ತಾಜಾ ಸುದ್ದಿ: ಬೆಂಗಳೂರಿಗೆ ಮಳೆ ಎಚ್ಚರಿಕೆ | GTTC ಅರ್ಜಿ ಆರಂಭ | IPL ಫೈನಲ್ ಇಂದು
ಬರಗಾಲ ಪರಿಹಾರ ಕೇಂದ್ರಕ್ಕೆ ನೋಟಿಸು; ಕರ್ನಾಟಕದ ನ್ಯಾಯಬದ್ಧ ಬೇಡಿಕೆಗೆ ನ್ಯಾಯಾಲಯದಿಂದ ಸಿಗಬಹುದೇ ಪರಿಹಾರ ?
ಬರಗಾಲದಿಂದ ತತ್ತಿರುಸುವ ರಾಜ್ಯಕ್ಕೆ ಪರಿಹಾರ ಕೊಡಿಸಿ ಎಂದು ಕರ್ನಾಟಕ ಸರ್ಕಾರ ಮಾಡಿದ್ದ ಮನವಿಗೆ ಸಂಬಂಧಿಸಿದಂತೆ ಕೆಂದ್ರ ಸರ್ಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ನೋಟೀಸು. ನೀಡಿದೆ. ಮುಂದಿನ ೧೫ ದಿನಗಳೊಳಗೆ ಉತ್ತರ ನೀಡುವಂತೆಯೂ ಸೂಚಿಸಿದೆ.
ಕರ್ನಾಟಕದ ದೃಷ್ಟಿಯಿಂದ ಇದೊಂದು ಅಶಾದಾಯಕ ಬೆಳವಣಿಗ್
ಕಳೆದ ವರ್ಷದ ಅಕ್ಟೋಬರ್ ನಲ್ಲೇ ಬರಗಾಲ ಪರಿಹಾರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿತ್ತು. ಅದೇ ತೀಂಗಳು ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ರಾಜ್ಯಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅಧ್ಯಯನ ನಡೆಸಿತ್ತು. ಆದರೆ ಮುಂದೇನೂ ಆಗಲಿಲ್ಲ.
ಇದಾದ ಮೇಲೆ ಕರ್ನಾಟಕ ಸರ್ಕಾರ ದೆಹಲಿಅ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿದರೂ ಕೇಂದ್ರ ಸರ್ಕಾರ ಕಣ್ಣೂ ತೆರೆಯಲಿಲ್ಲ.
ಇದಕ್ಕೆ ಬದಲಾಗಿ ತಾಂತ್ರಿಕ ಕಾರಣಗಳನ್ನು ನೀಡಿ ಕರ್ನಾಟಕ ಸರ್ಕಾರದ ಮೇಲೆ ಗೂಬೆ ಕೂಡ್ರಿಸುವ ಕೆಲಸವನ್ನು ಕೇಂದ್ರ ಸಚಿವರು ಪ್ರಾರಂಭಿಸಿತು. ಅಕ್ಟೋಬರ್ ತಿಂಗಳಿನಲ್ಲೇ ಪರಿಹಾರಕ್ಕೆ ಮನವಿ ಮಾಡಿದ್ದರೂ ಮನವಿ ನೀಡಿದ್ದು ೩ ತಿಂಗಳು ವಿಳಂಬವಾದ್ದರಿಂದ ಪರಿಹಾರ ನೀಡಿಲ್ಲ ಎಂದು ಕೆಂದ್ರ ಗೃಹ ಸಚಿವರು ಹೇಳಿಕೆ ನೀಡಿದರು.
ಅದರಂತೆ ಕರ್ನಾಟಕದಿಂದ ರಾಜ್ಯ ಸಭೆಗೆ ಹೋಗಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ಕೊಡುವುದನ್ನೆಲ್ಲ ಕೊಟ್ಟಿದ್ದೇವೆ ಎಂದು ಹೇಳಿ ಸುಮ್ಮನಾದರು.
ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ನಡೆಸುತ್ತಿದ್ದ ಈ ಹೋರಾಟದಲ್ಲಿ ಮಾಧ್ಯಮಗಳೂ ಈ ನೈಜ ಬೇಡಿಕೆಗೆ ಪರವಾಗಿ ನಿಲ್ಲಲಿಲ್ಲ. ಕರ್ನಾಟಕ್ಕೆ ಬರಗಾಲ ಪರಿಪಾರ ನೀಡದೇ ಕೇಂದ್ರ ಅನ್ಯಾಯ ಮಾಡಿದೆ ಎಂಬುದು ಮಾಧ್ಯಮದ ಬಾಯಲ್ಲಿ ಬಂದಿಲ್ಲ.
ಈ ಹಂತದಲ್ಲಿ ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗುವ ತೀರ್ಮಾನ ಕೈಗೊಂಡಿತು. ಈಗ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ನೋಟೀಸು ನೀಡಿರುವುದು ರಾಜ್ಯದ ದೃಷ್ಟಿಯಿಂದ ಆಶಾದಾಯಕ ಅಂಶ.
