ಕಾಂಗ್ರೆಸ್ ನಾಯಕರಿಗೆ ನಾಲ್ಕು ದಿನದಲ್ಲಿ ‌ನಿರಾಸೆಯಾಗೋದು ಖಚಿತ: ಬಿ ವೈ ವಿಜಯೇಂದ್ರ

B Y Vijayendra : ಚುನಾವಣೆ ಫಲಿತಾಂಶ ಬಂದಮೇಲೆ ಮತ್ತೆ ಈ ಹೇಳಿಕೆ ಪುನರಾವರ್ತನೆ ಮಾಡುತ್ತಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಮತ್ತೆ ಇದೇ ಮಾತನ್ನ ಹೇಳ್ತಾರೆ

ಕಲಬುರ್ಗಿ : ಗ್ಯಾರಂಟಿ ಯೋಜನೆಗಳಿಂದ ನಾವು ರಾಜ್ಯದಲ್ಲಿ ಅತೀ ಹೆಚ್ಚು ಸ್ಥಾನ ಪಡೆಯಲಿವೆ ಅಂದುಕೊಂಡಿರುವ ಕಾಂಗ್ರೆಸ್ ‌ನಾಯಕರಿಗೆ ನಾಲ್ಕೈದು ದಿನದಲ್ಲಿ ನಿರಾಸೆಯಾಗೋದು ಖಚಿತ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಗೆದ್ದರೆ ಅದಕ್ಕೆ ಇವಿಎಂನಲ್ಲಿನ ದೋಷ ಕಾರಣ ಎಂಬ ಡಿಸಿಎಂ ಡಿಕೆ ಶಿವಕುಮಾರ ಹೇಳಿಕೆಗೆ ವಿಜಯೇಂದ್ರ ತಿರುಗೇಟು ನೀಡಿದರು. ‌ಚುನಾವಣೆ ಫಲಿತಾಂಶ ಬಂದಮೇಲೆ ಮತ್ತೆ ಈ ಹೇಳಿಕೆ ಪುನರಾವರ್ತನೆ ಮಾಡುತ್ತಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಮತ್ತೆ ಇದೇ ಮಾತನ್ನ ಹೇಳ್ತಾರೆ ಎಂದು ಲೇವಡಿ‌ ಮಾಡಿದರು.‌

ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷ :

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷ ಆಗಿದೆ. ಒಂದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯ ಅಂತ ಜನಸಾಮಾನ್ಯರು ಮಾತಾಡುತ್ತಿದ್ದಾರೆ.  ಅಭಿವೃದ್ಧಿ ಸಂಪೂರ್ಣ ನಿಂತಿದೆ. ಸಿಎಂ ಸೇರಿ ಯಾವುದೇ ಸಚಿವರು ಒಂದು ಗುದ್ದಲಿ ಪೂಜೆ ಮಾಡಲಿಲ್ಲ ಹೊಸ ಯೋಜನೆಗಳು ಘೋಷಣೆ ಆಗಲಿಲ್ಲ. ಬರಗಾಲ ಪರಿಹಾರ ಕೇಂದ್ರದಿಂದ ಹಣ ಬಂದ್ರು ಸರಿಯಾದ ರೀತಿಯಲ್ಲಿ ಹಣ ರೈತರಿಗೆ ಜಮಾ ಆಗುತ್ತಿಲ್ಲ. ಸಕಾಲಕ್ಕೆ ಮಳೆ ಬಾರದ ರೈತರಿಗೆ ಕೂಡ ಪರಿಹಾರ ಕೋಡುತ್ತಿಲ್ಲ. ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಕಿಡಿಕಾರಿದರು

ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲ..? :

ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ದೇಶದಲ್ಲಿ ಚರ್ಚೆ ಆಗುತ್ತಿದೆ. ಚನ್ನಗಿರಿಯಲ್ಲಿ ನಡೆದ ಘಟನೆ ಅದು ಕೂಡ ಮಟ್ಕಾ ದಂದೆಯಿಂದ ಆಗಿರೋದು. ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ಮಾಡುತ್ತಾರೆ. ರಾಜ್ಯದಲ್ಲಿ ಚುನಾಯಿತ ಸರ್ಕಾರ ಇದೆಯಾ ಅನ್ನೋ ಪ್ರಶ್ನೆ ಹುಟ್ಟುತ್ತಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸುದಿದೆ. ನಿನ್ನೆ ಎಸ್ ಟಿ ನಿಗಮದಲ್ಲಿ ಹಗರಣ ನಡೆದಿದೆ. ಆ ಇಲಾಖೆಯ ಅಕೌಂಟೆಂಟ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಎಂ ಹಾಗೂ ಡಿಸಿಎಂ ಅವರಿಗೆ ಕೇಳುತ್ತೇನೆ ಎಲ್ಲಿಗೆ ಹೊಯಿತು ನಿಮ್ಮ ಕಳಕಳಿ. ಭ್ರಷ್ಟಾಚಾರದ ಪಿತಾಮಹ ಯಾರು ಅಂದ್ರೆ ಕಾಂಗ್ರೆಸ್ ಸರ್ಕಾರ. ಸಚಿವರ ಹೆಸರು ಡೆತ್ ನೋಟ್ ಅಲ್ಲಿ ಬರೆದು ಸತ್ತಿದ್ದಾನೆ. ಯಾವ ಸಚಿವರ ಹೆಸರು ಉಲ್ಲೇಖ ಆಗಿದೆ ಆ ಸಚಿವರ ತಲೆ ದಂಡ ಆಗಬೇಕು. ಸಿಟಿಂಗ್ ಜಡ್ಜ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ಆಗಬೇಕು. ಇಲ್ಲದಿದ್ರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರಜ್ವಲ್ ರೇವಣ್ಣ ಹೇಳಿಕೆಗೆ ಸ್ವಾಗತ :

ಪ್ರಜ್ವಲ್ ರೇವಣ್ಣ 31 ರ ಬಳಿಕ  ರಾಜ್ಯಕ್ಕೆ ಆಗಮಿಸುವ ಕುರಿತು ವಿಡಿಯೋ ವಿಚಾರದ ಕುರಿತು ಮಾತನಾಡಿದ ಅವರು, ಹೇಳಿಕೆ ನಾನು ಗಮನಿಸಿದ್ದೇನೆ, ಅವರು ಬಂದು ತನಿಖೆಗೆ ಒಳಗಾಗುತ್ತೇನೆ ಎಂದಿದ್ದಾರೆ, ಇದಕ್ಕೆ  ಸ್ವಾಗತ ಮಾಡುತ್ತೇನೆ. ತಾವು ಜನಪ್ರತಿನಿಧಿ ಆಗಿರೋರು. ಧೈರ್ಯವಾಗಿ ತನಿಖೆ ಎದುರಿಸಬೇಕು. ಕಳೆದ ಒಂದೂ ತಿಂಗಳಿಂದ ನಾನಾ ರೀತಿಯ ವಿಷಯಗಳು ಹರಿದಾಡಿವೆ. ತನಿಖಾ ಸಂಸ್ಥೆ ಮುಂದೆ ಹಾಜರಾಗಬೇಕು ಎಂದರು.

Author

error: