ಶಿವಮೊಗ್ಗ: ಪಾರ್ಕ್ ನಲ್ಲಿ ವಾಕಿಂಗ್ ಮಾಡುತ್ತಿದ್ದ 20 ವರ್ಷದ ಹುಡುಗನೊಬ್ಬ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ಘಟನೆ ನಗರದ ಪ್ರವಾಸಿ ಮಂದಿರದ ಬಳಿ ನಡೆದಿದೆ. ಈತ ಶಿವಮೊಗ್ಗ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯಾಗಿದ್ದು ಪೃಥ್ವಿರಾಜ್ ಎಂದು ಗುರುತಿಸಲಾಗಿದೆ.
ಪಾರ್ಕ್ ನಲ್ಲಿ ಕುಸಿದು ಬಿದ್ದಿದ್ದನ್ನು ನೋಡಿದ ಮೋಹನ್ ಎಂಬ ಮತ್ತೊಬ್ಬರು ಪೃಥ್ವಿರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಪೃಥ್ವಿರಾಜ್ ಅವರು ಮೃತಪಟ್ಟಿದ್ದಾರೆಂದು ಹೇಳಲಾಗಿದೆ. ಇವರು ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಸಿಮ್ಸ್)ಯ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದುದಾಗಿ ತಿಳಿದು ಬಂದಿದೆ.
ಇವರು ಶಿವಮೊಗ್ಗ ನಗರದ ನಿವಾಸಿ ಔಷಧ ಸಗಟು ವ್ಯಾಪಾರಿಯಾದ ಮುತ್ತಣ್ಣ ಎಂಬುವರ ಪುತ್ರ. ಇವರ ಸಹೋದರ ಪಾರ್ಥ ದೆಹಲಿಯಲ್ಲಿದ್ದಾರೆ.
