೇ ಸದ್ದು ಮಾಡಲು ಪ್ರಾರಂಬಿಸಿದೆ. ವಿಶ್ವದ ಹಲವು ದೇಶಗಳು ತಮ್ಮ ತಂಡವನ್ನು ಅಯ್ಕೆ ಮಾಡಿವೆ. ಐ ಪಿ ಎಲ್ ಗುಂಗಿನಲ್ಲಿರುವ ಭಾರತ ಕೂಡ ತಂಡವನ್ನು ಪ್ರಕಟಿಸಿದೆ.
ಭಾರತ ತಂಡ ಕುರಿತು ಆಯ್ಕೆ ಸಮಿತಿಯ ಅಧ್ಯಕ್ಶ್ಃಅ ಅಜಿತ್ ಅಗರಕರ್ ಮತ್ತು ನಾಯಕ ರೋಹಿತ್ ಶರ್ಮಾ ಇಂದು ಪತ್ರಿಕಾಗೋಷ್ಟಿ ನಡೆಸಿದರು.
ಕೇವಲ ಐ ಪಿ ಎಲ್ ಸಾಧನೆಯ ಆಧಾರದ ಮೇಲೆ ವಿಶ್ವ ಕಪ್ ತಂಡವನ್ನು ಆಯ್ಕೆ ಮಾಡಲಾಗದು. ನಾವು ಹಲವು ತಿಂಗಳುಗಳಿಂದ ಆಯ್ಕೆ ಕಸರತ್ತು ನಡೆಸುತ್ತಿದ್ದೇವೆ. ಸುಮಾರು ಪ್ರತಿಶತ್ ೮೦ ರಷ್ಟು ಆಟಗಾರರ ಆಯ್ಕೆ ಮೊದಲೇ ಆಗಿತ್ತು ಎಂದು ಅವರು ಹೇಳಿದರು.
ಕೆಲವೇ ಕೆಲವು ಸ್ಥಾನಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಾಗಿತ್ತು. ಈಗ ಆ ಕೆಲಸ ಮಾಡಿದ್ದೇವೆ ಎಂದು ರೋಹಿತ್ ಹೇಳಿದರು.

Author

error: