ಜಿಂಬಾಬ್ವೆಯಲ್ಲಿ ಸೇನಾಕ್ರಾಂತಿ: ರಾಬರ್ಟ್​ ಮುಗಾಬೆ ಆಡಳಿತ ಅಂತ್ಯ ಸಾಧ್ಯತೆ

ಹರಾರೆ: ಜಿಂಬಾಬ್ವೆಯಲ್ಲಿ ಸೇನಾ ಕ್ರಾಂತಿಯ ವದಂತಿ ಹಬ್ಬಿದ್ದು, ರಾಜಧಾನಿ ಹರಾರೆಯಲ್ಲಿ ಸರ್ಕಾರದ ಪ್ರಸಾರ ಇಲಾಖೆಯ ಕಚೇರಿಯನ್ನು ಸೇನೆ ವಶಪಡಿಸಿಕೊಂಡಿದೆ. ಇಲಾಖೆ ಸೇನೆಯ ವಶವಾಗಿರುವುದರ ಕುರಿತು ಸ್ಪಷ್ಟೀಕರಣ ನೀಡಿರುವ ಪ್ರಸಾರ ಇಲಾಖೆ ವಕ್ತಾರ, ಮಿಲಿಟರಿ ದಂಗೆಯನ್ನು ನಿರಾಕರಿಸಿದ್ದು, ಆದಷ್ಟು ಶೀಘ್ರವಾಗಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ಸೇನೆ, ಕಾರ್ಯಾಚರಣೆ ಮುಗಿದ ನಂರವಷ್ಟೇ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತದೆ ಎಂದಿದ್ದಾರೆ.

ಹರಾರೆಯ ಜಿಂಬಾಬ್ವೆ ಪ್ರಸಾರ ನಿಗಮದ ಸಿಬ್ಬಂದಿ ಮತ್ತು ಮಾನವ ಹಕ್ಕು ಹೋರಾಟದ ಸಂಘಟನೆಯ ಸದಸ್ಯರು ನಿಗಮ ಸೇನೆಯ ವಶವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ನಿಗಮದ ಸಿಬ್ಬಂದಿಯ ಪ್ರಕಾರ, ಕಚೇರಿಯ ಸಿಬ್ಬಂದಿ ಮೇಲೆ ದಾಳಿ ನಡೆಸಿ ಕಚೇರಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿದೆ.

ವರದಿಯ ಪ್ರಕಾರ, ಹರಾರೆಯ ರಸ್ತೆಗಳಲ್ಲಿ ಮೂರು ಬಾರಿ ಸ್ಫೋಟಗಳು ಸಂಭವಿಸಿವೆ. ಅಧ್ಯಕ್ಷ ರಾಬರ್ಟ್​ ಮುಗಾಬೆಯವರ ಮನೆಯನ್ನು ಕೂಡ ಸೇನೆ ಸುತ್ತುವರೆದಿದೆ. ಇನ್ನು ಸೇನೆಯ ಯುದ್ಧ ಟ್ಯಾಂಕ್​​ಗಳು ಸೇರಿದಂತೆ ವಾಹನಗಳು ಸುತ್ತುವರೆದಿರುವ ವೀಡಿಯೋಗಳು ಕೂಡ ಲಭ್ಯವಾಗಿವೆ.

ನವೆಂಬರ್​ನಲ್ಲಿ ಅಧ್ಯಕ್ಷ ರಾಬರ್ಟ್​​​ ಮುಗಾಬೆಯವರು ಉಪಾಧ್ಯಕ್ಷ ಎಮರ್ಸನ್​ ಅವರನ್ನು ವಜಾಗೊಳಿಸಿದ್ದರು. ಕಳೆದ ಕೆಲವು ದಶಕಗಳಿಂದ ಎಮರ್ಸನ್ ಅಧಿಕಾರದಲ್ಲಿದ್ದರು. 1970ರ ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ಎಮರ್ಸನ್ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಪ್ರದೀಪ್ ಮಾಲ್ಗುಡಿ ನ್ಯಾಷನಲ್ ಡೆಸ್ಕ್ ಸುದ್ದಿ ಟಿವಿ

0

Leave a Reply

Your email address will not be published. Required fields are marked *