ಮಂಗಳೂರಿನಲ್ಲಿ ಪ್ರಧಾನಿ ರೋಡ್ ಶೋ ಸಮಯ ಬದಲು; ಸೂರ್ಯ ಮುಳುಗಿದ ಮೇಲೆ ರಸ್ತೆಗೆ ಇಳಿಯಲಿದ್ದಾರೆ ಮೋದಿ

PM Modi Road Show; ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ರಾಜ್ಯದ ಮೈಸೂರು ಮತ್ತು ಮಂಗಳೂರಿನಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ

ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ರಾಜ್ಯದ ಮೈಸೂರು ಮತ್ತು ಮಂಗಳೂರಿನಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ಮೋದಿ ಅವರ ಮಂಗಳೂರಿನ ರೋಡ್ ಶೋ ಸಮಯ ಈಗ ಬದಲಾಗಿದೆ.

ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಚಿವ ಸುನಿಲ್ ಕುಮಾರ್, ನಾಳೆ ರಾತ್ರಿ 7.30 ಕ್ಕೆ ಪ್ರಧಾನಿ ಮಂಗಳೂರು ಅಂತಾರಾಷ್ಟ್ರ‍ೀಯ ವಿಮಾನ ನಿಲ್ದಾಣಕ್ಕೆ ಬಂದು ಇಳಿಯಲಿದ್ದಾರೆ. ಅಲ್ಲಿಂದ ನಾರಾಯಣಗುರು ವೃತ್ತಕ್ಕೆ ತೆರಳಿ ಮಾಲಾರ್ಪಣೆ ಮಾಡುವರು ಎಂದರು.

ಮಾಲಾರ್ಪಣೆಯ ನಂತರ ರೋಡ್ ಶೋ ಪ್ರಾರಂಭವಾಗಲಿದೆ, ಲಾಲ್ ಬಾಗ್, ಬಳ್ಳಾಲ್ ಬಾಗ್, ಪಿವಿಎಸ್ ವೃತ್ತದ ಮೂಲಕ ಭಾರತ್ ವೃತ್ತದಲ್ಲಿ ರೋಡ್ ಶೋ ಕೊನೆಗೊಳ್ಳಲಿದೆ.

ಕಾರ್ಯಕರ್ತರು ಸಂಜೆ 6.30 ರ ಒಳಗೆ ರಸ್ತೆಯ ಇಕ್ಕೆಲೆಗಳಲ್ಲಿ ಬಂದು ನಿಂತುಕೊಳ್ಳಬೇಕು ಎಂದು ಅವರು ಹೆಳಿದರು.

Author

error: