ಕೋಲಾರ : ಬರಹಗಾರ, ಚಿಂತಕ ಸಾಮಾಜಿಕ ಹೋರಾಟಗಾರ ಕೋಟಿಗಾನಹಳ್ಳಿ ರಾಮಯ್ಯ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಈಗ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಣ್ಣಿನ ಮೇಲೆ ಗಾಯವಾಗಿದ್ದು ಹೆಚ್ಚಿನ ಪರೀಕ್ಷೆ ನಡೆಸಲಾಗುತ್ತಿದೆ.
ರಾಮಯ್ಯ ಕೋಲಾರದ ಅಂತರಗಂಗೆ ಸಮೀಪದ ಪಾಪರಾಜನಹಳ್ಳಿಯಲ್ಲಿ ಸಂತರಂತೆ ಬದುಕುತ್ತಿದ್ದವರು. ಅಲ್ಲಿಯೇ ಸಾಂಸ್ಕೃತಿಕ ಜಗತ್ತನ್ನು ಕಟ್ಟಿದವರು. ನಾಟಕ, ಸಾಹಿತ್ಯ, ಚರ್ಚೆ, ಹೋರಾಟ ಎಲ್ಲವೂ ಅವರ ಬದುಕಿನ ಭಾಗವಾಗಿತ್ತು.
ಇಂದು ಬೆಳಿಗ್ಗೆ ಪಾಪರಾಜನಹಳ್ಳಿಯ ದೇವಾಲಯದಲ್ಲಿ ದೊಡ್ದದಾಗಿ ಮೈಕ್ ಹಾಕಲಾಗಿತ್ತು. ಇದರಿಂದ ತೋದರೆಯಾಗುತ್ತದೆ ಎಂದು ಅವರು ಮನವಿ ಮಾಡಿದರು. ಇದಕ್ಕೆ ರೊಚ್ಚಿಗೆದ್ದ ಕೆಲವರು ರಾಮಯ್ಯ ಮತ್ತು ಅವರ ಮಗನ ಮೇಲೆ ದಾಳಿ ನಡೆಸಿದರು ಎಂದು ಹೇಳಲಾಗಿದೆ.
ರಾಮಯ್ಯ ಎಂತಹ ಸ್ವಾಭಿಮಾನಿ ಎಂದರೆ ತಾವೇ ಕಟ್ಟಿ ಬೆಳೆಸಿದ ಸಂಸ್ಥೆಯನ್ನು ಹಾಗೆ ಬಿಟ್ಟು ಎದ್ದು ಬಂದವರು.
ಕೋಲಾರ ಗ್ರಾಮಾಂತರ ಪೋಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಈ ಕೃತ್ಯ ಎಸಗಿದವರನ್ನು ಬಂಧಿಸಿದ್ದಾರೆ. ಇವರಿಗೆ ಕಠಿಣ ಶಿಕ್ಷೆಯಾಗಲಿ. ರಾಮಯ್ಯ ಆಸ್ಪತ್ರೆಯಿಂದ ಹೊರಗೆ ಬರಲಿ.
