ಟೀಮ್ ಇಂಡಿಯಾದಲ್ಲಿದ್ದಾರೆ ಚಹಾಲ್​ ಮಾರ್ಗದರ್ಶಕರು..!

ಟೀಮ್ ಇಂಡಿಯಾದಲ್ಲಿ ಯುವ ಆಟಗಾರರದ್ದೇ ದರ್ಬಾರ್. ಸ್ಪಿನ್ ಮೂಲಕ ಮೋಡಿ ಮಾಡ್ತಿರೋ ಯುವ ಸ್ಪಿನ್ನರ್ ಯಜುವೇಂದ್ರ ಚಹಾಲ್ ಟೀಮ್ ಇಂಡಿಯಾದ ಖಾಯಂ ಪ್ಲೇಯರ್ ಆಗಿದ್ದಾರೆ. ಆದ್ರೆ, ಚಹಾಲ್ ಯಶಸ್ಸಿನ ಹಿಂದೆ ಇಬ್ಬರು ಸ್ಟಾರ್ ಕ್ರಿಕೆಟಿಗಳಿದ್ದಾರಂತೆ.ಸದ್ಯ ಟೀಮ್ ಇಂಡಿಯಾದಲ್ಲಿ ಯುವ ಆಟಗಾರರದ್ದೇ ದರ್ಬಾರ್. 2019ರ ವಿಶ್ವಕಪ್ ದೃಷ್ಠಿಯಿಂದ ತಂಡವನ್ನ ಕಟ್ಟೋ ಜವಾಬ್ದಾರಿ ಇದೀಗ ಬಿಸಿಸಿಐ ಮೇಲಿದೆ. ಹೀಗಾಗಿ ಸದ್ಯ ಯುವ ಆಟಗಾರರನ್ನ ತಯಾರಿ ಮಾಡ್ತಿರೋ ಬಿಸಿಸಿಐ ಹೆಚ್ಚು-ಹೆಚ್ಚು ಪಂದ್ಯಗಳನ್ನ ಆಡೋ ಅವಕಾಶ ನೀಡ್ತಿದೆ.

ಸದ್ಯ ಕೊಹ್ಲಿ ಪಡೆಯಲ್ಲಿ ಯುವ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ತನ್ನ ಕೈಚಳಕದ ಮೂಲಕ ಸಖತ್ ಮೋಡಿ ಮಾಡ್ತಿದ್ದಾನೆ. ಅಲ್ದೇ. ಈತನ ಸ್ಪಿನ್ ಜಾದೂಗೆ ತಲೆಬಾಗದವರೇ ಇಲ್ಲ. ಐಪಿಎಲ್​ ಮೂಲಕ ಸಖತ್ ಮೋಡಿ ಮಾಡಿದ ಚಹಾಲ್ ಕಳೆದೊಂದು ವರ್ಷದಿಂದ ಟೀಮ್ ಇಂಡಿಯಾದಲ್ಲಿ ಸಂಚಲನ ಮೂಡಿಸ್ತಿದ್ದಾರೆ. ಆದ್ರೀಗ ಚಹಾಲ್ ತಮ್ಮ ಸಕ್ಸಸ್ ಬಗ್ಗೆ ರಿವಿಲ್ ಮಾಡಿದ್ದಾರೆ. ತಾವೂ ತಂಡದಲ್ಲಿ ಸ್ಥಿರ ಪ್ರದರ್ಶನ ನೀಡ್ತಿರೋದ್ರ ಹಿಂದೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇದ್ದಾರೆ ಎಂದು ಹೇಳಿದ್ದಾರೆ. ಆನ್​ ಫೀಲ್ಡ್​ನಲ್ಲಿ ಈ ಇಬ್ಬರು ಸ್ಟಾರ್​ಗಳು ನನಗೆ ಮಾರ್ಗದರ್ಶನ ನೀಡ್ತಾರೆ.

ಇವರಿಂದಲೇ ನಾನು ಕ್ರಿಕೆಟ್​ನಲ್ಲಿ ಇಷ್ಟು ಬೇಗ ಯಶಸ್ಸು ಸಾಧಿಸಲು ಸಾಧ್ಯವಾಯ್ತು ಅಂತಾರೆ ಚಹಾಲ್. ಅಲ್ದೇ, ಆನ್​ ಫೀಲ್ಡ್​ನಲ್ಲಿ ನಾಯಕ ವಿರಾಟ್ ಗೆಳೆಯನಂತೆ ಅವರು ಆತ್ಮ ವಿಶ್ವಾಸ ತುಂಬಿದ್ರೆ, ಇತ್ತ ಮಹೇಂದ್ರ ಸಿಂಗ್ ಧೋನಿ ಮೆಂಟರ್​ರಂತೆ ನನಗೆ ಮಾರ್ಗದರ್ಶನ ಮಾಡ್ತಾರೆ. ವಿಕೆಟ್ ಹಿಂದೆ ಕೈಚಳಕ ಮಾಡೊ ಮಾಹಿ ನನಗೆ ಬೌಲಿಂಗ್​ ಯಾವ ರೀತಿ ಮಾಡಬೇಕು ಎಂಬ ಸಲಹೆ ನೀಡ್ತಾರೆ.ಹೀಗಾಗಿ ಇವರಿಬ್ಬರು ನನ್ನ ಕ್ರಿಕೆಟ್ ಕರಿಯರ್ ಇಷ್ಟು ಪ್ರಕಾಶಮಾನವಾಗಲು ಕಾರಣವಾಗಿದ್ದಾರೆ. ಇವರಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಚಹಾಲ್ ಹೇಳಿದ್ದಾರೆ. ಒಟ್ನಲ್ಲಿ ಸಿಮೀತ ಓವರ್​ಗಳಲ್ಲಿ ಮ್ಯಾಜಿಕ್ ಮಾಡ್ತಿರೋ ಚಹಾಲ್ ಸೂಪರ್ ಸ್ಪೆಲ್ ಮೂಲಕ ಎಲ್ಲರ ಮನಗೆದ್ದಿದ್ದಾರೆ.
ಸ್ಪೋರ್ಟ್ಸ್ ಬ್ಯೂರೋ ಸುದ್ದಿಟಿವಿ

0

Leave a Reply

Your email address will not be published. Required fields are marked *