ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಮೋದಿ ಮತ್ತೊಮ್ಮೆ ವಾತಾವರಣ ನೋಡಿದ ವಿಜಯೇಂದ್ರ !

ಬೆಂಗಳೂರು : ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಮೋದಿ ಮತ್ತೊಮ್ಮೆ- ವಿಜಯೇಂದ್ರ ಕಂಡ ವಾತಾವರಣ..
ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರ ಪ್ರಕಾರ ಎಲ್ಲ 28 ಕ್ಷೇತ್ರಗಳಲ್ಲೂ ಮೋದಿ ಮತ್ತೊಮ್ಮೆ ಎಂಬ ವಾತಾವರಣ ಇದೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂಸದೆ ಸುಮಲತಾ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮತ್ತೆ ಬಿಜೆಪಿ ಬರುವ ಆಶಾವಾದವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಹಲವರು ಬಿಜೆಪಿಯನ್ನು ಸೇರಿದರು. ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಅವರೂ ಇವರಲ್ಲಿ ಇದ್ದರು.

ದೇಶದ ಸುರಕ್ಷತೆ ಮತ್ತು ಭದ್ರತೆಗಾಗಿ ಸುಮಲತಾ ಬಿಜೆಪಿ ಸೇರಿದ್ದಾರೆ ಎಂದು ಹೇಳಿದ ವಿಜಯೇಂದ್ರ ಈ ಬಗ್ಗೆ ಹೆಚ್ಚಿನ ವಿವರಣೆ ನೀಡಲಿಲ್ಲ. ಸುಮಲತಾ ಬಿಜೆಪಿ ಸೇರುವುದರಿಂದ ದೇಶದ ಭದ್ರತೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಭ ಬಗ್ಗೆಯೂ ಅವರ ಭಾಷಣದಲ್ಲಿ ವಿವರಣೆ ಇರಲಿಲ್ಲ.

2047ರ ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲಿದೆ. ನಾವು ಇದಕ್ಕೆ ಸಹಕಾರ ನೀಡಬೇಕು. ನನಗಂತೂ ನನ್ನ ಭವಿಷ್ಯಕ್ಕಿಂತ ನನ್ನ ದೇಶ ಜಿಲ್ಲೆ ರಾಜ್ಯ ಮುಖ್ಯ ಎಂದು ಹೇಳಿದರು.

Author

error: