ವಿಜಯವಾಡ: ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ವಿಜಯವಾಡದಲ್ಲಿಂದು ಕರ್ನಾಟಕ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ರಾಜ್ಯದ ಹೆಮ್ಮೆಯ ನಂದಿನಿ ಕ್ಷೀರೋತ್ಪನ್ನಗಳನ್ನು ಉಡುಗೊರೆಯಾಗಿ ನೀಡಿದರು.

ವಿಜಯವಾಡದಲ್ಲಿಂದು ನಡೆದ ಎರಡೂ ರಾಜ್ಯಗಳ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳ ಸಭೆಯಲ್ಲಿ ಸಚಿವ ಖಂಡ್ರೆ ಅವರು ನಂದಿನಿ, ಮೊಸರು, ತುಪ್ಪ, ಪೇಡ, ಮೈಸೂರು ಪಾಕ್ ಸೇರಿದಂತೆ ಹಲವು ಉತ್ಪನ್ನಗಳಿದ್ದ ಉಡುಗೊರೆಯ ಗುಚ್ಛವನ್ನು ಪವನ್ ಕಲ್ಯಾಣ್ ಅವರಿಗೆ ನೀಡಿದರು ಮತ್ತು ರೇಷ್ಮೆ ಗೂಡಿನಿಂದ ತಯಾರಿಸಿದ ಮಾಲೆ ಅರ್ಪಿಸುವ ಮೂಲಕ ಕರ್ನಾಟಕದ ಹಿರಿಮೆಯನ್ನು ಸಾರಿದರು.

ನೆರೆ ರಾಜ್ಯಗಳ ನಡುವೆ ಸಹಕಾರ, ಸಹಯೋಗವಿದ್ದರೆ ಎಲ್ಲ ಸಮಸ್ಯೆಗೂ ಪರಿಹಾರ ಸಾಧ್ಯ: ಸಚಿವ ಈಶ್ವರ ಖಂಡ್ರೆ

Author

Leave a Reply

Your email address will not be published. Required fields are marked *