ಏಪ್ರಿಲ್ ತಿಂಗಳಿನಲ್ಲಿ ತಿರುಪತಿ ವೆಂಕಟೇಶ್ವರನ ಹುಂಡಿಗೆ 102 ಕೋಟಿ ರೂಪಾಯಿ : 84 ಲಕ್ಷ ಲಾಡು ಮಾರಾಟ !

Tirumala Temple : ಕಳೆದ ಏಪ್ರಿಲ್ ತಿಂಗಳಿನಲ್ಲಿ ತಿರುಪತಿ ವೆಂಕಟೇಶ್ವರನನ್ನು ದರ್ಶನ ಮಾಡಿದ ಭಕ್ತರ ಸಂಖ್ಯೆ ಸುಮಾರು 20 ಲಕ್ಷ. ಇವರಿಂದ ಸಂಗ್ರಹವಾದ ಹಣ 102 ಕೋಟಿ .

ತಿರುಪತಿ : ಜಗತ್ತಿನಲ್ಲಿ ಏನು ಬೇಕಾದರೂ ಆಗಲಿ, ತಿರುಪತಿ ವೆಂಕಟೇಶ್ವರನನ್ನು ದರ್ಶನ ಮಾಡುವವರ ಸಂಖ್ಯೆ ಮಾತ್ರ ಕಡಿಮೆಯಾಗುವುದಿಲ್ಲ. ದೈವ ಭಕ್ತರು ಒಳ್ಳೆಯದಾಗಲಿ ಕೆಟ್ಟದಾಗಲಿ ದೇವರನ್ನು ನೋಡುತ್ತಾರೆ.

ಕೆಟ್ಟದಾದರೆ ಇನ್ನು ಕೆಟ್ತದು ಮಾಡಬೇಡ ಎಂದು ಕೇಳಿಕೊಳ್ಳಲು ಹೋಗುತ್ತಾರೆ. ಒಳ್ಳೆಯದಾದರೆ ಕೃತಜ್ನತೆ ಸಲ್ಲಿಸಲು ತಿರುಪತಿಗೆ ಭೇಟಿ ನೀಡುತ್ತಾರೆ.

ಕಳೆದ ಏಪ್ರಿಲ್ ತಿಂಗಳಿನಲ್ಲಿ ತಿರುಪತಿ ವೆಂಕಟೇಶ್ವರನನ್ನು ದರ್ಶನ ಮಾಡಿದ ಭಕ್ತರ ಸಂಖ್ಯೆ ಸುಮಾರು 20 ಲಕ್ಷ. ಇವರಿಂದ ಸಂಗ್ರಹವಾದ ಹಣ 102 ಕೋಟಿ ಟಿಟಿಡಿಯ ಕಾರ್ಯನಿರ್ವಹಣಾಧಿಕಾರಿ ಎ.ವಿ. ಧರ್ಮ ರೆಡ್ಡಿ ಈ ವಿವರ ನೀಡಿದ್ದಾರೆ.

ಈ ಒಂದು ತಿಂಗಳ ಅವಧಿಯಲ್ಲಿ ಪ್ರಸಾದ ರೂಪದಲ್ಲಿ 84 ಲಕ್ಷ ಲಾಡು ವಿತರಿಸಲಾಗಿದೆ. ವರ್ಷದಿಂದ ವರ್ಷಕ್ಕೆ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ಮೂಲಭೂತ ಸೌಕರ್ಯವನ್ನು ಹೆಚ್ಚಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

Author