ಗದಗ: ತಂಗಿಯ ಜೊತೆ ಪ್ರೀತಿ  ಮಾಡಿದ್ದಕ್ಕೆ ರೊಚ್ಚಿಗೆದ್ದ ಅಣ್ಣ ಪ್ರೀತಿ ಮಾಡಿದ ಯುವಕನಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ ಘಟನೆ  ನಗರದ ಧೋಬಿ ಘಾಟ್ ಬಳಿ ನಡೆದಿದೆ.

ಧಾರವಾಡ ಮೂಲದ ಜಾಫರ್ ಜಮಾದಾರ ಎಂಬ 25 ವರ್ಷದ ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿ ಚಾಕುವಿನಿಂದ ಇರಿಯಲಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಜಾಫರ್ ನನ್ನು ತಕ್ಷಣ ಜಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಸಾವು ಬದುಕಿನ ಮಧ್ಯ ಹೋರಾಟ ನಡೆಸುತ್ತಿದ್ದಾನೆ.

ತೀವ್ರವಾಗಿ ಗಾಯಗೊಂಡ ಜಾಫರ್ ನನ್ನು ರಾತ್ರೋರಾತ್ರಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಕಿಮ್ಸ್ ನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ರುಹಾನ್ ಎಂಬ ಯುವಕನ ತಂಗಿಯನ್ನು ಜಾಫರ್ ಪ್ರೀತಿ ಮಾಡಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಕರೆಸಿ ಬುದ್ಧಿ ಹೇಳಲಾಗಿತ್ತು. ಎಚ್ಚರಿಕೆ ಕೊಟ್ಟಿದ್ದರು ಜಾಫರ್ ಪ್ರೀತಿ ಕಡಿಮೆಯಾಗಿರಲಿಲ್ಲ. ಪ್ರೇಮ ಮುಂದುವರೆದಿತ್ತು. ಇದರಿಂದ ರೊಚ್ಚಿಗೆದ್ದ ರುಹಾನ್ ತನ್ನ ತಂಗಿಯ ಪ್ರಿಯತಮನಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.

ಮೊದಲಿಗೆ ಅ. 6 ರಂದು ರಾತ್ರಿ ಟೀ ಸ್ಟಾಲ್ ಬಳಿ ನಿಂತಿದ್ದ ಜಾಫರ್ ಜೊತೆ ರುಹಾನ್​ಗೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ರುಹಾನ್ ಮನಸ್ಸೋ ಇಚ್ಛೆ ಚಾಕುವಿನಿಂದ ಇರಿದು ಹತ್ಯೆಗೆಯತ್ನಿಸಿದ್ದಾನೆ. ಆರೋಪಿ ರುಹಾನ್ ಹಾಗೂ ದಾದಾಪೀರ್ ಸೇರಿ ಕೊಲೆಗೆ ಯತ್ನಿಸಿದ್ದಾರೆ. ಪ್ರಮುಖ ಆರೋಪಿ ರುಹಾನ್ ಎಸ್ಕೇಪ್ ಆಗಿದ್ದು, 2ನೇ ಆರೋಪಿ ದಾದಾಪೀರ್​ನನ್ನು ಶಹರ ಪೊಲೀಸರು ಬಂಧಿಸಿದ್ದಾರೆ.

Author

Leave a Reply

Your email address will not be published. Required fields are marked *