ಲಿಂಬೇಹಣ್ಣು ರೇವಣ್ಣ ದೇವರ ಮೊರೆ ಹೋದರು !

ಎಚ್.ಡಿ. ರೇವಣ್ನ ಬಹಳ ಡಿಪರೆಂಟ್ ಕ್ಯಾರಕ್ಟರು. ಅವರು ಮನೆಯಿಂದ ಹೊರಗೆ ಹೋಗುವಾಗ ಮುಹೂರ್ತ ನೋಡಿಯೇ ಹೊರಡೋದು. ಪ್ರತಿಯೊಂದಕ್ಕೂ ಟೈಮು..ಪುರೋಹಿತರು, ಪೂಜಾರಿಗಳು ಕೇಳಿಯೇ ಮುಂದಿನ ಹೆಜ್ಜೆ ಇಡೋರು. ಆದರೂ ಎಲ್ಲೋ ಯಡವಟ್ಟು ಆಗೈತೆ…
ರೇವಣ್ನನ ಮಗ ಪ್ರಜ್ವಲ್ ಜಾತಕ ಹೇಗೈತೆ ಗೊತ್ತಿಲ್ಲ. ಅವನು ಹುಟ್ಟಿದ ಸಮ್ಯಾದಲ್ಲೇ ಮೋಸವಾ ಗೊತ್ತಿಲ್ಲ.

ರೇವಣ್ಣ ಕೈಯಲ್ಲಿ ಸದಾ ಒಂದು ಲಿಂಬೇಹಣ್ಣು ಹಿಡಿದಿಡ್ತಾರೆ. ಈ ಬೇಸಿಗೆ ದಿನಗಳಲ್ಲಿ ಅದೂ ಒಳ್ಳೇದೇಯಾ.. ತುಂಬಾ ಬಿಸಿಲಾದರೆ ಪಾನಕ ಮಾಡಿ ಕುಡೀಬಹುದು. ಈಗ ಈ ಪ್ರಕರಣ ಹೊರಕ್ಕೆ ಬಂದ ಮೇಲೆ ರೇವಣ್ಣನ ಫ್ಯಾಮಿಲಿಗೆಲ್ಲ ಸೆಕೆ ಹೆಚ್ಚು. ತಾಪ ಹೆಚ್ಚು. ಎಷ್ಟು ಕ್ವಿಂಟಲ್ ಲಿಂಬೇಹಣ್ಣು ಬೇಕೋ ಗೊತ್ತಿಲ್ಲ.
ಕೆಲವೌ ತಲೆಗೆ ಹಾಕ್ಬೇಕು. ಇನ್ನು ಕೆಲವರು ಮೈಗೆ..
ಕುಮಾರಣ್ಣ ಅನಿತಕ್ಕ ಮತ್ತ ಅವರ ಮಗಂಗೆ ಲಿಂಬೇಹಣ್ಣ್ ಬೇಕಿಲ್ಲ..ಯಾಕಂದ್ರ ನಿಖೀಲು, ಬೆಂಗಳೂರು ಬಾರ್ ನಲ್ಲಿ ಗಲಾಟೆಯಾಗಿ ಅಪ್ಪನ ಕೈಲಿ ಬಡತ ತಿಂದ ಮೇಲೆ ಸ್ವಲ್ಪ ಬದಲಾದ. ಅಪ್ಪಂಗೆ ಲಿಂಬೇಹಣ್ಣಿನ ಅಗತ್ಯ ಬೀಳದಂಗೆ ನೋಡಿಕಂಡ.
ಹೋಗ್ಲಿ ಮಂಗಳವಾರ ರೇವಣ್ಣ ಮತ್ತು ಬವಾನಿ ರೇವಣ್ಣ ಹೊಳೇನರಸಿಪುರದಲ್ಲಿ ಇದ್ರು. ಅಲ್ಲಿನ ಇದೇ ಮನೇಲಿ ಹೋಮ ಹವನ..
ಯಾವ ಯಾವ ದೇವರನ್ನ ಕೇಳಕಂಡ್ರೋ ಗೊತ್ತಿಲ್ಲ. ಏನ್ ಕೇಳ್ಕಂಡ್ರೋ ಗೊತ್ತಿಲ್ಲ. ಆದರೆ ಪುರೋಹಿತ್ರು ಮಂತ್ರ ಹೇಳಿದ್ದೇ ಹೇಳಿದ್ದು. ಅಗ್ನಿ ತುಪ್ಪ ಸುರಿದಿದ್ದೇ ಸುರಿದಿದ್ದು. ಹೋಮ ಮುಗಿಸಿದ ಮೇಲೆ ರೇವಣ್ನ ಮತ್ತ ಭವಾನಿ ರೇವಣ್ಣ ಬೇರೆ ಬೇರೆ ಕಾರ್ನಲ್ಲಿ ಬೆಂಗಳೂರಿಗೆ ಬಂದ್ರಂತೆ. ಅದೂ ಪುರೋಹಿತರೇ ಹೇಳಿದ್ದು..ಇಬ್ಬರೂ ಸೇರಿ ಹೋದ್ರೆ ಪ್ರಾಬ್ಲೇಮ್ಮು ಅಂತಾ,

ಅಲ್ಲವಾ ಮತ್ತೆ ಇಬ್ಬರೂ ಸೇರಿಯೇ ಪ್ರಜ್ವಲ್ ಹುಟ್ಟಿದ್ದು. ಅದೇ ಈಗ ಪ್ರಾಬ್ಲೆಮ್ಮು. ಈಗ ಇಬ್ಬರೂ ಬೇರೆ ಬೇರೆ ಇರೀ ಅಂದಿರಬೇಕು..
ರೇವಣ್ನ ಭವಾನಿಯಮ್ಮನ ಜೊತೆ ಇರುವಾಗ, ಪ್ರಜ್ವಲ್ ಹುಟ್ಟೋ ವ್ಯವಸ್ಥೆ ಆಗುವಾಗಲೂ ಲಿಂಬೇ ಹಣ್ನು ಹಿಡಿದಿದ್ದ್ರೋ ಏನೋ ಗೊತ್ತಿಲ್ಲ. ಆಗಲೂ ಹಾಸಿಗೆಯಲ್ಲೇ ಲಿಂಬೇ ಹಣ್ಣು ಇರಬೇಕಿತ್ತು.

Author

Leave a Reply

Your email address will not be published. Required fields are marked *