ಬೆಂಗಳೂರು: ಕರ್ನಾಟಕ ಪತ್ರಕರ್ತರ ಸಹಕಾರ ಸಂಘವು ತನ್ನ ಸದಸ್ಯ–ಸಹಸದಸ್ಯರ ಮಕ್ಕಳಿಗಾಗಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲು ಅರ್ಜಿಗಳನ್ನು ಆಹ್ವಾನಿಸಿದೆ. 

ಸೆಪ್ಟೆಂಬರ್ 5 ರ ಒಳಗಾಗಿ ಸಂಘಕ್ಕೆ ತಮ್ಮ ಮಕ್ಕಳ ಅಂಕ ಪಟ್ಟಿಯ ಜೆರಾಕ್ಸ್ ಪ್ರತಿ, ಭಾವಚಿತ್ರ ಹಾಗೂ ದೂರವಾಣಿ ಸಂಖ್ಯೆಯೊಡನೆ ವಿವರವನ್ನು ಸಂಘಕ್ಕೆ ನೀಡಲು ಕೋರಲಾಗಿದೆ. ಸೆಪ್ಟೆಂಬರ್ 22 ರಂದು ಜರುಗುವ ಸರ್ವಸದಸ್ಯರ ಸಭೆಯಲ್ಲಿ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಾಗುವುದು.

2024ನೇ ಇಸವಿಯಲ್ಲಿ ನಡೆದ ಪರೀಕ್ಷೆಯಲ್ಲಿ ಈ ಕೆಳಕಂಡಂತೆ ಶೇಕಡವಾರು ಅಂಕಗಳನ್ನು ಗಳಿಸಿದ “ಸದಸ್ಯ” – “ಸಹಸದಸ್ಯ”ರ ಮಕ್ಕಳು ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಬಹುದು.

ಎಸ್.ಎಸ್.ಎಲ್.ಸಿ., ಶೇಕಡಾ 85ಕ್ಕಿಂತ ಹೆಚ್ಚು, ಪಿ.ಯು.ಸಿ ಹಾಗೂ ಪದವಿ/ಸ್ನಾತಕೋತ್ತರ ಪದವಿ ಗಳಲ್ಲಿ ಶೇಕಡ 80 ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಂಘದ ಎಲ್ಲಾ ಸದಸ್ಯ/ಸಹ ಸದಸ್ಯರ ಮಕ್ಕಳು ಪ್ರತಿಭಾ ಪುರಸ್ಕಾರಕ್ಕೆ ಅರ್ಹರಾಗಿರುತ್ತಾರೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಏನಾದರೂ ಸಾಧನೆ ಮಾಡಿದ್ದಲ್ಲಿ ದಾಖಲೆ ಸಹಿತ ಸಂಘಕ್ಕೆ ಸಲ್ಲಿಸಿದಲ್ಲಿ ಆಡಳಿತ ಮಂಡಳಿ ಪರಿಶೀಲಿಸಿ, ಆಯ್ಕೆಯಾದವರನ್ನು ಅಭಿನಂದಿಸುತ್ತದೆ.

Author

Leave a Reply

Your email address will not be published. Required fields are marked *