ತಾಜಾ ಸುದ್ದಿ: ಬೆಂಗಳೂರಿಗೆ ಮಳೆ ಎಚ್ಚರಿಕೆ | GTTC ಅರ್ಜಿ ಆರಂಭ | IPL ಫೈನಲ್ ಇಂದು
ಕೊನೆಗೂ ಮಹಿಳೆಯರ ಬೆಂಬಲಕ್ಕೆ ಬಂದಿರಿ. ಧನ್ಯವಾದ ಅಮಿತ್ ಶಾ…
ರೇವಣ್ಣ ಪ್ರಕರಣದಲ್ಲಿ ಮಹಿಳೆಯರಿಗೆ ಬೆಂಬಲ
ಗೃಹ ಸಚಿವರಿಗೆ ಮುಖ್ಯಮಂತ್ರಿ ಶ್ಲಾಘನೆ..
ಆದರೂ ನಿಮ್ಮ ಬಗ್ಗೆ ಸಂಪೂರ್ಣ ನಂಬಿಕೆ ಬರಲಾರದು
ಮಾತು ಮತ್ತು ನಡವಳಿಕೆ ನಡುವೆ ಅಂತರ
ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ಮಹಿಳೆಯರ ಪರವಾಗಿ ಧ್ವನಿ ಎತ್ತಿದ್ದಕ್ಕೆ ಗೃಹ ಸಚಿವ ಅಮಿತ್ ಶಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧನ್ಯವಾದ ಸಲ್ಲಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ ನಿಮ್ಮ ಮಾತು ಒಂದೆಡೆ ನಂಬಿಕೆ ಹುಟ್ಟಿಸುತ್ತದೆ . ಇನ್ನೊಂದೆಡೆ ಅಗ್ಗದ ಮಾತು ಅನ್ನಿಸುತ್ತದೆ ಎಂದು ಅವರು ಹೇಳಿದ್ದಾರೆ,
ದೇಶದಲ್ಲಿ ನಡೆದ ಹಲ್ಕವು ಲೈಂಗಿಕ ಹಗರಣ ಪ್ರಕರಗಳು ಆ ಸಂದರ್ಭದಲ್ಲಿ ಸರ್ಕಾರದ ನಡವಳಿಕೆ ಎಲ್ಲವನ್ನೂ ನೆನಪಿಸಿರುವ ಸಿಎಮ್ ಮಹಿಳಾ ಖುಸ್ತಿ ಪಟುಗಳ ಪ್ರತಿಭಟನೆ,ಬಲ್ಕೀಸ್ ಬಾನು ಪ್ರಕರಣದ ಆರೋಪಿಗಳು ಜೈಲಿನಿಂದ ಹೊರ ಬಂದಾಗ ಬಿಜೆಪಿ ನಾಯಕರು ಸಂಭ್ರಮಿಸಿದ್ದು ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆಯನ್ನು ನೆನಪಿಸಿ ಅವರ ಮಾತಿನ ಬಗ್ಗೆ ಅಪ್ರತ್ಯಕ್ಷ ಅಪನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ.
