ಮುಂಬೈ : ಮನುಷ್ಯ ಸೋತಾಗ ಅಸಹಾಯಕ ನಾಗುತ್ತಾನೆ. ದೇವರ ಮೊರೆ ಹೋಗ್ತಾನೆ. ದೇವರು ಏನ್ ಮಾಡ್ತಾನೆ ಅನ್ನೋದಕ್ಕಿಂತ ಇದು ಒಂದು ರೀತಿಯ ಆತ್ಮ ವಿಶ್ವಾಸವನ್ನು ನೀಡುತ್ತೆ. ಮುಂಬೈ ಇಂಡಿಯನ್ ತಂಡದ ನಾಯಕ ಹಾರ್ದಿಕ ಪಾಂಡ್ಯ ಸ್ಥಿತಿ ಕೂಡ ಹಾಗೇ ಆಗಿದೆ.
ಗುಜರಾತ್ ತಂಡದಲ್ಲಿದ್ದಾಗ ಅದ್ಭುತವಾಗಿ ಆಡುತ್ತಿದ್ದವರು ಪಾಂಡ್ಯ. ಸರಿ ಅಂಬಾನಿ ಮಾತು ಕೇಳಿ ಮುಂಬೈ ತಂಡಕ್ಕೆ ಬಂದರು. ನಾಯಕರೂ ಆದರು. ಆದರೆ ಮುಂಬೈ ತಂಡಕ್ಕೆ ಐದು ಬಾರಿ ಕಪ್ ತಂದು ಕೊಟ್ಟ ರೋಹಿತ್ ಶರ್ಮಾ ಸ್ಥಿತಿ ? ಅವರ ಅಭಿಮಾನಿಗಳ ಕಥೆ ?.
ಒಂದೆಡೆ ಹೊಸ ನಾಯಕತ್ವದಲ್ಲಿ ಮುಂಬೈ ಇಂಡಿಯನ್ ಸೋಲತೊಡಗಿತು. ಇನ್ನೊಂದೆಡೆ ರೋಹಿತ್ ಅಭಿಮಾನಿಗಳು ಮೈದಾನದಲ್ಲೇ ಕೀಟಲೆ ಮಾಡತೊಡಗಿದರು.
ಜೊತೆಗೆ ತಂಡ ಎರಡಾಗಿ ಒಡೆದು ಹೋಯಿತು. ಕೆಲವು ಆಟಗಾರರು ರೋಹಿತ್ ಜೊತೆ ನಿಂತರು. ಇನ್ನೂ ಕೆಲವರು ಪಾಂಡ್ಯ ಜೊತೆ ನಿಂತರು.
ಇದರಿಂದಾಗಿ ತಲೆ ಕೆಡಿಸಿಕೊಂಡವರು ಹಾರ್ಧಿಕಪಾಂಡ್ಯ. ಮನುಷ್ಯರ ಸಹವಾಸ ಸಾಕಪ್ಪ ಎಂದು ದೇವರ ಮೊರೆ ಹೋದರು.. ಸೋಮನಾಥನ ಕಾಲಿಗೆ ಬಿದ್ದರು. ಪ್ರಾರ್ಥನೆ ಸಲ್ಲಿಸಿದರು. ಈಗ ಆ ದೇವರಾದರೂ ಪಾಂಡ್ಯ ನೆರವಿಗೆ ಬರಬಹುದೆ ?
