ಬದಲಾದ ಜೀವನ ಶೈಲಿ, ಆಹಾರ ಪದ್ದತಿಗಳೇ ಹೃದಯ ಸಮಸ್ಯೆಗಳಿಗೆ ಮೂಲ ಕಾರಣ: ಸಚಿವ ದಿನೇಶ್ ಗುಂಡೂರಾವ್

World Heart Day 2024: ಉತ್ತಮ ಹವ್ಯಾಸಗಳನ್ನ ರೂಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಜನರು ಆರೋಗ್ಯದ ಬಗ್ಗೆ ಹೆಚ್ಚು ಜಾಗೃತಿ ವಹಿಸಬೇಕಾಗಿದೆ. ಹಠಾತ್ ಹೃದಯಘಾತಕ್ಕೆ ಒಳಗಾಗುವರನ್ನ ರಕ್ಷಿಸಲು ಆರೋಗ್ಯ ಇಲಾಖೆ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಮೂಲಕ ಪರಿಣಾಮಕಾರಿ ಚಿಕಿತ್ಸೆ ಒದಗಿಸಲಾಗುತ್ತಿದೆ.

ಬೆಂಗಳೂರು : ಇತ್ತೀಚೆಗೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳಲು ಬದಲಾದ ಆಹಾರ ಪದ್ಧತಿ, ಜೀವನ ಶೈಲಿಯೇ ಮೂಲ ಕಾರಣ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಇಂದು ವಿಶ್ವ ಹೃದಯ ದಿನದ ಪ್ರಯುಕ್ತ ಜಾಗೃತಿ ಕಾಲ್ನಡಿಗೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.‌

ಸಾಧ್ಯವಾದಷ್ಟು ಪ್ರೊಸಸ್ ಫುಡ್ ಗಳಿಂದ ದೂರು ಇರಿ, ಹಲವು ಪ್ರೊಸಸ್ ಫುಡ್ ಗಳಿಂದ ಹೆಚ್ಚಿನ ಸಕ್ಕೆರೆ ಅಂಶ ನಮ್ಮ ದೇಹಕ್ಕೆ ಸೇರುತ್ತಿದೆ. ಇದರಿಂದ ಡಯಾಬಿಟಿಸ್ ಸಮಸ್ಯೆಗಳು ತಲೆದೂರಿತ್ತಿವೆ. ಡಯಾಬಿಟಿಸ್, ಹೈಪರ್ ಟೆನ್ಷನ್ ನಂತಹ ಕಾಯಿಲೆಗಳು ಹೃದಯದ ಸಮಸ್ಯೆಗೆ ಮೂಲ ಕಾರಣ ಎಂಬುದನ್ನ ನಮ್ಮ ಜನರು ಅರಿತುಕೊಳ್ಳಬೇಕು ಎಂದರು.

ಉತ್ತಮ ಹವ್ಯಾಸಗಳನ್ನ ರೂಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಜನರು ಆರೋಗ್ಯದ ಬಗ್ಗೆ ಹೆಚ್ಚು ಜಾಗೃತಿ ವಹಿಸಬೇಕಾಗಿದೆ. ಹಠಾತ್ ಹೃದಯಘಾತಕ್ಕೆ ಒಳಗಾಗುವರನ್ನ ರಕ್ಷಿಸಲು ಆರೋಗ್ಯ ಇಲಾಖೆ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಮೂಲಕ ಪರಿಣಾಮಕಾರಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಸುಮಾರು 2 ಲಕ್ಷ ಜನರ ಹೃದಯ ತಪಾಸಣೆ ನಡೆಸಲಾಗಿದ್ದು, 1.81 ಲಕ್ಷ ಜನರ ಇಸಿಜಿ ಮಾಡಿಸಲಾಗಿದೆ ಎಂದರು. ಸರ್ಕಾರಿ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಟೆನೆಕ್ಟೊಪ್ಲೇಸ್ ಚುಚ್ಚುಮದ್ದನ್ನ ಉಚಿತವಾಗಿ ನೀಡುತ್ತಿರುವುದರ ಪರಿಣಾಮ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದರು.

ಬೆಂಗಳೂರಿನಲ್ಲಿ ಇಂದು ತಥಾಗತ್ ಹಾರ್ಟ್ ಸೆಂಟರ್ ಅವರು ಆಯೋಜಿಸಿದ್ದು ಹೃದಯ ಜಾಗೃತಿ ನಡಿಗೆ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

Author

error: