ಬಿಜೆಪಿ ನಡೆ; ಆರ್ ಎಸ್ ಎಸ್ ಗೆ ಅಸಮಾಧಾನ ? ಏನನ್ನೂ ಬಿಟ್ಟುಕೊಡದ ದತ್ತಾತ್ರಯ ಹೊಸಬಾಳೆ.

ರಾಷ್ಟ್ರ‍ೀಯ ಸ್ವಯಂ ಸೇವಕ ಸಂಘಕ್ಕೆ ಹಿಂದೂ ರಾಷ್ಟ್ರ ಮುಖ್ಯವೇ ಬಿಜೆಪಿ ಮುಖ್ಯವೇ ?
ಈ ಪ್ರಶ್ನೆಯ ಬಗ್ಗೆ ದೇಶದಲ್ಲಿ ಆಂತರಿಕ ಚರ್ಚೆ ನಡೆಯುತ್ತಿದೆ. ಜೊತೆಗೆ ನರೇಂದ್ರ ಮೋದಿ ಮತ್ತು ಅವರ ಪಟಾಲಂ ಬಗ್ಗೆ ಆರ್ ಎಸ್ ಎಸ್ ಗೆ ಅಂತಹ ಸಮಾಧಾನ ಇಲ್ಲಎಂದು ಹೇಳಲಾಗುತ್ತಿದೆ.

ಆರ್ ಎಸ್ ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರನ್ನು ತಣ್ನಗಾಗಿಸುವ ಕೆಲಸವನ್ನು ಮೋದಿ ಮಾಡಿದ್ದುಂಟು. ಅದೇ ರೀತಿ ಸಂಘದಲ್ಲಿ ಗುಂಪುಗಾರಿಕೆಯನ್ನು ಹುಟ್ಟು ಹಾಕಲು ಮೋದಿ ಯತ್ನಿಸಿದ್ದರು ಎಂಬ ಆರೋಪವೂ ಇದೆ.
ಕರ್ನಾಟಕದ ಮೂಲದವರಾದ ದತ್ತಾತ್ರಯ ಹೊಸಬಾಳೆ ಅವರನ್ನು ಬಳಸಿಕೊಂಡು ಯೋಗಿ ಆದಿತ್ಯನಾಥ್ ಅವರನ್ನು ಬದಲಿಸುವ ಯತ್ನವನ್ನು ಮೋದಿ ಅಮಿತ್ ಶಾ ಮಾಡಲು ಹೊರಟಿದ್ದರು. ಆದರೆ ಅದು ಯಶಸ್ವಿಯಾಗಲಿಲ್ಲ.
ಈಗಲೂ ಸಹ ಮೋದಿ ಮತ್ತು ಶಾ ಅವರಿಗೆ ಥ್ರೆಟ್ ಅನ್ನಿಸುವುದು ಯೋಗಿ ಆದಿತ್ಯನಾಥ್ ಅವರಿಂದ. ಅವರ ಶಕ್ತಿ ಕುಂದಿಸಲು ಅಮಿತ್ ಶಾ ತೀವ್ರ ಯತ್ನ ನಡೆಸಿದ್ದರು. ಠಾಕೂರ್ ಸಮುದಾಯದವರಿಗೆ ಟಿಕೆಟ್ ನಿರಾಕರಿಸಲಾಗಿತ್ತು.
ಈಗಲೂ ಉತ್ತರ ಪ್ರದೇಶದ ಬಿಜೆಪಿ ಒಳ ಜಗಳವನ್ನು ನಿರ್ವಹಿಸುವ ಹೊಣೆಗಾರಿಕೆ ದತ್ತಾತ್ರಯ ಹೊದಬಾಳೆ ಅವರ ಮೇಲೆ ಇದೆ.
ಚಾಣಕ್ಷ ರಾಜಕಾರಣಿಯಾಗೀಯೂ ರೂಪಗೊಂಡಿರುವ ದತ್ತಾತ್ರಯ ಹೊಸಬಾಳೆ ಅಗತ್ಯಕ್ಕಿಂತ ಹೆಚ್ಚು ಮಾತನಾಡುವುದಿಲ್ಲ. ಅವರು ಕೇವಲ ಕಾರ್ಯವಾಹ…
ನಿನ್ನೆ ಮತದಾನ ಮಾಡಲು ಬೆಂಗಳೂರಿಗೆ ಬಂದಿದ್ದ ಅವರು ಏನನ್ನೂ ಬಿಟ್ಟುಕೊಡಲಿಲ್ಲ. ದೇಶದ ಭವಿಷ್ಯದ ದೃಷ್ಟಿಯಿಂದ ಇದು ಅತಿ ಮಹತ್ವದ ಚುನಾವಣೆ ಎಂದರು. ಏನು ಮಹತ್ವ ? ಯಾಕೆ ಮಹತ್ವ ? ಎಂಬ ಬಗ್ಗೆ ಅವರು ವಿವರ ನೀಡಲಿಲ್ಲ.
ದೇಶದ ಅಭಿವೃದ್ಧಿಯ ದೃಷ್ಟಿಯಿಂದ ವಿಶ್ವದಲ್ಲಿ ಭಾರತಕ್ಕೆ ಗೌರವ ದೊರಕುವ ದೃಷ್ಟಿಯಿಂದ ಈ ಚುನಾವಣೆ ಮಹತ್ವದ್ದು ಎಂದು ಅವರು ಹೇಳಿದರಾದರೂ ಬಿಜೆಪಿಯ ಹೆಸರನ್ನು ಎತ್ತಲಿಲ್ಲ.
ಈ ದೇಶದಲ್ಲಿ ಎಲ್ಲವೂ ಸಂವಿಧಾನ ಬದ್ಧವಾಗಿ ನಡೆಯುತ್ತಿದೆ ಎಂದು ಹೇಳಿದ ಹೊಸಬಾಳೆ ಬೇರೆ ಏನನ್ನೂ ಹೇಳಲಿಲ್ಲ.

Author

Leave a Reply

Your email address will not be published. Required fields are marked *