ಪ್ರಜ್ವಲ್ ರೇವಣ್ನ ಅತ್ಯಾಚಾರಿ ಎಂದೂ ತಿಳಿದು ಟಿಕೆಟ್ ನೀಡಿ ಪ್ರಚಾರ ಮಾಡಿದ ಮೋದಿ ನೈತಿಕ ಹೊಣೆಗಾರಿಕೆಹೊರಲೇ ಬೇಕು

ಪ್ರಜ್ವಲ್ ರೇವಣ್ಣ ಅವರಿಕೆ ಟಿಕೆಟ್ ನೀಡಿದ ನೈತಿಕ ಹೊಣೆಗಾರಿಕೆ ಮೋದಿಯವರದು.
ಆರ್ ಎಸ್ ಎಸ್, ಬಿಜೆಪಿ ಮತ್ತು ಮೋದಿ ಮಹಿಳಾ ವಿರೋಧಿಗಳು
ಸ್ತ್ಯಾಚಾರಿಗಳಿಗೆ ಬೆಂಬಲ ನೀಡುವುದು ಇವರ ಜಾಯಮಾನ

ಪ್ರಜ್ವಲ್ ರೇವಣ್ನ ಅತ್ಯಚಾರಿ ಎಂದು ಕೊತ್ತಿದ್ದೂ ಅವರಿಗೆ ಟಿಕೆಟ್ ದೊರಕುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಇದರ ನೈತಿಕ ಹೊಣೆಗಾರಿಕೆ ಹೊರಬೇಕು ಎಂದು ಸಾಮಾಜಿಕ ಹೋರಾಟಗಾರ ಶಾಸಕ ಜಿಗ್ನೇಶ್ ಮೇವಾನಿ ಒತ್ತಯಿಸಿದ್ದಾರೆ.
ಬುಧವಾರ ವಿಜಯಪುರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಇಂಥ ವ್ಯಕ್ತಿಯ ಬಗ್ಗೆ ಗೊತ್ತಿದ್ದೂ ಮೋದಿ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದು ಅಸಹ್ಯಕರ ಎಂದು ಅವರು ಹೇಳಿದರು.
ಪ್ರಜ್ವಲ್ ರೇವಣ್ಣನವರದು ಅತ್ಯಂತ ಹೇಯ ಕೃತ್ಯ. ಇಂತವನಿಗೆ ಬಿಜೆಪಿ ಬೆಂಬಲ ನೀಡುತ್ತದೆ. ಪ್ರಧಾನಿ ಮೋದಿ, ಆರ್ ಎಸ್ ಎಸ್ ಮತ್ತು ಬಿಜೆಪಿಗೆ ಮಹಿಳೆಯರ ಬಗ್ಗೆ ಕನಿಷ್ಟ ಗೌರವ ಕೂಡ ಇಲ್ಲ ಎಂಬುದು ಈ ಪ್ರಕರಣದಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿದ ಅವರು ಮಹಿಲಾ ಕುಸ್ತಿಪಟುಗಳ ಹೋರಾಟವನ್ನು ನೆನಪಿಸಿದರು.
ಮಣಿಪುರದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ಬಲ್ಕೀಶ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದವರು ಕೈಲಿನಿಂದ ಹೊರಗೆ ಬಂದಾಗ ಬಿಜೆಪಿ ಶಾಸಕ್ರು ಸಂಭ್ರಮಿಸಿದ್ದು ಮೊದಲಾದ ಘಟನೆಗಳನ್ನು ಗಮನಕ್ಕೆ ತಂದರು.

Author

Leave a Reply

Your email address will not be published. Required fields are marked *