ಮೊದಲಪಂದ್ಯಗಳಲ್ಲಿ ಸೋಲಿನ ಮೇಲೆ ಸೋಲು ಅನುಭವಿಸುತ್ತಿದ್ದ ಆರ್ ಸಿ ಬಿ ಈಗ ಗೆಲುವಿನ ಟ್ರ‍ಾಕ್ ಗೆ ಬಂದಿದೆ. ಆದರೆ ಇದು ಊರು ಕೊಳ್ಳೆ ಹೆಡೆದ ಮೇಲೆ ದಿಡ್ದಿ ಬಾಗಿಲ್ ಹಾಕಿದ ಸ್ತ್ಜಿತಿ.
ಗುಜರಾತ್ ಗೆ ತವರಿನಲ್ಲಿಯೇ ಭಾರಿ ಮುಖಭಂಗ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವಿಕೆಟ್ ಗಳಿಂದ ಭರ್ಜರಿ ಗೆಲುವು

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು.
ಆರಂಭಿಕ ಆಟಗಾರರಾದ ವೃದ್ಧಿಮನ್ ಶಾ ಕೇವಲ 5 ರನ್ ಗಳಿಗೆ ಔಟಾದರೆ, ನಾಯಕ ಶುಭ್ ಮನ್ ಗಿಲ್ 16 ರನ್ ಗಳಿಸಿ ನಿರ್ಗಮಿಸಿದರು. ನಂತರ ಜೊತೆಯಾದ ಸಾಯಿ ಸುದರ್ಶನ್ ಅಜೇಯ 84 ಮತ್ತು ಮೊಹಮ್ಮದ್ ಶಾರೂಖ್ ಖಾನ್ 58 ರನ್ ಗಳ ಜೊತೆಯಾಟದಿಂದ ರನ್ ಹೆಚ್ಚಾಯಿತು. ನಂತರ ಬಂದ ಡೇವಿಡ್ ಬಂದ ಡೇವಿಡ್ ಮಿಲ್ಲಿರ್ 26 ರನ್ ಗಳಿಸಿದರು.
ರಾಯಲ್ ಚಾಲೆಂಜರ್ಸ್ ಪರ ಸ್ವಪ್ನಿಲ್ ಸಿಂಗ್, ಮೊಹಮ್ಮದ್ ಸಿರಾಜ್, ಗ್ಲೇನ್ ಮ್ಯಾಕ್ಸ್ ವೆಲ್ ತಲಾ ಒಂದೊಂದು ವಿಕೆಟ್ ಪಡೆದರು. ಗುಜರಾತ್ ಟೈಟನ್ಸ್ ನೀಡಿದ 201 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಕೊಹ್ಲಿ ಅಜೇಯ 70,ಫಾಪ್ ಡು ಪ್ಲೆಸಿಸ್ 24, ವಿಲ್ ಜಾಕ್ಸ್ ಭರ್ಜರಿ ಶತಕ ಸಿಡಿಸಿ ಭರ್ಜರಿ 6 ವಿಕೆಟ್ ಗಳಿಂದ ಆರ್ ಸಿಬಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ವಿಲ್ ಜಾಕ್ಸ್ ಫ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.

Author

Leave a Reply

Your email address will not be published. Required fields are marked *