Karnataka SSLC Result 2024 : ಎಸ್‌ ಎಸ್‌ಎಲ್‌ ಫಲಿತಾಂಶ ಪ್ರಕಟ : ಬಾಲಕೋಟೆಯ ಅಂಕಿತಾ ರಾಜ್ಯಕ್ಕೆ ಟಾಪರ್

Karnataka SSLC Result 2024 : ಉಡುಪಿ ಜಿಲ್ಲೆಯಲ್ಲಿ ಶೇ 94 ರಷ್ಟು ಫಲಿತಾಂಶ  ಬಂದಿದ್ದು ಪ್ರಥಮ ಸ್ಥಾನದಲ್ಲಿದೆ. ಯಾದಗಿರಿ ಕೊನೆಯ ಸ್ಥಾನದಲ್ಲಿದೆ.

ಬೆಂಗಳೂರು : 2023 – 24ನೇ ಸಾಲಿನ  ಕರ್ನಾಟಕದ ಎಸ್‌ ಎಸ್‌ ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಸುಮಾರು 8.69 ಲಕ್ಷ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಲಿದ್ದು, 4,41,910 ಬಾಲಕರು ಮತ್ತು 4,28,058 ವಿದ್ಯಾರ್ಥಿನಿಯರು ಪರೀಕ್ಷೆಯನ್ನು ಬರೆದಿದ್ದರು.

ಉಡುಪಿ ಜಿಲ್ಲೆಯಲ್ಲಿ ಶೇ 94 ರಷ್ಟು ಫಲಿತಾಂಶ  ಬಂದಿದ್ದು ಪ್ರಥಮ ಸ್ಥಾನದಲ್ಲಿದೆ. ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆ ಶೇ 92.12 ಫಲಿತಾಂಶದ ಮೂಲಕ 2ನೇ ಸ್ಥಾನ, ಶಿವಮೊಗ್ಗ ಜಿಲ್ಲೆ ಶೇ 88.67 ಫಲಿತಾಂಶದ ಮೂಲಕ 3ನೇ ಸ್ಥಾನದಲ್ಲಿದೆ, ಕೊಡಗು ಜಿಲ್ಲೆ ಶೇ 88.67 ರಷ್ಟಿದೆ. ಈ ಪೈಕಿ ಬಾಗಲಕೋಟೆ ಜಿಲ್ಲೆಯ ಮುರಾರ್ಜಿ ದೇಸಾಯಿ ಶಾಲೆಯ ಅಂಕಿತಾ ಕೊನ್ನೂರು 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾಳೆ.  

ಕಳೆದ ಮಾರ್ಚ್‌ 25 ರಿಂದ ಏಪ್ರಿಲ್‌ 6 ವರೆಗೆ ಪರೀಕ್ಷೆ ನಡೆಸಲಾಗಿತ್ತು. ವಿದ್ಯಾರ್ಥಿಗಳು ಪಾಸಾಗಲಿ ಅಥವಾ ಫೇಲಾಗಲಿ 3 ಬಾರಿ ಪರೀಕ್ಷೆ ಬರೆಯಲು ಅವಕಾಶವಿದೆ. ಪಾಸಾದರೂ ಅಂಕ ಹೆಚ್ಚಿಸಿಕೊಳ್ಳಲು ಪರೀಕ್ಷೆ-2, ಪರೀಕ್ಷೆ-3 ಬರೆಯಬಹುದು.

ಅತಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳ ವಿವಿರ :

1)ಅಂಕಿತಾ ಬಸಪ್ಪ ಕೊನ್ನೂರು  (625/625)  (ರಾಜ್ಯಕ್ಕೆ ಫ್ರಥಮ)
ದ್ವೀತಿಯ ಸ್ಥಾನ 7 ವಿದ್ಯಾರ್ಥಿಗಳಿಗೆ ಹಂಚಿಕೆಯಾಗಿದೆ:
1) ಮೇದಾ ಪಿ ಶೆಟ್ಟಿ ( ಬೆಂಗಳೂರು) 624/625
2) ಹರ್ಷಿತಾ ಡಿಎಂ (ಮಧುಗಿರಿ)
3)ಚಿನ್ಮಯ್ (ದಕ್ಷಿಣ ಕನ್ನಡ)
4)ಸಿದ್ದಾಂತ್ (ಚಿಕ್ಕೊಡಿ )
5)ದರ್ಶನ್ (ಶಿರಸಿ)
6) ಚಿನ್ಮಯ್ (ಶಿರಸಿ)

ಜಿಲ್ಲಾವಾರು SSLC ಫಲಿತಾಂಶದ ವಿವರ :

ಈ ಬಾರಿಯ ಫಲಿತಾಂಶ ಪ್ರಮಾಣ ಶೇ 73.40 ಆಗಿದ್ದು, ಕಳೆದ ಬಾರಿಗಿಂತ ಶೇ 10ರಷ್ಟು ಕಡಿಮೆ ಆಗಿದೆ. ಕಳೆದ ವರ್ಷ ಶೇ 83.89ರಷ್ಟು ಫಲಿತಾಂಶ ದಾಖಲಾಗಿತ್ತು.

Author

Leave a Reply

Your email address will not be published. Required fields are marked *